twitter
    For Quick Alerts
    ALLOW NOTIFICATIONS  
    For Daily Alerts

    ರೈತರ ಹೋರಾಟ: ದಕ್ಷಿಣ ಭಾರತದ ಕಲಾವಿದರ ಮೌನಕ್ಕೆ ಕಾರಣವೇನು?

    By ಫಿಲ್ಮ್ ಡೆಸ್ಕ್
    |

    ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ರೈತ ಹೋರಾಟಕ್ಕೆ ಜಾಗತಿಕ ಗಣ್ಯರು ಬೆಂಬಲ ನೀಡುತ್ತಿದ್ದಾರೆ. ರಿಹಾನ್ನಾ, ಮಿಯಾ ಖಲೀಫಾ, ಗ್ರೇಟಾ ಥನ್ ಬರ್ಗ್ ಸೇರಿದಂತೆ ಅನೇಕರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

    ಖ್ಯಾತ ಪಾಪ್ ಗಾಯಕಿ ಮತ್ತು ನಟಿ ರಿಹಾನ್ನಾ ಭಾರತದ ರೈತರ ಪರ ಧ್ವನಿ ಎತ್ತುತ್ತಿದ್ದಂತೆ, ಮೌನವಾಗಿದ್ದ ಬಾಲಿವುಡ್ ಸಿಡಿದೆದ್ದಿದೆ. ರಿಹಾನ್ನಾ, ಮಿಯಾ ವಿರುದ್ಧ ಮುಗಿಬಿದ್ದಿದ್ದಾರೆ. ರಿಹಾನ್ನಾರ ಒಂದೇ ಒಂದು ವಾಕ್ಯ ರೈತ ಹೋರಾಟದ ದಿಕ್ಕನ್ನೆ ಬದಲಾಯಿಸಿದೆ. ಭಾರತೀಯರು ಸಾರ್ವಭೌಮ, ಸಮಗ್ರತೆಯನ್ನು ಪ್ರಶ್ನಿಸಿಕೊಳ್ಳುವಂತಾಗಿದೆ.

    ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಕೆರಳಿಸಿತೆ? ಟ್ರೆಂಡ್ ಆಯ್ತು #AntiNationalBollywood.!ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಕೆರಳಿಸಿತೆ? ಟ್ರೆಂಡ್ ಆಯ್ತು #AntiNationalBollywood.!

    ರೈತ ಹೋರಾಟದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಇಷ್ಟಾದರೂ ಸಹ ದಕ್ಷಿಣ ಭಾರತದ ಕಲಾವಿದರು ಯಾರು ಸಹ ತುಟಿಬಿಚ್ಚದೆ ಇರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಪರ-ವಿರೋಧ ಚರ್ಚೆಯಲ್ಲಿ ದಕ್ಷಿಣ ಭಾರತದ ಕಲಾವಿದರು ಸಹ ತಮ್ಮ ನಿಲುವು ಸ್ಪಷ್ಟಪಡಿಸಲಿ ಎನ್ನುವ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.

    Farmers Protest: Whats the reason for silence of South India Artists

    ಪ್ರತಿಯೊಂದು ವಿಚಾರಗಳಿಗೂ ಸ್ಪಂದಿಸುತ್ತಿದ್ದ ಕನ್ನಡ, ತಮಿಳು, ತೆಲುಗು ಮಲಯಾಳಂನ ಖ್ಯಾತ ಕಲಾವಿದರು ರೈತರ ವಿಚಾರದಲ್ಲಿ ಮೌನವಾಗಿರುವುದೇಕೆ ಎನ್ನುವ ಪ್ರಶ್ನೆ ಎದ್ದಿದೆ. ನಟ ಕಮಲ್ ಹಾಸನ್, ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಮತ್ತು ಕನ್ನಡದ ಕಲಾವಿದರಾದ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಕಲಾವಿದರ ಮೌನ ಯಾಕೆ ಎನ್ನುವುದು ಕೆಲವರ ಪ್ರಶ್ನೆಯಾಗಿದೆ.

