ಸಾಜಿದ್ ಖಾನ್ ವಿರುದ್ಧ ಆರೋಪಗಳನ್ನು ಕೇಳಿ ಸಹೋದರಿ ಫರಾ ಖಾನ್ ಹೃದಯ ಛಿದ್ರ.!
Recommended Video

#ಮೀಟೂ ಅಭಿಯಾನ ಬಾಲಿವುಡ್ ನಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಂತೆಯೇ, ನಿರ್ದೇಶಕ ಸುಭಾಷ್ ಘಾಯ್, ವಿಕಾಸ್ ಬಾಹ್ಲ್, ಕೈಲಾಶ್ ಖೇರ್ ವಿರುದ್ಧ ಆರೋಪಗಳು ಕೇಳಿಬಂದ್ವು. ಹಾಗೇ, ನಿರ್ದೇಶಕ ಸಾಜಿದ್ ಖಾನ್ ಮುಖವಾಡವನ್ನೂ ಮೂವರು ಮಹಿಳೆಯರು ಕಳಚಿದ್ದಾರೆ.
ಸಾಜಿದ್ ಖಾನ್ ಕಾಮ ಪುರಾಣವನ್ನ ನಟಿ ರೇಚಲ್ ವೈಟ್, ಸಹಾಯಕ ನಿರ್ದೇಶಕಿ ಸಲೋನಿ ಛೋಪ್ರಾ ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಪುಂಖಾನುಪುಂಖವಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೆಲ್ಲ ನೋಡಿ ಸಾಜಿದ್ ಖಾನ್ ಸಹೋದರಿ ಫರಾ ಖಾನ್ ಹೃದಯ ಛಿದ್ರಗೊಂಡಿದೆ. ಸಾಜಿದ್ ಖಾನ್ ಹೇಳಿ ಕೇಳಿ ಬಾಲಿವುಡ್ ನ ಖ್ಯಾತ ನಿರ್ದೇಶಕ. ಹಾಗೇ ಆತನ ಸಹೋದರಿ ಫರಾ ಖಾನ್ ಕೂಡ ಬಾಲಿವುಡ್ ನಲ್ಲಿ ನೃತ್ಯ ಸಂಯೋಜನೆ ಹಾಗೂ ನಿರ್ದೇಶನದಿಂದ ಪ್ರಖ್ಯಾತಿ ಪಡೆದಿದ್ದಾರೆ.

ಇಂತಿಪ್ಪ ಫರಾ ಖಾನ್, ಸಾಜಿದ್ ಖಾನ್ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ - ''ಇದು ನಮ್ಮ ಕುಟುಂಬಕ್ಕೆ ಹೃದಯ ಛಿದ್ರವಾಗುವ ಸಮಯ. ನನ್ನ ಸಹೋದರನ ನಡವಳಿಕೆ ಹಾಗಿದ್ದರೆ, ಅದನ್ನ ಆತ ಸರಿಪಡಿಸಿಕೊಳ್ಳಲೇಬೇಕು. ಆತನ ವರ್ತನೆಯನ್ನ ನಾನು ಎಂದೂ ಸಮರ್ಥಿಸಿಕೊಳ್ಳುವುದಿಲ್ಲ. ನೊಂದ ಮಹಿಳೆಯರ ಪರವಾಗಿ ನಾನು ದನಿ ಎತ್ತುತ್ತೇನೆ''
ಸಾಜಿದ್ ವಿರುದ್ಧ ಆರೋಪಗಳ ಸುರಿಮಳೆಯಾದ್ಮೇಲೆ, 'ಹೌಸ್ ಫುಲ್-4' ಶೂಟಿಂಗ್ ಕ್ಯಾನ್ಸಲ್ ಮಾಡುವಂತೆ ನಿರ್ಮಾಪಕರಿಗೆ ನಟ ಅಕ್ಷಯ್ ಕುಮಾರ್ ಮನವಿ ಮಾಡಿದ್ದರು. ಇದರಿಂದ ನೈತಿಕ ಹೊಣೆ ಹೊತ್ತ ಸಾಜಿದ್ ಖಾನ್ 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ.


Click it and Unblock the Notifications











