ಸಾಲದ ಹಣ ವಾಪಸ್ ನೀಡಿಲ್ಲ ಎಂದು ದ್ವಾರಕೀಶ್ ಮನೆಯಲ್ಲಿ ನಿರ್ಮಾಪಕರ ಗಲಾಟೆ
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಮನೆಗೆ ನುಗ್ಗಿ ನಿರ್ಮಾಪಕರೊಬ್ಬರು ಗಲಾಟೆ ನಡೆಸಿದ ಘಟನೆ ವರದಿಯಾಗಿದೆ. ಈ ಬಗ್ಗೆ ಈಗಾಗಲೇ ಎಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೈನಾನ್ಸರ್ ಹಾಗೂ ನಿರ್ಮಾಪಕರಾಗಿರುವ ರಮೇಶ್ ಎಂಬುವವರ ಬಳಿ ದ್ವಾರಕೀಶ್ ಹಣ ಪಡೆದಿದ್ದರಂತೆ. 'ಆಯುಷ್ಮಾನ್ ಭವ' ಸಿನಿಮಾದ ನಿರ್ಮಾಣಕ್ಕಾಗಿ ರಮೇಶ್ ಬಳಿ ದ್ವಾರಕೀಶ್ ಸಾಲ ಪಡೆದಿದ್ದರು. ಈ ಹಣ ಮರುಪಾವತಿ ಮಾಡಿಲ್ಲ ಎಂದು ದ್ವಾರಕೀಶ್ ಮನೆಗೆ ಬಂದು ರಮೇಶ್ ಗಲಾಟೆ ಮಾಡಿದ್ದಾರೆ.

'ಆಯುಷ್ಮಾನ್ ಭವ' ಸಿನಿಮಾ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆಯಲಿಲ್ಲ. ಹಾಗಾಗಿ, ಸಿನಿಮಾದ ಗಳಿಕೆ ತೀರ ಕಡಿಮೆ ಆಗಿತ್ತು. ಇತ್ತ ಸಿನಿಮಾ ನಿರ್ಮಾಣಕ್ಕೆ ಪಡೆದ ಸಾಲ ಹಾಗೆಯೇ ಉಳಿಯಿತು. ಹಣ ಮರುಪಾವತಿ ಕೇಳಲು ಶುಕ್ರವಾರ ದ್ವಾರಕೀಶ್ ಮನೆಗೆ ರಮೇಶ್ ಬಂದರು. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ.
ರಮೇಶ್ ಮತ್ತು ದ್ವಾರಕೀಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಮೇಶ್ ಜೊತೆಯಲ್ಲಿ ನಿರ್ಮಾಪಕ ಜಯಣ್ಣ ಕೂಡ ಸ್ಥಳದಲ್ಲಿ ಇದ್ದರು ಎನ್ನುವ ಮಾಹಿತಿ ಇದೆ.


Click it and Unblock the Notifications











