ದರ್ಶನ್ ಹುಡುಗರು ಕ್ಷಮೆ ಕೇಳಿದರೆ ಮಾತ್ರ ಫ್ಯಾನ್ಸ್ ವಾರ್ ನಿಲ್ಲುತ್ತೆ: ಅಭಿಮಾನಿಗಳ ಕೊನೆ ಎಚ್ಚರಿಕೆ!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ಸ್ ವಾರ್ ಹೊಸದೇನು ಅಲ್ಲ. ಹಿಂದಿನಿಂದಲೂ ಸೂಪರ್‌ಸ್ಟಾರ್ ಅಭಿಮಾನಿಗಳು ಒಬ್ಬರ ಮೇಲೆ ಇನ್ನೊಬ್ಬರು ತಿರುಗಿಬಿದ್ದ ಹಲವು ಉದಾಹರಣೆಗಳಿವೆ. ಈಗಲೂ ಆ ಫ್ಯಾನ್ಸ್ ಮುಂದುವರೆದಿದೆ. ಇಬ್ಬರ ಸಿನಿಮಾ ರಿಲೀಸ್ ಆದಾಗ ಇನ್ನೊಬ್ಬರ ಫ್ಯಾನ್ಸ್ ಅಖಾಡಕ್ಕಿಳಿದು ಟೀಕೆ ಮಾಡುತ್ತಲೇ ಇದ್ದಾರೆ. ಈಗ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟಕ್ಕೆ ಇಳಿದಿದ್ದಾರೆ.

ದರ್ಶನ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮಾತಾಡಿದ್ದರು. "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಆದರೆ, ನಾನು ಬದುಕಿದ್ದಾಗಲೇ ಫ್ಯಾನ್ಸ್‌ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು" ಎಂದು ದರ್ಶನ್ ಹೇಳಿದ್ದರು.

ದರ್ಶನ್ ಹೇಳಿದ ಇದೇ ಮಾತು ಪುನೀತ್ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿ ಅಪ್ಪು ಫ್ಯಾನ್ಸ್ ನಿನ್ನೆಯಿಂದಲೂ ದರ್ಶನ್ ಹಾಗೂ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದರು. ಕ್ಷಮೆ ಕೇಳಲೇ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಇಂದು ದರ್ಶನ್ ಹುಡುಗರಿಗೆ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ದರ್ಶನ್ ಫ್ಯಾನ್ಸ್ Vs ಅಪ್ಪು ಫ್ಯಾನ್ಸ್

ದರ್ಶನ್ ಫ್ಯಾನ್ಸ್ Vs ಅಪ್ಪು ಫ್ಯಾನ್ಸ್

ನಿನ್ನೆಯಿಂದ(ಆಗಸ್ಟ್ 08) ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ದರ್ಶನ್ ಹೇಳಿಕೆ ಬಳಿಕ ಇಬ್ಬರ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ವಾಗ್ಯುದ್ಧಕ್ಕೆ ಇಳಿದಿದ್ದಾರೆ. ದರ್ಶನ್ ಅಭಿಮಾನಿಗಳು ಅಪ್ಪು ಫ್ಯಾನ್ಸ್ ತಿರುಗೇಟು ಕೊಟ್ಟರೆ, ದರ್ಶನ್ ಫ್ಯಾನ್ಸ್ ಅಪ್ಪು ಫ್ಯಾನ್ಸ್‌ಗೆ ಟಕ್ಕರ್ ಕೊಡುತ್ತಿದ್ದಾರೆ. ಒಂದೇ ಒಂದು ಹೇಳಿಕೆಯಿಂದ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ಅಭಿಮಾನಿಗಳ ಮಧ್ಯೆ ಫ್ಯಾನ್ಸ್ ವಾರ್ ಶುರುವಾಗಿದೆ. ಇದು ಇನ್ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ.

ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್

ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್

ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ಯುದ್ಧ ಮುಂದುವರೆಸಿದ್ದಾರೆ. ನಿನ್ನೆ (ಆಗಸ್ಟ್ 08) ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ದರ್ಶನ್ ಕ್ಷಮೆ ಕೇಳಲೇ ಬೇಕು ಅಂತ ಪಟ್ಟು ಹಿಡಿದ್ದರು. ಆಗ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪರವಾಗಿ ಬ್ಯಾಟ್ ಬೀಸಿದ್ದರು. ಇಲ್ಲಿಂದ ಪರಸ್ಪರ್ ವಾಗ್ಯುದ್ಧಗಳು ನಡೆದು, ಫ್ಯಾನ್ಸ್ ವಾರ್‌ಗೆ ಕಾರಣ ಆಗಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ರಾಜವಂಶದ ಅಭಿಮಾನಿಗಳು ಕೊನೆಯ ಎಚ್ಚರಿಕೆ ನೀಡಿದ್ದು, "ದರ್ಶನ್ ಅಭಿಮಾನಿಗಳಿಂದ ಕ್ಷಮೆ ಬಂದರೆ ಮಾತ್ರ ಫ್ಯಾನ್ಸ್ ವಾರ್ ನಿಲ್ಲುತ್ತೆ." ಎಂದಿದ್ದಾರೆ.

ದರ್ಶನ್ ಫ್ಯಾನ್ ಪೇಜ್ ಡಿಲೀಟ್

ದರ್ಶನ್ ಫ್ಯಾನ್ ಪೇಜ್ ಡಿಲೀಟ್

ಡಿ ಬಾಸ್ ಸೋಲ್ಜರ್ ಅನ್ನೋ ಫ್ಯಾನ್ ಪೇಜ್‌ನಲ್ಲಿ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಬಗ್ಗೆ ಅವಹೇಳಕಾರಿಯಾಗಿ ನಿಂದಿಸಲಾಗಿತ್ತು. ಈ ಫ್ಯಾನ್ ಪೇಜ್ ವಿರುದ್ಧ ಪುನೀತ್ ಅಭಿಮಾನಿಗಳು ತಿರುಗಿಬಿದ್ದಿದ್ದರು. ಈ ಪರಿಣಾಮ ಡಿ ಬಾಸ್ ಸೋಲ್ಜರ್ ಪೇಜ್ ಡಿಲೀಟ್ ಆಗಿದೆ ಎಂದು ಪುನೀತ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾರುತ್ತಿದ್ದಾರೆ. " ಅಪ್ಪು ಬಾಸ್ ಅಭಿಮಾನಿಗಳನ್ನು ಮುಟ್ಟಿದ್ದಕ್ಕೆ 75 ಸಾವಿರ ಫಾಲೋವರ್ಸ್ ಇದ್ದ ಪೇಜ್ ಡಿಲೀಟ್ ಆಗಿದೆ ಎಂದು ಅಪ್ಪು ಫ್ಯಾನ್ಸ್ ಕೇಳಿಕೊಂಡಿದ್ದಾರೆ.

ಅಪ್ಪು ಬಗೆಗಿನ ಇನ್ನೊಂದು ವಿಡಿಯೋ ವೈರಲ್

ಅಪ್ಪು ಬಗೆಗಿನ ಇನ್ನೊಂದು ವಿಡಿಯೋ ವೈರಲ್

ದರ್ಶನ್ ನೀಡಿದ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತಾಡಿದ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ " ಕ್ರಾಂತಿ' ಸಿನಿಮಾ ರಿಲೀಸ್ ಆಗಿಬಿಡಬೇಕಾಗಿತ್ತು. ಸೆಟ್ ಹಾಕಿದಾಗ ಮಳೆ ಬಂತು. ಆಮೇಲೆ ಪುನೀತ್ ಅವರದ್ದು ಹಂಗಾಯ್ತು. ಪುನೀತ್‌ ಅವರದ್ದು ಆ ತರ ಆದಾಗ ನಾನು ಒಬ್ಬ ಕಲಾವಿದ. ಅವರ ಜೊತೆ ತುಂಬಾ ಒಡನಾಟ ಇಟ್ಟುಕೊಂಡಿದ್ವಿ. ದೊಡ್ಮನೆಯಿಂದ ನಾವೆಲ್ಲಾ ಬಂದವರು. ಹಂಗೆ ಆದ ತಕ್ಷಣ 11 ದಿನ ಮಾಡೋದು ಬೇಡ ಕಣಯ್ಯಾ. ನಮಗೂ ಸೂತಕ ಅದು ಎಂದು ನಾನೇ ಶೂಟಿಂಗ್ ನಿಲ್ಲಿಸಿಬಿಟ್ಟೆ." ಎಂದು ದರ್ಶನ್ ಹೇಳಿದ್ದಾರೆ. ಈ ವಿಡಿಯೋವನ್ನುದರ್ಶನ್ ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ.

More from Filmibeat

English summary
Fans War: Puneeth Rajkumar Fans Gave Warning For Actor Darshan Boys, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X