ಪುನೀತ್ ಚಿತ್ರಕ್ಕೆ ಬಂದ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದಿಂದ ದಿನಕ್ಕೊಂದು ರೋಚಕ ಸಂಗತಿಗಳು ಹೊರಬೀಳುತ್ತಿವೆ. ಈಗಾಗಲೇ ಬಾಲಿವುಡ್ ನ ಖ್ಯಾತ ನಟ ಬೊಮ್ಮನ್ ಇರಾನಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಬೆನ್ನಲ್ಲೆ ಇದೀಗ ಮತ್ತೊಂದು ಇಂಟ್ರಸ್ಟಿಂಗ್ ವಿಷ್ಯ ಹೊರಬಿದ್ದಿದೆ.
ಹೌದು, 'ಯುವರತ್ನ' ಚಿತ್ರತಂಡಕ್ಕೆ ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ಫೈಟ್ ಮಾಸ್ಟರ್ಸ್ ರಾಮ್- ಲಕ್ಷಣ್ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್ ನ ಸ್ಟಾರ್ ನಟರಿಗೆ ಸಾಹಸ ನಿರ್ದೇಶನ ಮಾಡಿರುವ ರಾಮ್-ಲಕ್ಷ್ಮಣ್ ಈಗ ಪವರ್ ಸ್ಟಾರ್ ಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇವರಿಬ್ಬರ ಜೋಡಿಯಲ್ಲಿ ಬರುವ ಆಕ್ಷನ್ ಅಂದ್ರೆ ಸಿನಿಪ್ರಿಯರಿಗೆ ರಸದೌತಣ. ಹಾಗಂದ್ಮೇಲೆ ಯುವರತ್ನ ಚಿತ್ರದಲ್ಲಿ ಸಾಹಸ ದೃಶ್ಯಗಳು ಮತ್ತಷ್ಟು ರೋಚಕವಾಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಈ ಬಗ್ಗೆ ಸ್ವತಃ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಮ್-ಲಕ್ಷ್ಮಣ್ ಅವರನ್ನು ಸ್ವಾಗತಿಸಿದ್ದಾರೆ. 'ಯುವರತ್ನ ಚಿತ್ರದ ಸ್ವೈಲಿಶ್ ಮಾಸ್ ಆಕ್ಷನ್ ದೃಶ್ಯಗಳನ್ನ ರಾಮ್-ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ. ಇದರಿಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಭಾರಿಭೋಜನ ಸಿಗಲಿದೆ' ಎಂದು ಹೇಳಿದ್ದಾರೆ.
ರಾಮ್ ಲಕ್ಷ್ಮಣ್ ಈ ಹಿಂದೆ ನಿಖಿಲ್ ಕುಮಾರ್ ಗೆ ಸಾಹಸ ನಿರ್ದೇಶನ ಮಾಡಿದ್ದರು. ನಿಖಿಲ್ ಅಭಿನಯದ ಸೀತರಾಮ ಕಲ್ಯಾಣ ಚಿತ್ರದ ಪ್ರಮುಖ ಆಕ್ಷನ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ 'ಯುವರತ್ನ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.
ಇನ್ನುಳಿದಂತೆ ಶಿವು ಅವರು ಯುವರತ್ನ ಚಿತ್ರಕ್ಕೆ ಕಲಾ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಕಲಾವಿದರು ಮತ್ತು ತಂತ್ರಜ್ಞರು 'ಯುವರತ್ನ' ಟೀಂ ಸೇರಿಕೊಂಡಿದ್ದಾರೆ. ನಟಿ ಸಾಯೇಶಾ, ನಟ ಧನಂಜಯ್, ವಸಿಷ್ಠ ಸಿಂಹ, ಅರು ಗೌಡ ಇನ್ನೂ ಅನೇಕರು 'ಯುವರತ್ನ'ನ ಬಳಗ ಸೇರಿದ್ದಾರೆ.


Click it and Unblock the Notifications