ನೀನಾಸಂ ಅಶ್ವತ್ಥ ವಿರುದ್ಧ ನೌಕರರ ಆರೋಪ: ಸ್ಪಷ್ಟನೆ ನೀಡಿದ ನಟ
ಮುಂಗಾರು ಮಳೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ನೀನಾಸಂ ಅಶ್ವತ್ಥ್ ವಿರುದ್ಧ ಅವರ ಫಾರ್ಮ್ ಹೌಸ್‌ನ ನೌಕರರು ಆರೋಪ ಮಾಡಿದ್ದಾರೆ.
ರೈತನೂ ಆಗಿರುವ ನಟ ನೀನಾಸಂ ಅಶ್ವತ್ಥ್ ಅವರು ಮೈಸೂರಿನ ಯಾಚನಹಳ್ಳಿಯಲ್ಲಿ ಹಸುಗಳ ಫಾರಂ ನಡೆಸುತ್ತಿದ್ದಾರೆ. ಹಸುಗಳನ್ನು ನೋಡಿಕೊಳ್ಳಲು ಹಾಗೂ ಇತರೆ ಕೃಷಿ ಕೆಲಸಕ್ಕೆ ಕೆಲವು ಕೆಲಸಗಾರರನ್ನು ಅವರು ನೇಮಿಸಿಕೊಂಡಿದ್ದಾರೆ. ಇದೇ ನೌಕರರು ಅಶ್ವತ್ಥ್ ವಿರುದ್ಧ ಈಗ ಆರೋಪ ಮಾಡಿದ್ದಾರೆ.
'ನಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಅಷ್ಟೇ ಅಲ್ಲದೆ, ನಮ್ಮನ್ನು ನಮ್ಮ ಊರಿಗೆ ಹೋಗಲು ಸಹ ನೀನಾಸಂ ಅಶ್ವತ್ಥ್ ಬಿಡುತ್ತಿಲ್ಲ' ಎಂದು ಕೆಲವು ನೌಕರರು ಆರೋಪಿಸಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ನೀನಾಸಂ ಅಶ್ವತ್ಥ್, ನಾನು ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿದ್ದೇನೆ. ಪ್ರಸ್ತುತ ಫಾರಂ ಹೌಸ್‌ನಲ್ಲಿ ಹೆಚ್ಚು ಕೆಲಸಗಾರರು ಇಲ್ಲ, ಅವರು ಬಂದ ಮೇಲೆ ಊರಿಗೆ ಹೋಗಿ ಎಂದು ಹೇಳಿದ್ದೇನೆ ಅಷ್ಟೆ ಎಂದು ಹೇಳಿದ್ದಾರೆ.
Recommended Video
2018 ರ ಸಮಯದಲ್ಲಿ ಸಹ ನೀನಾಸಂ ಅಶ್ವತ್ಥ್ ವಿರುದ್ಧ ಹಣ ವಂಚನೆ ಆರೋಪ ಕೇಳಿಬಂದಿತ್ತು. ಅವರ ಗೆಳೆಯ ರಜತ್ ಎಂಬುವರು ನೀನಾಸಂ ವಿರುದ್ಧ 18 ಲಕ್ಷ ರೂಪಾಯಿ ಹಣ ವಂಚನೆ ಪ್ರಕರಣ ದಾಖಲಿಸಿದ್ದರು. ಸಾಲವಾಗಿ 18 ಲಕ್ಷ ಹಣ ಪಡೆದು ಫಾರಂ ಹೌಸ್‌ನಲ್ಲಿ ಪಾಲುದಾರಿಕೆ ಕೊಡುತ್ತೀನಿ ಎಂದು ಹೇಳಿ ಪಾಲುದಾರಿಕೆಯೂ ಕೊಡದೆ, ಹಣವನ್ನೂ ಕೊಡದೆ ವಂಚಿಸಿದ್ದಾರೆ ಎಂದು ರಜತ್ ಆರೋಪಿಸಿದ್ದರು. ಈ ಆರೋಪವನ್ನೂ ಸಹ ನೀನಾಸಂ ಸತೀಶ್ ತಳ್ಳಿ ಹಾಕಿದ್ದರು.


Click it and Unblock the Notifications











