Don't Miss!
- News
Infographics: ಕೇಂದ್ರ ಬಜೆಟ್ನಲ್ಲಿ ಯಾವ ಯೋಜನೆಗಳಿಗೆ ಎಷ್ಟೇಷ್ಟು ಅನುದಾನ ಘೋಷಣೆ ಆಗಿದೆ?
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
KGF 2 Toofan Song: 'ತೂಫಾನ್' ಹಾಡಿಗೆ ಕನ್ನಡಿಗರ ಕಿಡಿ, ಹಾಡಿನಲ್ಲೂ ಹಿಂದಿ ಹೇರಿಕೆ ಬೇಕೆ?
'ಕೆಜಿಎಫ್ 2' ಚಿತ್ರ ಮೊದಲ ಹಾಡು ರಿಲೀಸ್ ಆಗಿದೆ. ತೂಫಾನ್ ಎನ್ನುವ ಈ ಹಾಡು ಬಿರುಗಾಳಿಯನ್ನೇ ಎಬ್ಬಿಸಿದೆ. ಆದರೆ ಅದು ಕೇವಲ ಹಾಡು ಚೆನ್ನಾಗಿದೆ ಅಂತ ಅಲ್ಲ. ಬದಲಿಗೆ ಹಾಡು ವಿವಾದವನ್ನು ಹುಟ್ಟು ಹಾಕಿದೆ. ಕನ್ನಡ ಪ್ರೇಮಿಗಳು ಈ ಹಾಡನ್ನು ಒಪ್ಪಿಕೊಳ್ಳುತ್ತಾ ಇಲ್ಲಾ. ಇದಕ್ಕೆ ಕಾರಣ ಹಾಡಿನ ಲಿರಿಕ್ಸ್.
Recommended Video

'ಕೆಜಿಎಫ್ 2' ಸಿನಿಮಾ ಕನ್ನಡದಲ್ಲಿ ಹೊಸ ಇತಿಹಾಸ ಬರೆದ ಸಿನಿಮಾ. ಹಾಗಾಗಿ ಈ ಚಿತ್ರ ಪಾರ್ಟ್ 2 ನೋಡಲು ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. 'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಿಕೊಳ್ಳುವುದಕ್ಕಿಂತ, ಇದು ಕನ್ನಡದ ಸಿನಿಮಾ ಎಂದು ಹೇಳಿಕೊಳ್ಳುವುದೇ ಕನ್ನಡಿಗರಿಗೆ ಹೆಮ್ಮೆ. ಆದರೆ ಅದು 'ಕೆಜಿಎಫ್ 2' ಹಾಡಿನ ಮೂಲಕ ಸಾಧ್ಯ ಆಗುತ್ತಿಲ್ಲ.
KGF
2
Toofan
Song:
ತೂಫಾನ್
ರೂಪದಲ್ಲಿ
ಬಂದ
ರಾಕಿ
ಭಾಯ್
ಯಶ್!
ಹಾಗಾಗಿ ಈಗ ರಿಲೀಸ್ ಆಗಿರುವ ತೂಫಾನ್ ಹಾಡನ್ನು ಒಪ್ಪಿಕೊಳ್ಳಲು ಎಲ್ಲರೂ ಸಿದ್ಧರಿಲ್ಲ. ಈ ಹಾಡು ನಿರೀಕ್ಷೆ ಮುಟ್ಟಿಲ್ಲ. ಇದು ಕನ್ನಡದ ಹಾಡು ಹೇಗೆ ಆಗುತ್ತೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಹಾಡಿನಲ್ಲಿ ಇರುವ ದೋಷ ಆದರೂ ಏನು? ವಿವಾದಕ್ಕೆ ಕಾರಣ ಆಗಿದ್ದೇಕೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ....
'KGF-2'
ಬಗ್ಗೆ
ಹೀಗೊಂದು
ಸುದ್ದಿ:
ರಾಕಿ
ಭಾಯ್
ಜೊತೆ
ಹೆಜ್ಜೆ
ಹಾಕಿದ
ಖ್ಯಾತ
ಡ್ಯಾನ್ಸರ್

'ತೂಫಾನ್' ಕನ್ನಡ ಹಾಡಲ್ಲಿ ಹಿಂದಿ ಸಾಹಿತ್ಯ ಹಾವಾಳಿ!
'ತೂಫಾನ್' ಹಾಡು ರಿಲೀಸ್ ಮಾಡಲಾಗುತ್ತೆ ಎಂದು ದಿನಾಂಕ ಪ್ರಕಟ ಮಾಡಿದ ಬಳಿಕ ಸಿನಿ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಯಿಂದ ಈ ಹಾಡಿಗಾಗಿ ಕಾಯುತ್ತಿದ್ದರು. ಆದರೆ 'ತೂಫಾನ್' ರೂಪದಲ್ಲಿ ಬಂದ ರಾಕಿಂಗ್ ಸ್ಟಾರ್ ಯಶ್ ಕನ್ನಡಿಗರ ಮನ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಈ ಹಾಡಿನಲ್ಲಿ ಹೆಚ್ಚಾಗಿ ಹಿಂದೆ ಸಾಹಿತ್ಯವನ್ನು ಬಳಸಲಾಗಿದೆ. ಹಾಗಾಗಿ ಕನ್ನಡ ಹಾಡು ಎಂದ ಮೇಲೆ ಅಲ್ಲಿ ಕನ್ನಡಕ್ಕೆ ಆದ್ಯತೆ ಇರಬೇಕು. ಪೂರ್ಣ ಹಾಡು ಕನ್ನಡದಲ್ಲೇ ಇರಬೇಕಿತ್ತು. ಹಿಂದಿ ಸಾಹಿತ್ಯ ಸೇರಿಸಿದ್ದು, ಇದನ್ನು ಕನ್ನಡ ಹಾಡು ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಹಿಂದಿಯಲ್ಲೂ ಪ್ರತ್ಯೇಕವಾಗಿ ಹಾಡು ರಿಲೀಸ್ ಆಗಿದೆ!
