»   » ಅಂತರರಾಷ್ಟ್ರೀಯ ಚಲಚ್ಚಿತ್ರೋತ್ಸವಕ್ಕೆ ನೀಲಾ,

ಅಂತರರಾಷ್ಟ್ರೀಯ ಚಲಚ್ಚಿತ್ರೋತ್ಸವಕ್ಕೆ ನೀಲಾ,

Posted By: Staff
Subscribe to Filmibeat Kannada

ಬೆಂಗಳೂರು - 32ನೇ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಕನ್ನಡ ನಾಲ್ಕು ಚಿತ್ರಗಳು ಆಯ್ಕೆಯಾಗಿವೆ.

ಟಿ. ಎಸ್‌. ನಾಗಾಭರಣ ನಿರ್ದೇಶನದ ನೀಲಾ, ಪಿ. ಶೇಷಾದ್ರಿ ಅವರ ಮುನ್ನುಡಿ, ಟಿ.ಎನ್‌. ಸೀತಾರಾಮ್‌ ಅವರ ಮತದಾನ, ಪಿ.ಆರ್‌. ರಾಮದಾಸ ನಾಯ್ಡು ಅವರ ಮುಸ್ಸಂಜೆ ಚಿತ್ರಗಳು ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಗಲಿವೆ.

ಅಲ್ಲದೆ, ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರ ಜೀವನ ಸಾಧನೆ ಕುರಿತ ' ರಾಜ್‌ಕುಮಾರ್‌- ಒಂದು ಜೀವಂತ ದಂತ ಕತೆ " ಸಾಕ್ಷ್ಯ ಚಿತ್ರ ಪ್ರಮುಖವಾಗಿದೆ. ಕವಿತಾ ಲಂಕೇಶ್‌ರ 'ಸ್ಕಿೃಬಲ್ಸ್‌ ಆನ್‌ ಅಕ್ಕ" ಕೂಡ ಪ್ರದರ್ಶನಗೊಳ್ಳಲಿರುವ ಸಾಕ್ಷ್ಯ ಚಿತ್ರಗಳ ಪಟ್ಟಿಯಲ್ಲಿ ಸೇರಿದೆ.

ಎಂ. ಎಸ್‌. ಸತ್ಯು ಅಧ್ಯಕ್ಷತೆಯಸಮಿತಿಯಲ್ಲಿ ಪ್ರತಿಭಾ ನಂದಕುಮಾರ್‌, ವೈಜಯಂತಿ ಕಾಶಿ, ರಾಮಚಂದ್ರ ಅವರನ್ನೊಳಗೊಂಡ ಸಮಿತಿ ಉದ್ಘಾಟನಾ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಂತಿಮಗೊಳಿಸಿದೆ.

ಟಿಕೇಟ್‌ ದರ : ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಚಿತ್ರಗಳ ವೀಕ್ಷಣೆಗಾಗಿಸಾರ್ವಜನಿಕರಿಗೆ ಟಿಕೇಟು ಮಾರಾಟದ ಹೊಣೆಯನ್ನು ಕರ್ನಾಟಕ ಚಲನ ಚಿತ್ರ ಉದ್ಯಮ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ಕನ್ನಡ ಚಿತ್ರಗಳಿಗೆ 10 ಮತ್ತು 20 ರೂ. ಹಾಗೂ ಕನ್ನಡೇತರ ಚಿತ್ರಗಳ ವೀಕ್ಷಣೆಗಾಗಿ 20 ಹಾಗೂ 40 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಚಿತ್ರೋತ್ಸವದ ಚಿತ್ರಗಳನ್ನು ಪ್ರದರ್ಶಿಸುವ ಮಂದಿರಗಳಲ್ಲಿಯೇ ಟಿಕೇಟ್‌ ಮಾರಾಟ ವ್ಯವಸ್ಥೆಯಿದೆ. 

English summary
Bangalore : Four kannada movies will be screened in international film festival

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada