ಅಪ್ಪು ಅಭಿಮಾನಿಗಳಿಗೆ, ಇಲ್ಲಿದೆ ಒಂದು ಗುಡ್ ನ್ಯೂಸ್

By Suneetha

ನಿರ್ದೇಶಕ ದುನಿಯಾ ಸೂರಿ ಅವರು ಹೊಸಬರನ್ನು ಹಾಕಿಕೊಂಡು ಮಾಡಿದ 'ಕೆಂಡಸಂಪಿಗೆ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಒಂದನ್ನು ಹುಟ್ಟುಹಾಕಿದೆ, ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

ಜೊತೆಗೆ ಭಂಡಾರಿ ಸಹೋದರರ 'ರಂಗಿತರಂಗ' ಭರ್ಜರಿ ಯಶಸ್ಸು ಗಳಿಸಿದ ನಂತರ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ವಿಶೇಷ ಶಕುನವೊಂದು ಒಲಿದಿದ್ದು, ಹೊಸಬರ ಚಿತ್ರಗಳನ್ನು ಪ್ರೇಕ್ಷಕರು ವೀಕ್ಷಿಸಿ ಅಭಿಮಾನದಿಂದ ಸ್ವೀಕರಿಸುತ್ತಿದ್ದಾರೆ.

ಇದೀಗ ಹಿಟ್ ನಿರ್ದೇಶಕ ದುನಿಯಾ ಸೂರಿ ಅವರು ತಮ್ಮ ಮುಂದಿನ ಚಿತ್ರದ ಮೂಲಕ ಅಪ್ಪು ಫ್ಯಾನ್ಸ್ ಗೆ ಒಂದು ಶುಭ ಸುದ್ದಿ ತಂದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಭರಪೂರವಾಗಿ ಸಾಗುತ್ತಿದೆ.[ಎಕ್ಸ್ ಕ್ಲೂಸಿವ್ : ಪುನೀತ್ 'ದೊಡ್ಮನೆ ಹುಡುಗ' ವರ್ಕಿಂಗ್ ಸ್ಟಿಲ್ಸ್]

puneeth rajkumar

ನಿರ್ದೇಶಕ ದುನಿಯಾ ಸೂರಿ ಹಾಗೂ ಇಡೀ 'ದೊಡ್ಮನೆ ಹುಡುಗ' ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ತರಾತುರಿಯಲ್ಲಿದ್ದು, ಈಗಾಗಲೇ ಡಬ್ಬಿಂಗ್ ಹಾಗೂ ರಿ-ರೇಕಾರ್ಡಿಂಗ್ ಮುಂತಾದ ಕಾರ್ಯಗಳಲ್ಲಿ ಬ್ಯುಸಿಯಾಗಿದೆ.

ಪ್ಲಾನ್ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕಾದಿದೆ. ಅದೇನಪ್ಪಾ ಅಂದ್ರೆ ಪುನೀತ್ ಹಾಗೂ ರಾಧಿಕಾ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಟ್ರೈಲರ್ ಅನ್ನು 'ಕೆಂಡಸಂಪಿಗೆ' ಪ್ರದರ್ಶನ ಆಗುವ ಸಂದರ್ಭದಲ್ಲಿ ಬಿಗ್ ಸ್ಕ್ರೀನ್ ನಲ್ಲಿ ಪ್ರದರ್ಶನಗೊಳಿಸುವ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಸೂರಿ.[ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ]

ಹೊಸಮುಖಗಳಾದ ಮಾನ್ವಿತ ಹರೀಶ್ ಹಾಗೂ ವಿಕ್ಕಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಕೆಂಡಸಂಪಿಗೆ' ಗಿಣಿಮರಿ ಕೇಸ್ ಪಾರ್ಟ್ 2nd, ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ.

ಈಗಾಗಲೇ 'ದೊಡ್ಮನೆ ಹುಡುಗ' ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದು, ಟ್ರೈಲರ್ ನ ಡಬ್ಬಿಂಗ್ ಹಾಗೂ ರಿ-ರೇಕಾರ್ಡಿಂಗ್ ಕಾರ್ಯ ನಡೆಯುತ್ತಿದೆ.[ಕಂಬಿ ಎಣಿಸುತ್ತಿದ್ದಾರೆ ಪವರ್ ಸ್ಟಾರ್ ಪುನೀತ್!]

puneeth rajkumar

ಎಲ್ಲವೂ ಅಂದುಕೊಂಡಂತೆ ನಡೆದರೆ ಆದಷ್ಟು ಬೇಗ ಕೆಲಸಗಳನ್ನು ಮುಗಿಸಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಬಿಗ್ ಸ್ಕ್ರೀನ್ ನಲ್ಲಿ ಥಿಯೇಟರ್ ಗಳಲ್ಲಿ 'ಕೆಂಡಸಂಪಿಗೆ' ಪ್ರದರ್ಶನ ಆಗುವ ಸಂದರ್ಭದಲ್ಲಿ ಪ್ರದರ್ಶಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ನಿರ್ದೇಶಕ ಸೂರಿ ಅವರು ಖ್ಯಾತ ದಿನಪತ್ರಿಕೆ ಒಂದಕ್ಕೆ ಹೇಳಿಕೆ ನೀಡಿದ್ದಾರೆ.[ಅಪ್ಪು ಜೊತೆ 'ದೊಡ್ಮನೆ' ಮಗನಾದ 'ಮದರಂಗಿ' ಕೃಷ್ಣ]

ಅದೇನೇ ಇರಲಿ ಪುನೀತ್ ರಾಜ್ ಕುಮಾರ್ ಅವರ 'ಪವರ್' ಚಿತ್ರದ ನಂತರ ಹೊಸ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುವ ಅಪ್ಪು ಅಭಿಮಾನಿಗಳಿಗೆ ನಿರ್ದೆಶಕರು ಭರ್ಜರಿ ಗಿಫ್ಟ್ ನೀಡಲಿದ್ದಾರೆ.

ಇನ್ನು ಚಿತ್ರದಲ್ಲಿ ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ರವಿಶಂಕರ್ ಹಾಗೂ ಚಿಕ್ಕಣ್ಣ ಮುಂತಾದವರ ತಾರಾಗಣವಿದೆ.

More from Filmibeat

English summary
Kannada movie Dodmane Huduga is that, director Soori and team are working on DI, dubbing and re-recording of the trailer of the movie. If everything goes according to the planning, the big screens will show Puneeth starrer Dodmanae Huduga's trailer in theatres where Kendasampige is screening.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X