ಶಿವಣ್ಣನ 'ಬೈರಾಗಿ' ಲುಕ್‌ಗೆ ಫ್ಯಾನ್ಸ್ ಬೇಸರ!

ನಟ ಶಿವರಾಜ್ ಕುಮಾರ್‌ ಅಭಿನಯದ ಮುಂದಿನ ಸಿನಿಮಾ 'ಬೈರಾಗಿ'. ಶಿವಣ್ಣ ಬೈರಗಾಗಿಯ ಅವತಾರದಲ್ಲಿ ಎಲ್ಲರ ಮುಂದೆ ಬರುತ್ತಿದ್ದಾರೆ. ಸದ್ಯ 'ಬೈರಾಗಿ' ಸಿನಿಮಾದ ಶೂಟಿಂಗ್ ಮುಗಿದಿದೆ. ಈ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಈ ಹಿಂದೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಈಗ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ.

ಈ 'ಭಜರಂಗಿ' ಚಿತ್ರದ ನಂತರ ರಿಲೀಸ್ ಆಗುತ್ತಿರುವ ಶಿವರಾಜ್‌ಕುಮಾರ್ ಸಿನಿಮಾ ಇದು. ಹಾಗಾಗಿ ಚಿತ್ರದ ಮೇಲೆ ಹೆಚ್ಚಿನ ಕುತೂಹಲ ಹುಟ್ಟುಕೊಂಡಿದೆ. ಪೋಸ್ಟರ್ ಮೂಲಕ ಹೆಚ್ಚಾಗಿ ಗಮನಸೆಳೆದ 'ಬೈರಾಗಿ' ಹಾಡಿನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ. ಸದ್ಯ ರಿಲೀಸ್ ಆಗಿರುವ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹಾಡನ್ನು ನಟ ದುನಿಯಾ ವಿಜಯ್ ರಿಲೀಸ್ ಮಾಡಿದ್ದಾರೆ. ಬೈರಾಗಿ ಹಾಡನ್ನು ರಿಲೀಸ್ ಮಾಡಿರುವ ದುನಿಯಾ ವಿಜಯ್ ಶಿವರಾಜ್‌ಕುಮಾರ್ ಎಂದೆಂದಿಗೂ ಕಿಂಗ್ ಎಂದಿದ್ದಾರೆ. ಅಷ್ಟಕ್ಕೂ ಈ ಹಾಡಿನ ಬಗ್ಗೆ ಜನ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಮುಂದೆ ಓದಿ...

ಶಿವಣ್ಣ ಲುಕ್‌ ಬಗ್ಗೆ ಅಸಮಾಧಾನ!

ಶಿವಣ್ಣ ಲುಕ್‌ ಬಗ್ಗೆ ಅಸಮಾಧಾನ!

'ಬೈರಾಗಿ' ಚಿತ್ರದ 'ನಕರನಕ' ಲಿರಿಕಲ್ ಹಾಡು ರಿಲೀಸ್ ಆಗಿದೆ. ಈ ಹಾಡಿಗಾಗಿ ಅಭಿಮಾನಿಗಳು, ಪ್ರೇಕ್ಷಕರು ಕಾಯುತ್ತಿದ್ದರು. ಆದರೆ, ಹಾಡು ರಿಲೀಸ್ ಆದ ಬಳಿಕ ಬೇರೆ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಡು ಹೇಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಶಿವಣ್ಣನ ಲುಕ್ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿದೆ. ಈ ಹಾಡಿನಲ್ಲಿ ನಟ ಶಿವರಾಜ್‌ಕುಮಾರ್ ಲುಕ್ ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಅಭಿಮಾನಿಗಳು.

ಶಿವರಾಜ್ ಕುಮಾರ್ ಭಿನ್ನ ಹೇರ್‌ಸ್ಟೈಲ್!

ಶಿವರಾಜ್ ಕುಮಾರ್ ಭಿನ್ನ ಹೇರ್‌ಸ್ಟೈಲ್!

