For Quick Alerts
  ALLOW NOTIFICATIONS  
  For Daily Alerts

  ಪೈರಸಿ ತಡೆಯಲು 'ಫೆಂಡೆ' ಮದ್ದು: ಭರವಸೆ ಮೂಡಿಸಿದ ಹೊಸ ಆವಿಷ್ಕಾರ

  |

  ಪೈರಸಿ, ಸಿನಿಮಾರಂಗವನ್ನು ಕಾಡುತ್ತಿರುವ ದೊಡ್ಡ ಭೂತ. ಒಟಿಟಿಗಳ ಈ ಕಾಲದಲ್ಲಂತೂ ಪೈರಸಿ ಎನ್ನುವುದು ಬಹಳ ಸುಲಭವಾಗಿಬಿಟ್ಟಿದೆ.

  ಆದರೆ ಪೈರಸಿ ತಡೆಯಲು ಹೊಸ ಆಪ್‌ ಒಂದನ್ನು ದುರ್ಗಾ ಪ್ರಸಾದ್ ಮತ್ತು ರಾಹುಲ್ ರೆಡ್ಡಿ ಎಂಬುವರು ಆವೀಷ್ಕರಿಸಿದ್ದು, ಈ ಆಪ್ ಬಳಕೆಯಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವ ಸಿನಿಮಾಗಳನ್ನು ಪೈರಸಿ ಮಾಡುವುದು ಅಸಾಧ್ಯವಾಗಲಿದೆ.

  ನಯನತಾರ 'ಮೂಕುತಿ ಅಮ್ಮನ್' ಚಿತ್ರಕ್ಕೆ ಮೊದಲ ದಿನವೇ ಆಘಾತನಯನತಾರ 'ಮೂಕುತಿ ಅಮ್ಮನ್' ಚಿತ್ರಕ್ಕೆ ಮೊದಲ ದಿನವೇ ಆಘಾತ

  ದುರ್ಗಾಪ್ರಸಾದ್ ಮತ್ತು ರಾಹುಲ್ ರೆಡ್ಡಿ ಅವರು ಹೇಳಿರುವಂತೆ, ಆಪ್ ಅನ್ನು ಚಿತ್ರಮಂದಿರದಲ್ಲಿ ಅಳವಡಿಸಿದರೆ, ಯಾವುದೇ ವ್ಯಕ್ತಿ ಚಿತ್ರಮಂದಿರದಲ್ಲಿ ಕೂತು, ಮೊಬೈಲ್‌ನಿಂದ ಸಿನಿಮಾ ದೃಶ್ಯವನ್ನು ಚಿತ್ರೀಕರಿಸಲು ಯತ್ನಿಸಿದರೆ, ಮೊಬೈಲ್‌ನಲ್ಲಿ ದೃಶ್ಯ ಸೆರೆಯಾಗುತ್ತದೆ, ಆದರೆ ಅದರ ಶಬ್ದ ಮೊಬೈಲ್‌ನಲ್ಲಿ ದಾಖಲಾಗುವುದಿಲ್ಲ.

  ಅಷ್ಟೇ ಅಲ್ಲದೆ, ಚಿತ್ರಮಂದಿರದ ಯಾವ ಜಾಗದಲ್ಲಿ ಕೂತು ವ್ಯಕ್ತಿಯು ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿದ್ದಾನೆ ಎಂದು ಗುರುತಿಸುತ್ತದೆ ಅಷ್ಟೇ ಅಲ್ಲದೆ, ಚಿತ್ರಮಂದಿರ ಮಾಲೀಕರಿಗೆ, ಸಮೀಪದ ಪೊಲೀಸ್ ಠಾಣೆಗೂ ಸಹ ಸಂದೇಶ ಹೋಗುತ್ತದೆಯಂತೆ.

  ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್

  ಇಂದು ಈ ಆಪ್‌ ಅನ್ನು ನಟ ಪುನೀತ್ ರಾಜ್‌ಕುಮಾರ್ ಬಿಡುಗಡೆ ಗೊಳಿಸಿದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟಿ ಶ್ರುತಿ ಹಾಗು ಇನ್ನೂ ಕೆಲವರು ಈ ಆಪ್ ಅನ್ನು ಅಲ್ಲಿಯೇ ಪರೀಕ್ಷಿಸಿದರು, ಮೊಬೈಲ್‌ನಲ್ಲಿ ದೃಶ್ಯ ರೆಕಾರ್ಡ್ ಆಯಿತಾದರೂ ಧ್ವನಿ ರೆಕಾರ್ಡ್ ಆಗಲಿಲ್ಲ.

  English summary
  Actor Puneeth Rajkumar released Fende App which said to be prevent movie piracy which happen in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X