For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನ ಕೆಲವರಿಗೆ ಡ್ರಗ್ಸ್ ಚಟವಿದೆ: ಪ್ರಶಾಂತ್ ಸಂಬರಗಿ

  |

  ಕೊರೊನಾ ಕಾರಣದಿಂದಾಗಿ ಸಿನಿಮಾ ಉದ್ಯಮ ತಟಸ್ಥವಾಗಿ ಸಂಕಷ್ಟದಲ್ಲಿರುವ ಈ ಸಮಯದಲ್ಲಿಯೇ ಚಂದನವನಕ್ಕೆ ಡ್ರಗ್ ಕಳಂಕ ಅಂಟಿಕೊಂಡಿದೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಇಂದು (ಆಗಸ್ಟ್ 27) ರಂದು ಎನ್‌ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ) ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಜೊತೆಗೆ ಮಹಿಳೆ ಸೇರಿ ಮೂವರನ್ನು ಬಂಧಿಸಿದೆ.

  ಈ ದಾಳಿಯಿಂದ ಬೆಳಕಿಗೆ ಬಂದಿರುವ ಅಂಶವೆಂದರೆ ಸ್ಯಾಂಡಲ್‌ವುಡ್‌ನ ಕೆಲವು ನಟ-ನಟಿಯರು, ಸಂಗೀತ ನಿರ್ದೇಶಕರಿಗೆ ಇವರಿಂದ ಡ್ರಗ್ಸ್ ಪೂರೈಕೆ ಆಗುತ್ತಿತ್ತಂತೆ. ಕೆಲವು ನಟ-ನಟಿಯರು ಮಾದಕ ವಸ್ತು ಮಾರಾಟಗಾರರ ಖಾಯಂ ಗ್ರಾಹಕರಾಗಿದ್ದಾರಂತೆ.

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ, ಅನಿಕಾ ಬಿಚ್ಚಿಟ್ಟ ಸೆಲೆಬ್ರಿಟಿಗಳ ನಂಟು!

  ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ಸಂಬರಗಿ, ಸ್ಯಾಂಡಲ್‌ವುಡ್‌ ನ ಹಾಗೂ ಧಾರಾವಾಹಿಯ ಕೆಲವು ನಟ-ನಟಿಯರಿಗೆ ಡ್ರಗ್ಸ್ ಚಟವಿರುವುದು ಸತ್ಯ ಎಂದಿದ್ದಾರೆ.

  ಜನಪ್ರಿಯ ಸ್ಟಾರ್‌ಗಳು ಡ್ರಗ್‌ನಿಂದ ದೂರ: ಸಂಬರಗಿ

  ಜನಪ್ರಿಯ ಸ್ಟಾರ್‌ಗಳು ಡ್ರಗ್‌ನಿಂದ ದೂರ: ಸಂಬರಗಿ

  ಚಂದನವನದ ಮುಖ್ಯ ನಟ-ನಟಿಯರಿಗೆ ಡ್ರಗ್‌ನ ಚಟವಿರುವುದು ನನ್ನ ಗಮನದಲ್ಲಿಲ್ಲ, ದೊಡ್ಡ ಸ್ಟಾರ್‌ಗಳು ಇಂಥಹುಗಳಿಂದ ದೂರವೇ ಉಳಿದಿರುತ್ತಾರೆ. ಆದರೆ ಕೆಲವರು ಇದ್ದಾರೆ, 'ಸಿ' ಗ್ರೇಡ್, 'ಬಿ' ಗ್ರೇಡ್ ನಟರು ಅವರಿಗೆ ಡ್ರಗ್ಸ್ ನಂಟು ಇರುವುದು ಸತ್ಯ ಎಂದಿದ್ದಾರೆ ಪ್ರಶಾಂತ್ ಸಂಬರಗಿ.

  'ಚಂದನವನಕ್ಕೆ ಡ್ರಗ್ ನಂಟು ಎಂದು ಹೇಳುವುದು ಸರಿಯಲ್ಲ'

  'ಚಂದನವನಕ್ಕೆ ಡ್ರಗ್ ನಂಟು ಎಂದು ಹೇಳುವುದು ಸರಿಯಲ್ಲ'

  'ಚಂದನವನದ ನಟರು ಡ್ರಗ್ಸ್ ಮಾಫಿಯಾದಲ್ಲಿದ್ದಾರೆ' ಎಂಬುದು ಸೂಕ್ತವಾದ ಹೇಳಿಕೆಯಲ್ಲ, ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುವ ಕೆಲವು ಜವಾಬ್ದಾರಿ ಹೀನ ನಟ-ನಟಿಯರು ಡ್ರಗ್ಸ್ ಚಟಕ್ಕೆ ಬಿದ್ದಿರುವುದು ನಿಜವೇ ಎಂದಿದ್ದಾರೆ ಪ್ರಶಾಂತ್ ಸಂಬರಗಿ.

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಡೀಲ್ ಆರೋಪ: ಸುಮಲತಾ, ರಾಕ್‌ಲೈನ್‌ ಹೇಳಿದ್ದೇನು?

  ಮಾದಕ ವಸ್ತು ಕುರಿತ ಜಾಗೃತಿಯಲ್ಲಿ ಭಾಗಿ

  ಮಾದಕ ವಸ್ತು ಕುರಿತ ಜಾಗೃತಿಯಲ್ಲಿ ಭಾಗಿ

  ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಸಂಬರಗಿ, ಚಿತ್ರರಂಗದಲ್ಲಿಯೂ ಹಲವಾರು ಗೆಳೆಯರನ್ನು ಹೊಂದಿದ್ದಾರೆ. ಡ್ರಗ್ಸ್ ವಿರುದ್ಧ ಈ ಹಿಂದೆ ನಗರ ಪೊಲೀಸರು ಮಾಡಿದ ಕೆಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಸಹ ಭಾಗವಹಿಸಿದ್ದರು.

  'ಬೆಂಗಳೂರು ಪಾರ್ಟಿ ಹಬ್ ಆಗಿ ಬದಲಾಗಿದೆ'

  'ಬೆಂಗಳೂರು ಪಾರ್ಟಿ ಹಬ್ ಆಗಿ ಬದಲಾಗಿದೆ'

  ಬೆಂಗಳೂರು ಪಾರ್ಟಿ ಹಬ್ ಆಗಿ ಬದಲಾಗಿದೆ. ಇಲ್ಲಿ ಡ್ರಗ್ಸ್ ಬಹಳ ಸುಲಭವಾಗಿ ಸಿಗುತ್ತಿದೆ. ಚಿರಂಜೀವಿ ಸರ್ಜಾ ತೀರಿಕೊಂಡಾಗಲೂ ಡ್ರಗ್ಸ್ ನ ಸುಳ್ಳು ಆರೋಪ ಮಾಡಲಾಗಿತ್ತು, ಆದರೆ ಅದಕ್ಕೆಲ್ಲಾ ಸ್ಪಷ್ಟನೆ ನೀಡಿಯಾಗಿದೆ. ಡ್ರಗ್ಸ್ ದಾಸರಾಗಿರುವವರನ್ನು ಚಟ ಬಿಡಿಸುವ ಕಾರ್ಯದಲ್ಲಿಯೂ ನಾನು ತೊಡಗಿಕೊಂಡಿದ್ದೇನೆ ಎಂದಿದ್ದಾರೆ ಸಂಬರಗಿ.

  English summary
  Few Sandalwod actors and actresses has drug addiction said Prashant Sambargi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X