»   » ಎಟಿಎಂ ಕಾರ್ಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್

ಎಟಿಎಂ ಕಾರ್ಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್

Posted By:
Subscribe to Filmibeat Kannada
ಎ ಟಿ ಎಂ ಕಾರ್ಡ್ ನಲ್ಲಿ ದರ್ಶನ್ ಪುನೀತ್ ರಾಜ್ ಕುಮಾರ್ ಪ್ರತ್ಯಕ್ಷ | Filmibeat Kannada

ಅಭಿಮಾನಿಗಳ ಅಭಿಮಾನ ಯಾವ ಮಟ್ಟ ತಲುಪುತ್ತದೆ ಎಂದು ಹೇಳಲು ಅಸಾಧ್ಯ. ಫ್ಯಾನ್ಸ್ ತಮ್ಮ ಸ್ಟಾರ್ ಗಳ ಮೇಲಿನ ಪ್ರೀತಿಯನ್ನ ತಮ್ಮದೇ ಆದ ಸ್ಟೈಲ್ ನಲ್ಲಿ ತೋರಿಸಿಕೊಳ್ಳುತ್ತಾರೆ. ಹುಟ್ಟುಹಬ್ಬವನ್ನ ಆಚರಣೆ ಮಾಡುವುದು, ಹಚ್ಚೆ ಹಾಕಿಸಿಕೊಳ್ಳುವುದು, ಸ್ಟಾರ್ ಬರ್ತಡೇಗಳ ದಿನ ದಾನ ಮಾಡುವುದು ಹೀಗೆ ಸಾಕಷ್ಟು ರೀತಿಯಲ್ಲಿ ತಮ್ಮ ಅಭಿಮಾನವನ್ನ ತೋರಿಸುತ್ತಾರೆ.

ಈಗ ಕಾಲ ಬದಲಾಗಿದೆ. ಅಭಿಮಾನಿಗಳು ಬದಲಾಗಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ಗಳ ಫೋಟೋಗಳನ್ನ ತಾವು ಬಳಸುವ ಎಟಿಎಂ ಕಾರ್ಡ್ ನಲ್ಲಿ ಹಾಕಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿದೆ.

ಮ್ಯೂಸಿಯಂ ಆಯ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಳೆ ಮನೆ ?

fans started putting Puneeth Rajkumar and Darshan photos on an ATM

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಈ ರೀತಿಯ ಕಾರ್ಡ್ ಡಿಸೈನ್ಸ್ ಮಾಡಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫೆವರೆಟ್ ಸ್ಟಾರ್ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನ ತಮ್ಮ ಎಟಿಎಂ ಕಾರ್ಡ್ ಮೇಲೆ ಪ್ರಿಂಟ್ ಹಾಕಿಸಿಕೊಂಡಿದ್ದಾರೆ.

ಜೇಬಿನಲ್ಲಿ ಹಣವನ್ನ ಎಷ್ಟು ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೋ ಅದೇ ರೀತಿಯಲ್ಲಿ ಸ್ಟಾರ್ ಗಳನ್ನು ಸೇಫ್ ಆಗಿ ಇಟ್ಟುಕೊಳ್ಳುತ್ತೇವೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

fans started putting Puneeth Rajkumar and Darshan photos on an ATM

ಒಟ್ಟಾರೆ ಅಭಿಮಾನಿಗಳು ನೆಚ್ಚಿನ ನಟ ಹಾಗೂ ನಟಿಯರ ಬಗ್ಗೆ ಅಭಿಮಾನ ತೋರುವುದಕ್ಕೆ ಹೊಸ ಹೊಸ ದಾರಿಯನ್ನ ಕಂಡು ಹಿಡಿಯುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.

English summary
The fans have started putting Kannada actor Puneeth Rajkumar and Challenging star Darshan photos on an ATM card. These photos are currently becoming viral on the social networking site.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X