twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ಮತ್ತು ಸುಮಲತಾ ಮುಖಾಮುಖಿ, ಆಮೇಲೆ ಬೆಂಬಲಿಗರ ಮಾರಾಮಾರಿ

    |

    ಮಂಡ್ಯದ ಲೋಕಸಭೆ ಅಖಾಡದಲ್ಲಿ ಅಭ್ಯರ್ಥಿಗಳು ಎಂದು ಘೋಷಣೆಯಾದ ಬಳಿಕ ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಕುಮಾರ್ ಎಲ್ಲೂ ಮುಖಾಮುಖಿ ಆಗಿಲ್ಲ. ತಿಂಗಳುಗಟ್ಟಲೇ ಮಂಡ್ಯದಲ್ಲೇ ಬೀಡುಬಿಟ್ಟು ಪ್ರಚಾರ ಮಾಡಿದ ಇಬ್ಬರು ಒಂದೇ ಒಂದು ದಿನವೂ ಎದುರು ಬಂದಿಲ್ಲ.

    ದಾಳಿ ಮತ್ತು ಪ್ರತಿದಾಳಿಯ ಮೂಲಕವೇ ಪರಸ್ಪರ ವಾಗ್ವಾದ ನಡೆಸುತ್ತಿದ್ದರು. ಪ್ರಚಾರದ ವೇಳೆ ಇಬ್ಬರು ಎದುರಾದರೇ ಹೇಗಿರತ್ತೆ ಎಂದು ಮಂಡ್ಯ ಜನ ಮಾತನಾಡಿಕೊಂಡರೇ ಹೊರತು ಅದು ಆಗಿರಲಿಲ್ಲ. ಆದ್ರೀಗ, ಮತದಾನದ ದಿನ ಇಂತಹದೊಂದು ಘಟನೆ ನಡೆದಿದೆ.

    ಅಂಬಿ ಹುಟ್ಟೂರಲ್ಲಿ ಸುಮಲತಾ-ನಿಖಿಲ್ ಬೆಂಬಲಿಗರ ನಡುವೆ ಮಾರಾ-ಮಾರಿ

    ಅಪರೂಪ ಎಂಬಂತೆ ನಿಖಿಲ್ ಮತ್ತು ಸುಮಲತಾ ಮುಖಾಮುಖಿಯಾದರು. ಆದ್ರೆ, ಇದಾದ ಕೆಲವೇ ಕ್ಷಣಗಳಲ್ಲಿ ನಿಖಿಲ್ ಮತ್ತು ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ಆಗೋಗಿದೆ. ಅಷ್ಟಕ್ಕೂ, ನಿಖಿಲ್ ಮತ್ತು ಸುಮಲತಾ ಎದುರುಬದುರಾಗಿದ್ದು ಎಲ್ಲಿ? ಬೆಂಬಗಲಿಗರ ನಡುವೆ ಗಲಾಟೆಯಾಗಿದ್ದು ಯಾಕೆ? ಮುಂದೆ ಓದಿ.....

    ದೊಡ್ಡ ಅರಸಿನಕೆರೆಯಲ್ಲಿ ಘಟನೆ

    ದೊಡ್ಡ ಅರಸಿನಕೆರೆಯಲ್ಲಿ ಘಟನೆ

    ಅಂಬರೀಶ್ ಅವರ ಹುಟ್ಟೂರು ದೊಡ್ಡ ಅರಸಿನಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಮತ ಚಲಾಯಿಸಲು ಬಂದಿದ್ದರು. ವೋಟ್ ಮಾಡಿ ವಾಪಸ್ ಆಗುವ ವೇಳೆ ಅದೇ ಸ್ಥಳಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರ್ ಆಗಮಿಸಿದರು. ಇಬ್ಬರು ಕಾರು ಮುಖಾಮುಖಿ ಆಯ್ತು. ಕಾರಿನಿಂದಲೇ ನಿಖಿಲ್ ಅವರು ಸುಮಲತಾಗೆ ನಮಸ್ಕಾರ ಹೇಳಿದೆ ಎಂದು ಸ್ವತಃ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಬೆಂಬಲಿಗರ ನಡುವೆ ಮಾರಾಮಾರಿ

