ಸುದೀಪ್ ನಿರ್ಧಾರದಿಂದ ಹೆಚ್ಚಾಯ್ತು ಅಭಿಮಾನಿಗಳು ಸಂಭ್ರಮ
Recommended Video

ರಾಜಕೀಯ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ನಟ ಕಿಚ್ಚ ಸುದೀಪ್ ಅವರ ವಿರುದ್ಧ ಅಭಿಮಾನಿಗಳು ಸೇರಿದಂತೆ ಕೆಲವರು ಟೀಕೆ ಮಾಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ಅಭಿನಯ ಚಕ್ರವರ್ತಿ ಇನ್ಮುಂದೆ ಪ್ರಚಾರ ಮಾಡಲ್ಲ ಎಂದು ನಿರ್ಧರಿಸಿದ್ದಾರೆ. ಇದನ್ನ ಪತ್ರದ ಮೂಲಕ ಬರೆದಿರುವ ಸುದೀಪ್ ಅಭಿಮಾನಿಗಳು ಹಾಗೂ ನನ್ನ ಸ್ನೇಹಿತರ ಅಭಿಪ್ರಾಯಕ್ಕೆ ಬದ್ಧನಾಗಿ ಪ್ರಚಾರದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದರು.
ಸುದೀಪ್ ಅವರು ಈ ನಿರ್ಧಾರ ಘೋಷಿಸುತ್ತಿದ್ದಂತೆ ಅಭಿಮಾನಿಗಳು ಹರ್ಷ ವ್ಯಕವ್ತಪಡಿಸಿದ್ದಾರೆ. ವಿಡಿಯೋಗಳ ಮೂಲಕ ಧನ್ಯವಾದಗಳನ್ನ ತಿಳಿಸುತ್ತಿದ್ದಾರೆ. ಅಭಿಮಾನಿಗಳು ಕಳುಹಿಸಿರುವ ವಿಡಿಯೋ ಸಂದೇಶ ಮುಂದೆ ನೀಡಲಾಗಿದೆ.
ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ
ನೀವು ಏನೇ ಮಾಡಿದ್ರು ನೂರು ಸಲ ಯೋಚನೆ ಮಾಡಿ ಮಾಡಿರುತ್ತೀರಾ ಎಂಬ ನಂಬಿಕೆ ನಮಗಿದೆ. ಹೀಗಾಗಿ, ನೀವು ಬೇಸರ ಮಾಡ್ಕೋಬೇಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ನಿಮ್ಮ ಮಾತಿಗೆ ಗೌರವಿದೆ
ತುಂಬಾ ಒಳ್ಳೆಯ ನಿರ್ಧಾರ, ಈ ನಿರ್ಧಾರವನ್ನ ನಾವು ಸ್ವಾಗತ ಮಾಡುತ್ತೇವೆ. ನೀವು ಯಾಕೆ ಪ್ರಚಾರ ಮಾಡಿದ್ರಿ ಎಂಬುದನ್ನ ನೀವು ಹೇಳಿದ್ದೀರಾ. ಅದಕ್ಕೆ ನಾವು ಗೌರ ಕೊಡುತ್ತೇವೆ.
ನನ್ನ ಪುಟ್ಟ ಮಾತು
ನಿಮ್ಮ ಈ ನಿರ್ಧಾರ ನನಗೆ ತುಂಬಾ ಖುಷಿ ಕೊಟ್ಟಿದೆ. ನೀವು ಅಭಿಮಾನಿಗಳನ್ನ ಮತ್ತು ಸ್ನೇಹಿತರನ್ನ ನೀವು ಎಷ್ಟು ಗೌರವಿಸುತ್ತೀರಾ ಎಂಬುದು ಇದರಿಂದ ನಮಗೆ ಅರ್ಥವಾಗುತ್ತಿದೆ. ಇದು ನಿಜಕ್ಕೂ ನಮಗೆ ಹೆಚ್ಚು ಖುಷಿ ಕೊಟ್ಟಿದೆ.
ನಿಮ್ಮ ನಿರ್ಧಾರಕ್ಕೆ ನಮ್ಮ ಸ್ವಾಗತ
ನನ್ನ ಜೀವನದಲ್ಲಿ ಅತ್ಯಂತ ಪ್ರೀತಿಸುವ ಗೌರವಿಸುವ ವ್ಯಕ್ತಿ ಸುದೀಪ್ ಸರ್ ಗೆ ಒಂದು ಮಾತು. ನಿಮ್ಮ ಈ ನಿರ್ಧಾರಕ್ಕೆ ನಮ್ಮ ಸ್ವಾಗತ ಎಂದು ಅಭಿಮಾನಿಯೊಬ್ಬರು ಸಂತೋಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications











