'ರಶ್ಮಿಕಾರನ್ನ ಮದುವೆ ಆಗಿ' ಎಂದು ವಿಜಯ್ ದೇವರಕೊಂಡಗೆ ಹೇಳಿದ ಅಭಿಮಾನಿ.!
Recommended Video

ಕಳೆದ ಕೆಲವು ದಿನಗಳಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ತೆಲುಗಿನ 'ಗೀತ ಗೋವಿಂದಂ' ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆ ಆದ್ಮೇಲಂತೂ, ಎಲ್ಲೆಲ್ಲೂ ರಶ್ಮಿಕಾ-ವಿಜಯ್ ದೇವರಕೊಂಡ ನಡುವಿನ ಕೆಮಿಸ್ಟ್ರಿ ಬಗ್ಗೆಯೇ ಮಾತುಗಳು ಕೇಳಿಬರ್ತಿತ್ತು.
ಹೀಗಿರುವಾಗಲೇ, 'ಗೀತ ಗೋವಿಂದಂ' ಚಿತ್ರದಲ್ಲಿ ಇರುವ ಲಿಪ್ ಲಾಕ್ ಸೀನ್ ಕೂಡ ಲೀಕ್ ಆಯ್ತು. ಅದೇ ಗ್ಯಾಪ್ ನಲ್ಲಿ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಳ್ತಾರೆ ಎಂಬ ಗಾಸಿಪ್ ಕೂಡ ಹಬ್ಬಿತ್ತು.
ಇಷ್ಟೆಲ್ಲದರ ನಡುವೆ 'ಗೀತ ಗೋವಿಂದಂ' ಸಿನಿಮಾ ರಿಲೀಸ್ ಆಯ್ತು. ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಓಪನ್ನಿಂಗ್ ಸಿಕ್ತು. ಸಾಲದಕ್ಕೆ, ನೂರು ಕೋಟಿ ಕಲೆಕ್ಷನ್ ಮಾಡ್ತು.
ಈಗ ನೋಡಿದ್ರೆ, ''ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ 'ಮೇಡ್ ಫಾರ್ ಈಚ್ ಅದರ್'. ನೀವಿಬ್ಬರೂ ಮದುವೆ ಆಗಿ'' ಎಂದು ಅಭಿಮಾನಿಗಳು ಕೇಳಿಕೊಳ್ತಿದ್ದಾರೆ. ಅದಕ್ಕೆ ಸಾಕ್ಷಿ ಇಲ್ಲಿದೆ, ನೋಡಿರಿ...

ಈ ಕಾಮೆಂಟ್ ನೋಡಿ...
''ಮೇಡ್ ಫಾರ್ ಈಚ್ ಅದರ್. ನೀವಿಬ್ಬರೂ ದಯವಿಟ್ಟು ಮದುವೆ ಆಗಿ. ವಿಜಯ್ ದೇವರಕೊಂಡ ವೆಡ್ಸ್ ರಶ್ಮಿಕಾ ಮಂದಣ್ಣ'' ಅಂತ ಅಭಿಮಾನಿಯೊಬ್ಬರು ವಿಜಯ್ ದೇವರಕೊಂಡ ಹಾಕಿದ್ದ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಬಗ್ಗೆ ಬೇಸರ ಆಗ್ತಿದ್ಯಾ.?
''ಇಲ್ಲಿರುವ ಯಾರಿಗಾದರೂ ರಕ್ಷಿತ್ ಶೆಟ್ಟಿ ಬಗ್ಗೆ ಬೇಸರ ಆಗ್ತಿದ್ಯಾ.?'' ಅಂತಲೂ ಒಬ್ಬರು ಕಾಮೆಂಟ್ ಹಾಕಿದ್ದಾರೆ. ಅದನ್ನ ಕೆಲವರು ಆಡಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಫ್ಯಾನ್ಸ್ ಆಸೆ ಇದು
''ಕನ್ನಡ ಚಿತ್ರರಂಗದ ಹೆಮ್ಮೆ ರಕ್ಷಿತ್ ಶೆಟ್ಟಿಯನ್ನೇ ಮದುವೆ ಆಗಿ'' ಅಂತ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ. ಒಟ್ನಲ್ಲಿ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಎಲ್ಲೆಲ್ಲೂ ಚರ್ಚೆ ಆಗುತ್ತಿದೆ.

ಸಿನಿಮಾಗಳಲ್ಲಿ ರಶ್ಮಿಕಾ ಬಿಜಿ
ರಶ್ಮಿಕಾ ಬಗ್ಗೆ ಗಾಸಿಪ್ ಗಳು, ಟ್ರೋಲ್ ಗಳು ವಿಪರೀತ ಆಗಿದ್ದರೂ, ಅದ್ಯಾವುದಕ್ಕೂ ಆಕೆ ತಲೆ ಕೆಡಿಸಿಕೊಂಡಿಲ್ಲ. ಕೆಲಸ ಬಗ್ಗೆ ಮಾತ್ರ ಗಮನ ಹರಿಸುತ್ತಿರುವ ರಶ್ಮಿಕಾ ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.


Click it and Unblock the Notifications











