ತಮ್ಮ ಜೀವನದ ಮುಖ್ಯವಾದ ವ್ಯಕ್ತಿಯನ್ನೇ ಫಾಲೋ ಮಾಡ್ತಿಲ್ವಾ ನಟ ದರ್ಶನ್?
ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋಗುವಂತಾದರೂ ಅಭಿಮಾನಿಗಳು ಬಿಟ್ಟುಕೊಡಲಿಲ್ಲ. ತಮ್ಮ ನೆಚ್ಚಿನ ನಟ ಪರ ನಿಂತರು.
ಇತ್ತೀಚೆಗೆ ನಟ ದರ್ಶನ್ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣ ಅದ್ಧೂರಿಯಾಗಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಸಾಧ್ಯವಿಲ್ಲ ಎಂದು ಹೇಳಿದ್ದರು. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಇತ್ತೀಚೆಗೆ ವೈರಲ್ ಆಗಿತ್ತು.

ಈ ಬಾರಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾರ್ಥಕಗೊಳಿಸಿದ್ದಾರೆ. ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಹೀಗೆ ತಮ್ಮ ಮೇಲೆ ಅಪಾರ ಪ್ರೀತಿ ತೋರಿಸಿದ ಅಭಿಮಾನಿಗಳಿಗೆ ದರ್ಶನ್ ಧನ್ಯವಾದ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 50ಕ್ಕೂ ಅಧಿಕ ಪೋಸ್ಟ್‌ಗಳನ್ನು ಮಾಡಿ ಅಭಿಮಾನಿಗಳು ಮಾಡಿದ ಪುಣ್ಯ ಕೆಲಸಗಳನ್ನು ಮೆಚ್ಚಿ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ನಟ ದರ್ಶನ್‌ಗೆ 23 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಮೊದಲೆಲ್ಲಾ ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಆಕ್ಟೀವ್ ಆಗಿ ಇರುತ್ತಿದ್ದ ದಾಸ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿ ಇರುವುದು ಗೊತ್ತಾಗುತ್ತಿದೆ. ಫೇಸ್‌ಬುಕ್, ಟ್ವಿಟ್ಟರ್‌ಗಿಂತ ಇನ್‌ಸ್ಟಾಗ್ರಾಮ್‌ನಲ್ಲೇ ಹೆಚ್ಚು ಫಾಲೋವರ್ಸ್ ಸಹ ಇದ್ದಾರೆ. ತಮ್ಮನ್ನು ಇನ್‌ಸ್ಟಾಗ್ರಾಮ್‌ನಲ್ಲಿ 23 ಲಕ್ಷ ಜನ ಫಾಲೋ ಮಾಡುತ್ತಿದ್ದರು ದರ್ಶನ್ ಕೇವಲ 6 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಅಚ್ಚರಿ ಎಂದರೆ ಪತ್ನಿ ವಿಜಯಲಕ್ಷ್ಮಿ ಅವರನ್ನೇ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿಲ್ಲ. ಮದರ್ ಇಂಡಿಯಾ ಸುಮಲತಾ ಅಂಬರೀಶ್, ಸಹೋದರ ಸಮಾನ ಅಭಿಷೇಕ್ ಅಂಬರೀಶ್, ಅವರ ಪತ್ನಿ ಅವಿವಾ ಬಿದ್ದಪ್ಪ, ಸಹೋದರ ದಿನಕರ್, ಪುತ್ರ ವಿನೀಶ್ ಹಾಗೂ ಡಿಕಂಪನಿ ಅಭಿಮಾನಿಗಳ ಪೇಜ್ ಅನ್ನು ಮಾತ್ರ ದರ್ಶನ್ ಫಾಲೋ ಮಾಡುತ್ತಿದ್ದಾರೆ.

ವಿಜಯಲಕ್ಷ್ಮಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಫೋಟೊ, ವೀಡಿಯೋ, ಸ್ಟೋರಿ ಹಂಚಿಕೊಳ್ಳುತ್ತಿರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಅಕೌಂಟ್ ಅನ್ನು 2 ಲಕ್ಷದ 50 ಸಾವಿರ ಜನ ಫಾಲೋ ಮಾಡುತ್ತಿದ್ದಾರೆ. ಆಕೆ ಮಾತ್ರ ಯಾರನ್ನೂ ಫಾಲೋ ಮಾಡ್ತಿಲ್ಲ.
ದರ್ಶನ್‌ಗೆ ಕಷ್ಟದ ಸಮಯದಲ್ಲಿ ಪತ್ನಿ ವಿಜಯಲಕ್ಷ್ಮಿ ಬೆಂಬಲವಾಗಿ ನಿಲ್ಲುತ್ತಾ ಬರುತ್ತಿದ್ದಾರೆ. ದರ್ಶನ್ ಇತ್ತೀಚೆಗೆ ಜೈಲು ಸೇರಿದಾಗ ಅವರನ್ನು ಹೊರಗೆ ಕರೆದುಕೊಂಡು ಬರಲು ವಿಜಯಲಕ್ಷ್ಮಿ ಬಹಳ ಹೋರಾಟ ನಡೆಸಿದ್ದರು. ವಕೀಲರ ಮೂಲಕ ಜಾಮೀನು ಪಡೆಯಲು ಯತ್ನಿಸುವುದರ ಜೊತೆ ಜೊತೆಗೆ ದೇವಸ್ಥಾನಗಳಲ್ಲಿ ಹರಕೆ ಕಟ್ಟಿಕೊಂಡಿದ್ದರು. ಆಕೆಯ ಹೋರಾಟದ ಬಗ್ಗೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಮಡದಿ, ಮಗ, ಸಹೋದರನ ಜೊತೆ ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಸಂಕ್ರಾಂತಿ ಆಚರಿಸಿದ್ದರು. ಅದೆಲ್ಲಾ ಸರಿ ದರ್ಶನ್ ಯಾಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ ವಿಜಯಲಕ್ಷ್ಮಿ ಅಕೌಂಟ್ ಫಾಲೋ ಮಾಡ್ತಿಲ್ಲ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಅಂಬಿ ಕುಟುಂಬದ ಮೂವರನ್ನು ಫಾಲೋ ಮಾಡುತ್ತಿರೋ ನೋಡಿ ಅವರ ಕುಟುಂಬದ ಮೇಲೆ ದರ್ಶನ್‌ಗೆ ಎಷ್ಟು ಅಭಿಮಾನ ಎನ್ನುತ್ತಿದ್ದಾರೆ.
ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಡೆವಿಲ್' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಶೀಘ್ರದಲ್ಲೇ ದರ್ಶನ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಇನ್ನು ಕೆಲ ಸಿನಿಮಾಗಳು ಲೈನಪ್‌ನಲ್ಲಿದೆ.


Click it and Unblock the Notifications