'ಕೆಜಿಎಫ್ 2' ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ 'ಕೆಜಿಎಫ್ 2' ಚಿತ್ರ ತೆರೆಗೆ ಬರಲಿದೆ. ಹಾಗಾಗಿ ಸಿನಿಮಾದ ಹಾಡು ಕೂಡ ಈ ಎಲ್ಲಾ ಭಾಷೆಗಳನ್ನು ರಿಲೀಸ್ ಆಗಿದೆ. 'ತೂಫಾನ್' ಹಾಡು ಹಿಂದಿಯಲ್ಲಿ ರಿಲೀಸ್ ಆಗಿದೆ. ಹಾಗಿದ್ದ ಮೇಲೆ ಕನ್ನಡದ ಹಾಡಿನಲ್ಲಿ ಹಿಂದಿ ಲಿರಿಕ್ಸ್ ಯಾಕೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
|
'ಕನ್ನಡ' ಮುಖ್ಯ, ಬೆರಕೆ ಹಾಡು ಬೇಡಪ್ಪ ಎಂದು ಕಮೆಂಟ್!
'ತೂಫಾನ್' ಹಾಡು ರಿಲೀಸ್ ಆಗುತ್ತಲೇ, ಕನ್ನಡದ ದೊಡ್ಡ ಸಿನಿಮಾ ಎನಿಸಿಕೊಂಡಿರುವ 'ಕೆಜಿಎಫ್ 2' ಕನ್ನಡದ ಹಾಡಿನಲ್ಲಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿಲ್ಲ ಎಂದು ಕನ್ನಡಿಗರು ಕಿಡಿ ಕಾರುತ್ತಿದ್ದಾರೆ. ಅದರಲ್ಲಿ ಕೆಲವರು ಮಾಡಿರುವ ಕಮೆಂಟ್‌ಗಳು ಹೀಗಿವೆ. "ಎಲ್ಲರನ್ನು ಸಂತೈಸಲು ಆಗುವುದಿಲ್ಲ, ಆದರೆ, ಕನ್ನಡ ಅಂತ ಬಂದ್ಮೇಲೆ ಆ ಸೊಗಡು ಹಾಗೆ ಇರ್ಬೇಕು ಬೆರಕೆ ಹಾಡು ಬೇಡಪ್ಪ. ನಮಗೆ ಕನ್ನಡ, ಕನ್ನಡಿಗ, ಕರ್ನಾಟಕ ಮುಖ್ಯ. ಯಾವೊಬ್ಬ ವ್ಯಕ್ತಿ ಅಥವಾ ಸಿನೆಮಾ ಮುಖ್ಯ ಅಲ್ಲ.", "ಪ್ಯಾನ್ ಇಂಡಿಯಾ, ಪ್ಯಾನ್ ಇಂಡಿಯಾ ಅಂತೆ. ಅದಕ್ಕಾಗಿಯೇ ಹಿಂದಿ ವರ್ಷನ್‌ನಲ್ಲಿಯೂ ಬಿಡುಗಡೆ ಆಗ್ತಿದೆ. ಕನ್ನಡ ವರ್ಷನ್ ಅಲ್ಲಿ ಹಿಂದಿ ಯಾಕೆ?" ಹೀಗೆ ಹಲವಾರು ಕಮೆಂಟ್‌ಗಳನ್ನು ಮಾಡಿ ಈ ಹಾಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
|
'ತೂಫಾನ್' ಪದದ ಅರ್ಥ ಏನು? ನೆಟ್ಟಿಗರ ಪ್ರಶ್ನೆ!
ಹೀಗೆ ಈ ಹಾಡಿನ ಬಗ್ಗೆ ಕಮೆಂಟ್ ಮಾಡಿದ ಮತ್ತೊಬ್ಬರು, "ತೂಫಾನ್ ಪದದ ಅರ್ಥ ಏನು? ಕನ್ನಡ ಹಾಡಲ್ಲಿ ಹಿಂದಿ ಯಾಕ್ ಗುರು? ಇವರ ಬಿಸ್ನೆಸ್‌ಗೆ ಹಿಂದಿ ಅವಶ್ಯಕತೆ ಇದೆಯಾ? ನನಗಂತೂ ಅರ್ಥ ಆಗಲಿಲ್ಲ, ಮನಸ್ಸಿಲ್ಲದೆ ನಮ್ಮ ಕನ್ನಡ ಸಿನೆಮಾದ ಹಾಡು ಅಂತ ಇಷ್ಟ ಪಡೋಕು ಆಗ್ತಿಲ್ಲ." ಎಂದು ಬರೆದುಕೊಂಡಿದ್ದಾರೆ. 'ಕೆಜಿಎಫ್ 2' ಚಿತ್ರದ ಮೊದಲ ಹಾಡು 'ತೂಫಾನ್' ಕನ್ನಡಿಗರ ಬೇಸರಕ್ಕೆ ಕಾರಣ ಆಗಿದೆ. ಮೊದಲ ಹಾಡೇ ಹೀಗಾದರೆ ಮುಂದಿನ ಹಾಡುಗಳ ಗತಿ ಏನು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.