    ಬಾಲಿವುಡ್ ಕಲಾವಿದರಿಗೆ ಪ್ರತಿಕ್ರಿಯೆ ನೀಡಲೆಬೇಕಾದ ಅನಿವಾರ್ಯತೆ ಎದುರಾಗಿದೆ. ಅದೇ ಅನಿವಾರ್ಯತೆಯಿಂದ ನೊಂದ ರೈತರ ಪರ ನಿಂತ ಜಾಗತಿಕ ಕಲಾವಿದರಿಗೆ ತಿರುಗೇಟು ನೀಡುತ್ತಿದ್ದಾರೆ. ನಮ್ಮ ದೇಶದ ವಿಚಾರಕ್ಕೆ ಬರಬೇಡಿ ಎಂದು ಎಚ್ಚರಿಕೆ ನೀಡುವ ಕಾಪಿ ಪೇಸ್ಟ್ ಟ್ವೀಟ್ ಗಳನ್ನು ಹರಿಬಿಡುತ್ತಿದ್ದಾರೆ.

    ಬಾಲಿವುಡ್ ಕಲಾವಿದರ ಟ್ವೀಟ್ ಗಳು ಚರ್ಚೆಗೆ ಗ್ರಾಸವಾಗಿದ್ದು, ಜಗತ್ತು ಗೊಳ್ಳೆಂದು ನಗುತ್ತಿದೆ. ರೈತ ಹೋರಾಟ ಬೇರೆ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಸಮಯದಲ್ಲಿ ದಕ್ಷಿಣದ ಕಲಾವಿದರು ತುಟಿಬಿಚ್ಚುವ ಗೋಜಿಗೆ ಹೋಗಿಲ್ಲ. ಒಂದು ವೇಳೆ ಯಾರ ಪರ ಮಾತನಾಡಿದರೂ ಸಹ ಒಂದು ವರ್ಗದ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ. ಹಾಗಾಗಿ ಯಾರ ವಿರೋಧವನ್ನು ಕಟ್ಟಿಕೊಳ್ಳಲು ತಯಾರಿಲ್ಲದ ದಕ್ಷಿಣದ ಕಲಾವಿದರು ಮೌನವೇ ಲೇಸೆಂದು ಕುಳಿತಂತಿದೆ.

    Recommended Video

    ಇಂದು ಸಂಜೆ ಗೊತ್ತಾಗಲಿದೆ ಮದಗಜ ಹೊಸ ಅಪ್ಡೇಟ್ | Filmibeat Kannada

    ಇನ್ನು ಕನ್ನಡದ ಕಲಾವಿದರ ವಿಚಾರಕ್ಕೆ ಬರುವುದಾದರೆ ರೈತರ ಪರ ಮಾತನಾಡಿಲ್ಲ ಅಂತೇನಿಲ್ಲ. ಅನೇಕ ಬಾರಿ ಅನ್ನದಾತರ ಪರ ಬೀದಿಗಿಳಿದು ಹೋರಾಟ ಮಾಡಿದ ಉದಾಹರಣೆ ಇದೆ. ಆದರೀಗ ರೈತರ ಹೋರಾಟ ಜಾಗತಿಕ ಮಟ್ಟದ ಗಮನ ಸೆಳೆದಿದೆ, ತ್ರೀವ್ರ ಸ್ವರೂಪ ಪಡೆದುಕೊಂಡಿದೆ ಈ ಸಮಯದಲ್ಲಿ ದಕ್ಷಿಣ ಭಾರತದ ಕಲಾವಿದರ ನಿಲುವು ಏನು ಎನ್ನುವುದು ಜನ ಸಾಮಾನ್ಯರ ಕುತೂಹಲ.

    English summary
    Farmers Protest: What's the reason for silence of South India Artists.
    Monday, February 8, 2021, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X