'2ನೇ ಮದುವೆ ಆದ್ರೆ ಸಾಯಿಸ್ತೀವಿ' ಎಂದು ನಟಿ ರೇಣುಗೆ ಪಿ.ಕೆ ಫ್ಯಾನ್ಸ್ ಬೆದರಿಕೆ

By Bharath Kumar

ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮರು ವಿವಾಹವಾಗುತ್ತಿದ್ದಾರೆ. ಈ ವಿಷ್ಯವನ್ನ ಖುದ್ದು ಅವರೇ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಖಚಿತ ಪಡಿಸಿದ್ದರು.

ಆದ್ರೀಗ, ತೆಲುಗು ಪವರ್ ಸ್ಟಾರ್ ಅವರ ಮಾಜಿ ಪತ್ನಿಗೆ ಅಭಿಮಾನಿಗಳಿಂದ ಬೆದರಿಕೆ ಬರುತ್ತಿದೆ. ''ನೀವು ಎರಡನೇ ಮದುವೆ ಆದ್ರೆ, ನಿಮ್ಮನ್ನ ಸಾಯಿಸ್ತೀವಿ'' ಎಂದು ಭಯ ಪಡಿಸುತ್ತಿದ್ದಾರಂತೆ.

ರೇಣು ದೇಸಾಯಿ ಮತ್ತೆ ಮದುವೆ ಆಗುವುದರಿಂದ ನಟ ಪವನ್ ಕಲ್ಯಾಣ್ ಅವರ ಗೌರವಕ್ಕೆ ಹಾಗೂ ಅವರ ಇಮೇಜ್ ಗೆ ಧಕ್ಕೆ ಬರುತ್ತೆ ಎಂಬ ಉದ್ದೇಶದಿಂದ ಪಿ.ಕೆ ಅಭಿಮಾನಿಗಳು ರೇಣು ಜೀವ ಬೆದರಿಕೆ ಹಾಕುತ್ತಿದ್ದಾರೆ.

Fans threaten to kill Renu Desai if she gets remarried

ರೇಣು ದೇಸಾಯಿ ವಿರುದ್ಧ ಅವರ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಪೇಜ್ ಗಳಲ್ಲಿ ಕಿಡಿಕಾರುತ್ತಿದ್ದಾರೆ. ಅಷ್ಟೇ ಅಲ್ಲದೇ, ನೇರವಾಗಿ ಫೋನ್ ಮೂಲಕವೂ ಅಟ್ಯಾಕ್ ಮಾಡ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ರೇಣು ದೇಸಾಯಿ ಸುಮಾರು ಆರು ವರ್ಷಗಳ ನಂತರ ಮತ್ತೊಂದು ವಿವಾಹವಾಗಲು ನಿರ್ಧರಿಸಿದ್ದಾರೆ. ರೇಣು ದೇಸಾಯಿ ಮೂಲತಃ ಗುಜರಾತಿಯವರು. 2009 ರಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಅವರೊಂದಿಗೆ ಮದುವೆ ಆದರು.

ಇವರಿಬ್ಬರ ಪ್ರೀತಿಯ ಪ್ರತಿರೂಪವಾಗಿ ಆಧ್ಯಾ ಮತ್ತು ಅಕಿರಾ ಎಂಬ ಇಬ್ಬರು ಮಕ್ಕಳಿದ್ದರು. ಆದ್ರೆ, ದಾಂಪತ್ಯದಲ್ಲಿ ಮನಸ್ತಾಪ ಮೂಡಿದ ಹಿನ್ನಲೆ 2012ರಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡರು. ಇತ್ತೀಚಿಗಷ್ಟೆ ಪುಣೆಯಲ್ಲಿ ಗೌಪ್ಯವಾಗಿ ಎರಡನೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

More from Filmibeat

English summary
Telugu actor Pawan kalyan Fans threaten to kill Renu Desai if she gets remarried. recently, Pawan Kalyan's ex-wife Renu Desai engaged again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X