ನಿವೇದಿತಾ ಗೌಡ- ಚಂದನ್ ಶೆಟ್ಟಿ ಕಿರಿಕ್: ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಭಿನ್ನ ವಿಭಿನ್ನ ವಿಡಿಯೋ ರೀಲ್ಸ್‌ಗಳ ಮೂಲಕ ಹೆಚ್ಚು ಸುದ್ದು ಆಗುತ್ತಿರುತ್ತಾರೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ರೀಲ್ಸ್ ಮಾಡುತ್ತಾ ಚರ್ಚೆಗೆ ಕಾರಣ ಆಗುತ್ತಿರುತ್ತಾರೆ. ಹಾಗಾಗಿ ಈ ಜೋಡಿ ವಿಡಿಯೋ ಮಾಡಿ ಕೆಲವೊಮ್ಮೆ ಟ್ರೋಲ್ ಆದರೂ ಕೂಡ ಅವರ ತುಂಟಾಟದ ವಿಡಿಯೋಗಳಿಗಾಗಿ ಸಾಕಷ್ಟು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿವೇದಿತಾ ಹೆಚ್ಚು ವಿಡಿಯೋಗಳನ್ನು ಪತಿ ಚಂದನ್ ಶೆಟ್ಟಿ ಜೊತೆಯೇ ವಿಡೀಯೋ ಮಾಡಿ ಹಂಚಿಕೊಳ್ಳುತ್ತಾರೆ. ಚಂದನ್ ಶೆಟ್ಟಿ ಕೂಡ ಹೆಚ್ಚಾಗಿ ನಿವೇದಿತಾ ಅವರೊಂದಿಗೆ ಹಾಡು, ಡ್ಯಾನ್ಸ್, ಫೈಟ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಸದ್ಯ ಚಂದನ್ ಮತ್ತು ನಿವೇದಿತಾ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಚಂದನ್ ಮತ್ತು ನಿವೇದಿತಾ ಕಿರಿಕ್ ಮಾಡಿಕೊಂಡಿದ್ದಾರೆ. ನಿವೇದಿತಾ ಚಂದನ್‌ಗೆ ಸಿಕ್ಕಾಪಟ್ಟೆ ಬೈದು ಬಿಟ್ಟಿದ್ದಾರೆ. ಸದಸ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Fight Betweet Niveditha Gowda And Chandan Shetty, Video Viral

ಈ ಜೋಡಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಧಿನ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇದೀಗ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಎರಬಿರ್ರಿ ಬೈದಿರುವಂತಹ ವಿಡಿಯೋ ಒಂದನ್ನ ನಿವೇದಿತಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.

ಮೊದಲು ಚಂದನ್ ಏನೋ ಯೋಚನೆ ಮಾಡುತ್ತಾ ಬರೆಯುತ್ತಿರುತ್ತಾರೆ. ಆಗ ನಿವೇದಿತಾ ಬೇಸರದಲ್ಲಿ ಬಂದು ಚಂದನ್ ಶೆಟ್ಟಿ ಮುಂದೆ ನಿಲ್ಲುತ್ತಾರೆ. ಆಗ ಚಂದನ್ ನಿವೇದಿತಾ ಅವ್ರನ್ನು ಅಪ್ಪಿಕೊಂಡು ಏನಾಯ್ತು ಅಂತ ಪ್ರೀತಿಯಿಂದ ಕೇಳುತ್ತಾರೆ.

ಇದೇ ವಿಡಿಯೋದ ಮುಂದುವರೆದ ಭಾಗದಲ್ಲಿ ನಿವೇದಿತಾ ಉಗುರು ಬಣ್ಣ ಹಾಕಿಕೊಳ್ಳುತ್ತಾ ಇರುತ್ತಾರೆ. ಅಗ ಚಂದನ್ ಬೇಸರದಲ್ಲಿ ಬಂದು ನಿವೇದಿತಾ ಭುಜ ಮುಟ್ಟಿ ಕರೆಯುತ್ತಾರೆ. ಆಗ ನಿವೇದಿತಾ ಸಿಕ್ಕಾಪಟ್ಟೆ ಬೈದು ಬಿಡುತ್ತಾರೆ. ಇದು ಇವರು ಮಾಡಿರುವುದು ತಮಾಷೆಗಾಗಿ. ಆದರೂ ಕೂಡ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅಷ್ಟೇ ಅಲ್ಲ ಈ ಜೋಡಿ ಏನಿಲ್ಲಾ ಅಂದರೂ ನಿತ್ಯವೂ ಒಂದಾದರು ವಿಡಿಯೋ ಶೇರ್ ಮಾಡುತ್ತಾರೆ. ಇತ್ತೀಚೆಗೆ ಅವರು ಮಾಡಿರುವ ಡ್ಯಾನ್ಸ್ ವಿಡಿಯೋಗಳು ಮತ್ತು ಮುತ್ತಿನ ಪ್ರಯೋಗದ ವಿಡಿಯೋ ಟ್ರೆಂಡಿಮಗ್ ಲಿಸ್ಟ್ ಸೇರಿವೆ. ಆದರೆ ಈ ಜೋಡಿ ಏನೇ ಮಾಡಿದರೂ ಕೂಡ ಇವರ ಕಾಲೆಳೆಯುವ ಕಮೆಂಟ್‌ಗಳು ಮಾತ್ರ ಬರುತ್ತಲೇ ಇರುತ್ತವೆ.

More from Filmibeat

English summary
Fight Betweet Niveditha Gowda And Chandan Shetty, Video Viral,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X