ಈ ಹಾಡಿನಲ್ಲಿ ನಟ ಶಿವರಾಜ್‌ಕುಮಾರ್ ಹೇರ್ ಸ್ಟೈಲ್ ಕೊಂಚ ವಿಭಿನ್ನವಾಗಿದೆ. ಉದ್ದ ಕೂದಲಿನ ವಿಗ್ ಹಾಕಲಾಗಿದೆ. ಈ ಹಿಂದೆಯೂ ಶಿವರಾಜ್‌ಕುಮಾರ್ ಹಲವು ಚಿತ್ರಗಳಲ್ಲಿ ವಿಗ್ ಧರಿಸಿದ್ದಾರೆ. ಆದರೆ ಈ ಹಾಡಿನಲ್ಲಿ ಇರುವ ಹೇರ್ ಸ್ಟೈಲ್ ಅಷ್ಟಾಗಿ ಸೂಟ್ ಆಗಿಲ್ಲ. ಹೀಗಾಗಿ ಅಭಿಮಾನಿಗಳು ಹೇರ್ ಸ್ಟೈಲ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

'ಬೈರಾಗಿ' ಹಾಡಿನ ಸಂಗೀತಕ್ಕೆ ಕೇಳುಗರು ಫಿದಾ!

'ಬೈರಾಗಿ' ಹಾಡಿನ ಸಂಗೀತಕ್ಕೆ ಕೇಳುಗರು ಫಿದಾ!

'ನಕರನಟ' ಎಂದು ಶುರುವಾಗುವ ಈ ಹಾಡು ನಾಯಕನ ಪಾತ್ರವನ್ನು ವರ್ಣನೆ ಮಾಡುತ್ತದೆ. ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡೂ ವಿಭಿನ್ನವಾಗಿವೆ. ಈ ಹಾಡಿಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮ್ಯೂಸಿಕ್ ಮಾಡಿದ್ದಾರೆ. ಸಂಗೀತ ವಿಭಿನ್ನವಾಗಿದ್ದು ಅನೂಪ್ ಪ್ರಯೋಗಕ್ಕೆ ಕೇಳುಗರು ಜೈಕಾರ ಹಾಕುತ್ತಿದ್ದಾರೆ. ಹಾಡಿನಲ್ಲಿ ವಿಭಿನ್ನ ಎರಿಳಿತಗಳು ಇದ್ದು ಡಿಫ್ರೆಂಟ್ ಫೀಲ್ ಕೊಡುತ್ತದೆ.

ಸದ್ಯದಲ್ಲಿಯೇ 'ಬೈರಾಗಿ' ರಿಲೀಸ್ ಡೇಟ್ ಅನೌನ್ಸ್

ಸದ್ಯದಲ್ಲಿಯೇ 'ಬೈರಾಗಿ' ರಿಲೀಸ್ ಡೇಟ್ ಅನೌನ್ಸ್

'ಬೈರಾಗಿ' ಚಿತ್ರದ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿದೆ. ಸದ್ಯ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಚಿತ್ರದ ಟ್ರೈಲರ್‌ಗಾಗಿ ಕಾಯುತ್ತಿದ್ದಾರೆ ಪ್ರೇಕ್ಷಕರು. ಚಿತ್ರ ತಂಡ ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿದ್ದು, ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗುತ್ತದೆ. ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಡಾಲಿ ಧನಂಜಯ್​ ಅಭಿನಯಿಸಿದ್ದಾರೆ. ನಿರ್ದೇಶಕ ವಿಜಯ್​ ಮಿಲ್ಟನ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಯಶ್​ ಶಿವಕುಮಾರ್​, ಅಂಜಲಿ, ಪೃಥ್ವಿ ಅಂಬರ್​ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಸಾರ್ಥಕ್​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

More from Filmibeat

English summary
Fans Upset With Actor Shiva Rajkumar New Look In Bairagi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X