twitter
    For Quick Alerts
    ALLOW NOTIFICATIONS  
    For Daily Alerts

    ಮಾಜಿ ಪ್ರಧಾನಿ ವಾಜಪೇಯಿ ನಿಧನಕ್ಕೆ ಕಂಬನಿ ಮಿಡಿದ ಸಿನಿದಿಗ್ಗಜರು

    By Bharath Kumar
    |

    ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ (93) ಇಂದು ನಿಧನರಾಗಿದ್ದಾರೆ. ದೇಶಕಂಡ ಅತ್ಯುನ್ನತ ರಾಜಕಾರಣಿಯ ಅಗಲಿಕೆಗೆ ಇಡೀ ರಾಷ್ಟ್ರವೇ ಕಂಬನಿ ಮಿಡಿದಿದೆ.

    ಮೂರು ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಹಾಸ್ಯಪ್ರಜ್ಞೆಯ ಸರಳ ಮನುಷ್ಯರಾಗಿ, ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿದವರು.

    ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು

    ವಿಶ್ವಮಟ್ಟದಲ್ಲಿ ಭಾರತಕ್ಕೆ ಹೊಸ ಶಕ್ತಿ ತುಂಬಿದವರು ಎಂದರೂ ತಪ್ಪಾಗಲಾರದು. ಇಂತಹ ವ್ಯಕ್ತಿಯ ನಿಧನಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗ ಸೇರಿದಂತೆ ಭಾರತದ ಸಿನಿತಾರೆಯರು ಸಂತಾಪ ಸೂಚಿಸಿದ್ದಾರೆ.

    ದೇಶ ಕಂಡ ಅತ್ಯುನ್ನತ ನಾಯಕ

    ''ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಾನ್ ವ್ಯಕ್ತಿ. ನಮ್ಮ ದೇಶ ಕಂಡ ಅತ್ಯುನ್ನತ ನಾಯಕ. ಇವರಿಗೆ ಬಹುದೊಡ್ಡ ಸಲ್ಯೂಟ್'' ಎಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಟ್ವೀಟ್ ಮಾಡಿದ್ದಾರೆ.

    ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು

    ''ನಮ್ಮ ರಾಷ್ಟ್ರಕ್ಕೆ ಇದು ಅತ್ಯಂತ ದೊಡ್ಡ ನಷ್ಟ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೊನೆಯ ಬಾರಿ ನಮ್ಮ ಗೌರವ ಸಲ್ಲಿಸುತ್ತೇನೆ. ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದರು. ಅವರ ನೆನಪು ಶಾಶ್ವತವಾಗಿ ಉಳಿಯುತ್ತದೆ. ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು, ಸರ್ '' ಎಂದು ನಟ ಸಂಜಯ್ ದತ್ ಸಂತಾಪ ಸೂಚಿಸಿದ್ದಾರೆ.

    ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

    ಅಜಾತಶತ್ರುಗೆ ವಂದನೆಗಳು

    ''ಭಾರತದ ಅತ್ಯುನ್ನತ ವ್ಯಕ್ತಿ, ಅಜಾತಶತ್ರುಗೆ ವಂದನೆಗಳು....ಯುಗದ ಅಂತ್ಯ ... ಅಟಲ್ ಬಿಹಾರಿ ವಾಜಪೇಯಿ ಲಕ್ಷಾಂತರ ಹೃದಯಗಳಲ್ಲಿ ವಾಸಿಸುತ್ತಿದ್ದಾರೆ ...'' ಎಂದು ನಟಿ ಮಾಳವಿಕಾ ಅವಿನಾಶ್ ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಯುಗ ಅಂತ್ಯ

    ''ಮತ್ತೊಂದು ಯುಗ ಅಂತ್ಯ...ಮತ್ತೊಬ್ಬ ಗ್ರೇಟ್ ನಾಯಕ....ಮತ್ತೊಂದು ಕೊನೆ'' ಎಂದು ಟ್ವೀಟ್ ಮಾಡಿರುವ ಬಹುಭಾಷಾ ನಟಿ ತ್ರಿಷಾ, ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಮದುವೆಗೆ ಸಮಯವೇ ಸಿಗದ ವಾಜಪೇಯಿ, ಇಷ್ಟ- ಕಷ್ಟದ ಸಂಗತಿಗಳ ಪ್ರಶ್ನೋತ್ತರ

    ರಾಜಕಾರಣಕ್ಕೆ ಗೌರವ ತಂದ ನಾಯಕ

    ''ರಾಜಕಾರಣಕ್ಕೆ ಘನತೆ ಮತ್ತು ಗೌರವವನ್ನು ತಂದುಕೊಟ್ಟ ಕೆಲವು ರಾಜಕಾರಣಿಗಳಲ್ಲಿ ಒಬ್ಬರು. ಅವರ ಕನಸು ಮತ್ತು ರಸ್ತೆ ಸಂಪರ್ಕದ ಯೋಜನೆಯಿಂದಾಗಿ ಲಕ್ಷಾಂತರ ಜೀವಗಳು ನಮ್ಮ ದೇಶದದಲ್ಲಿ ಬದುಕುವಂತೆ ಮಾಡಿದೆ. ಇಂತಹ ನಮ್ಮ ಪ್ರೀತಿಯ ನಾಯಕನಿಗೆ ಹೃದಯಪೂರ್ವಕ ಗೌರವ ಸಲ್ಲಿಸಬೇಕು'' ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

    ಭಾರತದ ಅತ್ಯುನ್ನತ ಪ್ರಧಾನಮಂತ್ರಿ

    ''ಭಾರತದ ದೇಶ ಹಿಂದೆಂದೂ ಕಾಣದ ಅತ್ಯುನ್ನತ ಪ್ರಧಾನಮಂತ್ರಿ. ತಮ್ಮ ಜೀವನವನ್ನೇ ದೇಶಕ್ಕಾಗಿ ಮೀಸಲಿಟ್ಟವರು. ವಾಜಪೇಯಿ ಅವರು ಸದಾ ನಮ್ಮ ಹೃದಯಲ್ಲಿರುವವರು'' ಎಂದು ಮಲಯಾಳಂ ನಟ ಮೋಹನ್ ಲಾಲ್ ಟ್ವೀಟ್ ಮಾಡಿದ್ದಾರೆ.

    English summary
    In a sad turn of events, former Prime Minister of India, Sri atal bihari vajpayee breathed his last in Delhi today (august 16th). indian film actors mourns the sad demise of former PM atal bihari vajpayee.
    Thursday, August 16, 2018, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X