ಪ್ರಜ್ವಲ್ ಮತ್ತು ವಿಜಯ್ ಸಿನಿಮಾಗಳ ವಾರ್: ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಗುರು ದೇಶಪಾಂಡೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಡುವೆ ವಾರ್ ಶುರುವಾಗಿದೆ. ಅಂದರೆ ಪ್ರಜ್ವಲ್ ಅಭಿನಯದ ಜಂಟಲ್ ಮನ್ ಸಿನಿಮಾ ಮತ್ತು ವಿಜಯ್ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಸಿನಿಮಾಗಳ ನಡುವೆ ಕಿತ್ತಾಟ ಪ್ರಾರಂಭವಾಗಿದೆ. ಈ ಎರಡು ಸಿನಿಮಾಗಳು ಒಂದೆ ದಿನ ಅಂದರೆ ಇದೆ ಶುಕ್ರವಾರ ತೆರೆಗೆ ಬರುತ್ತಿವೆ.

ಈ ಎರಡು ಸಿನಿಮಾಗೀಗ ಮುಖ್ಯ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ. ಸಂತೋಷ್ ಥಿಯೇಟರ್ ಗಾಗಿ ಈ ಎರಡು ಸಿನಿಮಾಗಳ ನಡುವೆ ಫೈಟ್ ನಡೆಯುತ್ತಿದೆ. ಸಂತೋಷ್ ಚಿತ್ರಮಂದಿರದಲ್ಲಿ ಜಂಟಲ್ ಮನ್ ಸಿನಿಮಾ ರಿಲೀಸ್ ಮಾಡುವುದಾಗಿ ಮೊದಲೆ ಮಾತುಕತೆ ನಡೆಸಿ, ಚಿತ್ರಮಂದಿರ ಫಿಕ್ಸ್ ಮಾಡಿಕೊಂಡಿತ್ತು ಚಿತ್ರತಂಡ. ಚಿತ್ರಮಂದಿರದ ಮಾಲಿಕ ಅರುಣ್ ಜಯಣ್ಣ ಜೊತೆ ಚಿತ್ರತಂಡ ಮಾತನಾಡಿ ಕನ್ಫರ್ಮ್ ಮಾಡಿಕೊಂಡಿದ್ದರು.

Fight Between Gentleman And Malgudi Days Movies For Theatre

ಆದರೆ ಚಿತ್ರಮಂದಿರದ ಮಾಲಿಕರು ಮಾಲ್ಗುಡಿ ಡೇಸ್ ಚಿತ್ರತಂಡದಿಂದ ಅಡ್ವಾನ್ಸ್ ಪಡೆದು ಚಿತ್ರಮಂದಿರವನ್ನು ಮಾಲ್ಗುಡಿ ಡೇಸ್ ಚಿತ್ರತಂಡಕ್ಕೆ ಬಿಟ್ಟುಕೊಟ್ಟಿದೆ ಎಂದು ಜಂಟಲ್ ಮನ್ ಸಿನಿಮಾದ ನಿರ್ಮಾಪಕ ಗುರುದೇಶಪಾಂಡೆ ದೂರಿದ್ದಾರೆ. ಅಲ್ಲದೆ ಗುರು ದೇಶಪಾಂಡೆ ಚಿತ್ರಮಂದಿರದ ಮಾಲಿಕರ ವಿರುದ್ಧ ಗರಂ ಆಗಿ ನ್ಯಾಯ ಒದಗಿಸಿಕೊಡುವಂತೆ ಚಲನಚಿತ್ರ ಮಂಡಳಿಯ ಮೆಟ್ಟಿಲೇರಿದ್ದಾರೆ.

Fight Between Gentleman And Malgudi Days Movies For Theatre

ಜಂಟಲ್ ಮನ್ ಸಿನಿಮಾಗೆ ಜಡೇಶ್ ಕುಮಾರ್ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ವಿಭಿನ್ನ ಕಥೆಯ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ಮಾಲ್ಗುಡಿ ಡೇಸ್ ಚಿತ್ರಕ್ಕೆ ಕಿಶೋರ್ ಮೂಡಬಿದರೆ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ರಾಘವೇಂದ್ರ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Fight between Prajwal Devaraj starrer Gentleman and Vijay Raghavendra starrer Malgudi Days movies for theatre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X