ನರ್ತಕಿ ಚಿತ್ರಮಂದಿರದಲ್ಲಿ 'KGF' ಟಿಕೆಟ್ ವಿಚಾರಕ್ಕೆ ಗಲಾಟೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ನಾಳೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಟಿಕೆಟ್ ವಿಚಾರಕ್ಕೆ ಈಗ ಕೆಲ ಕಡೆ ಗಲಾಟೆಗಳು ನಡೆಯುತ್ತಿದೆ.
ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಟಿಕೆಟ್ ನೀಡುತ್ತಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಭಾನುವಾರದಿಂದ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಇದುವರೆಗೆ ಟಿಕೆಟ್ ನೀಡಿಲ್ಲ ಎಂದು ಅಭಿಮಾನಿಗಳ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎಷ್ಟೇ ಚಿತ್ರಮಂದಿರ ಇದ್ದರೂ ಗಾಂಧಿನಗರದ ಮೈನ್ ಥಿಯೇಟರ್ ನಲ್ಲಿ ಸಿನಿಮಾ ನೋಡುವ ಮಜಾವೇ ಬೇರೆ. ಅದೇ ಕಾರಣಕ್ಕೆ ಅಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂಬುದು ಅನೇಕ ಅಭಿಮಾನಿಗಳ ಆಸೆ ಆಗಿರುತ್ತದೆ.

ಆದರೆ, ನರ್ತಕಿ ಚಿತ್ರಮಂದಿರದ ಸಿಬ್ಬಂದಿ ಟಿಕೆಟ್ ಕೇಳಿದ ಅಭಿಮಾನಿಗಳಿಗೆ ಟಿಕೆಟ್ ನೀಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ನಿರ್ಮಾಪಕರನ್ನು ಟಿಕೆಟ್ ಕೇಳಿ ಎನ್ನುತ್ತಿದ್ದರಂತೆ. ಅಲ್ಲದೆ, ದೊಡ್ಡ ವ್ಯಕ್ತಿಗಳಿಂದ ಬಂದವರಿಗೆ ಮಾತ್ರ ಟಿಕೆಟ್ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ.


Click it and Unblock the Notifications











