twitter
    For Quick Alerts
    ALLOW NOTIFICATIONS  
    For Daily Alerts

    ಸಾಜಿದ್ ಖಾನ್ ವಿರುದ್ಧ ಆರೋಪಗಳನ್ನು ಕೇಳಿ ಸಹೋದರಿ ಫರಾ ಖಾನ್ ಹೃದಯ ಛಿದ್ರ.!

    |

    Recommended Video

    ಮೀಟೂ ಅಭಿಯಾನ : ಸಾಜಿದ್ ಖಾನ್ ವರ್ತನೆ ಖಂಡಿಸಿದ ಫರಾ ಖಾನ್ | FILMIBEAT KANNADA

    #ಮೀಟೂ ಅಭಿಯಾನ ಬಾಲಿವುಡ್ ನಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಂತೆಯೇ, ನಿರ್ದೇಶಕ ಸುಭಾಷ್ ಘಾಯ್, ವಿಕಾಸ್ ಬಾಹ್ಲ್, ಕೈಲಾಶ್ ಖೇರ್ ವಿರುದ್ಧ ಆರೋಪಗಳು ಕೇಳಿಬಂದ್ವು. ಹಾಗೇ, ನಿರ್ದೇಶಕ ಸಾಜಿದ್ ಖಾನ್ ಮುಖವಾಡವನ್ನೂ ಮೂವರು ಮಹಿಳೆಯರು ಕಳಚಿದ್ದಾರೆ.

    ಸಾಜಿದ್ ಖಾನ್ ಕಾಮ ಪುರಾಣವನ್ನ ನಟಿ ರೇಚಲ್ ವೈಟ್, ಸಹಾಯಕ ನಿರ್ದೇಶಕಿ ಸಲೋನಿ ಛೋಪ್ರಾ ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಪುಂಖಾನುಪುಂಖವಾಗಿ ಬಿಚ್ಚಿಟ್ಟಿದ್ದಾರೆ.

    ನಿರ್ದೇಶಕ ಸಾಜಿದ್ ಖಾನ್ 'ಕಾಮಪುರಾಣ' ಬಿಚ್ಚಿಟ್ಟ ನಟಿ ಮತ್ತು ಪತ್ರಕರ್ತೆನಿರ್ದೇಶಕ ಸಾಜಿದ್ ಖಾನ್ 'ಕಾಮಪುರಾಣ' ಬಿಚ್ಚಿಟ್ಟ ನಟಿ ಮತ್ತು ಪತ್ರಕರ್ತೆ

    ಇದನ್ನೆಲ್ಲ ನೋಡಿ ಸಾಜಿದ್ ಖಾನ್ ಸಹೋದರಿ ಫರಾ ಖಾನ್ ಹೃದಯ ಛಿದ್ರಗೊಂಡಿದೆ. ಸಾಜಿದ್ ಖಾನ್ ಹೇಳಿ ಕೇಳಿ ಬಾಲಿವುಡ್ ನ ಖ್ಯಾತ ನಿರ್ದೇಶಕ. ಹಾಗೇ ಆತನ ಸಹೋದರಿ ಫರಾ ಖಾನ್ ಕೂಡ ಬಾಲಿವುಡ್ ನಲ್ಲಿ ನೃತ್ಯ ಸಂಯೋಜನೆ ಹಾಗೂ ನಿರ್ದೇಶನದಿಂದ ಪ್ರಖ್ಯಾತಿ ಪಡೆದಿದ್ದಾರೆ.

    Farah Khan reacts to sexual harassment allegations against brother Sajid Khan

    ಕಡೆಗೂ ಕಠಿಣ ನಿರ್ಧಾರ ಕೈಗೊಂಡ ಅಕ್ಷಯ್.! ಬಾಲಿವುಡ್ ನಲ್ಲೀಗ ಒಳ್ಳೆ ಬೆಳವಣಿಗೆ.! ಕಡೆಗೂ ಕಠಿಣ ನಿರ್ಧಾರ ಕೈಗೊಂಡ ಅಕ್ಷಯ್.! ಬಾಲಿವುಡ್ ನಲ್ಲೀಗ ಒಳ್ಳೆ ಬೆಳವಣಿಗೆ.!

    ಇಂತಿಪ್ಪ ಫರಾ ಖಾನ್, ಸಾಜಿದ್ ಖಾನ್ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ - ''ಇದು ನಮ್ಮ ಕುಟುಂಬಕ್ಕೆ ಹೃದಯ ಛಿದ್ರವಾಗುವ ಸಮಯ. ನನ್ನ ಸಹೋದರನ ನಡವಳಿಕೆ ಹಾಗಿದ್ದರೆ, ಅದನ್ನ ಆತ ಸರಿಪಡಿಸಿಕೊಳ್ಳಲೇಬೇಕು. ಆತನ ವರ್ತನೆಯನ್ನ ನಾನು ಎಂದೂ ಸಮರ್ಥಿಸಿಕೊಳ್ಳುವುದಿಲ್ಲ. ನೊಂದ ಮಹಿಳೆಯರ ಪರವಾಗಿ ನಾನು ದನಿ ಎತ್ತುತ್ತೇನೆ''

    ನೈತಿಕ ಹೊಣೆ ಹೊತ್ತು ಡೈರೆಕ್ಟರ್ ಕ್ಯಾಪ್ ಕಳಚಿದ ನಿರ್ದೇಶಕ ಸಾಜಿದ್ ಖಾನ್.! ನೈತಿಕ ಹೊಣೆ ಹೊತ್ತು ಡೈರೆಕ್ಟರ್ ಕ್ಯಾಪ್ ಕಳಚಿದ ನಿರ್ದೇಶಕ ಸಾಜಿದ್ ಖಾನ್.!

    ಸಾಜಿದ್ ವಿರುದ್ಧ ಆರೋಪಗಳ ಸುರಿಮಳೆಯಾದ್ಮೇಲೆ, 'ಹೌಸ್ ಫುಲ್-4' ಶೂಟಿಂಗ್ ಕ್ಯಾನ್ಸಲ್ ಮಾಡುವಂತೆ ನಿರ್ಮಾಪಕರಿಗೆ ನಟ ಅಕ್ಷಯ್ ಕುಮಾರ್ ಮನವಿ ಮಾಡಿದ್ದರು. ಇದರಿಂದ ನೈತಿಕ ಹೊಣೆ ಹೊತ್ತ ಸಾಜಿದ್ ಖಾನ್ 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ.

    English summary
    Farah Khan reacts to sexual harassment allegations against brother Sajid Khan.
    Saturday, October 13, 2018, 9:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X