    ಬೆಂಬಲಿಗರ ನಡುವೆ ಮಾರಾಮಾರಿ

    ಅಂಬರೀಶ್ ಅವರ ಹುಟ್ಟೂರು ದೊಡ್ಡ ಅರಸಿನಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಮತ ಚಲಾಯಿಸಲು ಬಂದಿದ್ದರು. ವೋಟ್ ಮಾಡಿ ವಾಪಸ್ ಆಗುವ ವೇಳೆ ಅದೇ ಸ್ಥಳಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರ್ ಆಗಮಿಸಿದರು. ಇಬ್ಬರು ಕಾರು ಮುಖಾಮುಖಿ ಆಯ್ತು. ಕಾರಿನಿಂದಲೇ ನಿಖಿಲ್ ಅವರು ಸುಮಲತಾಗೆ ನಮಸ್ಕಾರ ಹೇಳಿದೆ ಎಂದು ಸ್ವತಃ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ನಿಖಿಲ್ ಕೈಬೀಸಿದ್ದೇ ಕಾರಣ ಆಯ್ತಾ?

    ನಿಖಿಲ್ ಕೈಬೀಸಿದ್ದೇ ಕಾರಣ ಆಯ್ತಾ?

    ದೊಡ್ಡ ಅರಸಿನಕೆರೆಯ ಮತಗಟ್ಟೆ ಬಳಿ ಬಂದ ನಿಖಿಲ್ ಕಾರಿನಿಂದ ಹೊರಗೆ ಬಂದು ಕೈ ಮುಗಿಯುತ್ತಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಸುಮಲತಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದೇ ವೇಳೆ ನಿಖಿಲ್ ಬೆಂಬಲಕ್ಕೆ ಬಂದ ಬೆಂಬಲಿಗರು ಸುಮಲತಾ ಕಡೆಯವರ ವಿರುದ್ಧ ಕಿಡಿಕಾರುತ್ತಾರೆ. ಈ ವೇಳೆ ಇಬ್ಬರು ಬೆಂಬಲಿಗರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಅಲ್ಲೇ ಇದ್ದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ನಿಯಂತ್ರಣ ಮಾಡ್ತಾರೆ.

    RR ನಗರದಲ್ಲಿ ವೋಟ್ ಮಾಡಿದ 'ಜೋಡೆತ್ತು' ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ RR ನಗರದಲ್ಲಿ ವೋಟ್ ಮಾಡಿದ 'ಜೋಡೆತ್ತು' ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ

    ಅದೇನ್ ಆಗುತ್ತೋ?

    ಅದೇನ್ ಆಗುತ್ತೋ?

    ಮಂಡ್ಯ ರಾಜಕೀಯ ಇಡೀ ದೇಶದ ಗಮನ ಸೆಳೆದಿದೆ. ಸಿಎಂ ಪುತ್ರ ಮತ್ತು ಅಂಬರೀಶ್ ಪತ್ನಿ ಇಬ್ಬರಲ್ಲಿ ಯಾರಿಗೆ ಗೆಲುವಿನ ಮಾಲೆ ಒಲಿಯುತ್ತೆ ಎಂಬುದು ಮೇ 23ಕ್ಕೆ ಗೊತ್ತಾಗಲಿದೆ. ಮಂಡ್ಯದಲ್ಲಿ ಬರುವ ಫಲಿತಾಂಶ ರಾಜ್ಯ ಸರ್ಕಾರದ ಭವಿಷ್ಯವನ್ನ ನಿರ್ಧರಿಸುತ್ತೆ ಎಂದು ಕೆಲವರು ಹೇಳುತ್ತಿದ್ದಾರೆ. ಸದ್ಯಕ್ಕೆ 50-50 ಎನ್ನುತ್ತಿರುವ ಮತದಾರರು ಅದೇನ್ ಫಲಿತಾಂಶ ಕೊಡ್ತಾರೋ ಕಾದುನೋಡಬೇಕಿದೆ.

    English summary
    Fight happend between mandya jds candidate nikhil kumar and mandya jds candidate nikhil kumar Sumalatha followers in Mandya's Doddarasinakere village.
    Thursday, April 18, 2019, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X