twitter
    For Quick Alerts
    ALLOW NOTIFICATIONS  
    For Daily Alerts

    ನರ್ತಕಿ ಚಿತ್ರಮಂದಿರದಲ್ಲಿ 'KGF' ಟಿಕೆಟ್ ವಿಚಾರಕ್ಕೆ ಗಲಾಟೆ

    |

    ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ನಾಳೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಟಿಕೆಟ್ ವಿಚಾರಕ್ಕೆ ಈಗ ಕೆಲ ಕಡೆ ಗಲಾಟೆಗಳು ನಡೆಯುತ್ತಿದೆ.

    ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಟಿಕೆಟ್ ನೀಡುತ್ತಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಭಾನುವಾರದಿಂದ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಇದುವರೆಗೆ ಟಿಕೆಟ್ ನೀಡಿಲ್ಲ ಎಂದು ಅಭಿಮಾನಿಗಳ ಆರೋಪ ಮಾಡಿದ್ದಾರೆ.

    'ರಾಕಿಂಗ್ ಸ್ಟಾರ್' ಯಶ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು? 'ರಾಕಿಂಗ್ ಸ್ಟಾರ್' ಯಶ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

    ಬೆಂಗಳೂರಿನಲ್ಲಿ ಎಷ್ಟೇ ಚಿತ್ರಮಂದಿರ ಇದ್ದರೂ ಗಾಂಧಿನಗರದ ಮೈನ್ ಥಿಯೇಟರ್ ನಲ್ಲಿ ಸಿನಿಮಾ ನೋಡುವ ಮಜಾವೇ ಬೇರೆ. ಅದೇ ಕಾರಣಕ್ಕೆ ಅಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂಬುದು ಅನೇಕ ಅಭಿಮಾನಿಗಳ ಆಸೆ ಆಗಿರುತ್ತದೆ.

    fans unhappy with narthaki theatre owner regarding kgf movie tickets

    'ಕೆಜಿಎಫ್'ಗೆ ಸಿಕ್ಕ ಮೈನ್ ಥಿಯೇಟರ್ ಯಾವುದು? 'ಕೆಜಿಎಫ್'ಗೆ ಸಿಕ್ಕ ಮೈನ್ ಥಿಯೇಟರ್ ಯಾವುದು?

    ಆದರೆ, ನರ್ತಕಿ ಚಿತ್ರಮಂದಿರದ ಸಿಬ್ಬಂದಿ ಟಿಕೆಟ್ ಕೇಳಿದ ಅಭಿಮಾನಿಗಳಿಗೆ ಟಿಕೆಟ್ ನೀಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ನಿರ್ಮಾಪಕರನ್ನು ಟಿಕೆಟ್ ಕೇಳಿ ಎನ್ನುತ್ತಿದ್ದರಂತೆ. ಅಲ್ಲದೆ, ದೊಡ್ಡ ವ್ಯಕ್ತಿಗಳಿಂದ ಬಂದವರಿಗೆ ಮಾತ್ರ ಟಿಕೆಟ್ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ.

    English summary
    Kannada actor Yash fans unhappy with Narthaki theatre owner regarding 'KGF' movie tickets.
    Thursday, December 20, 2018, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X