ಬೆಳ್ಳಿ ತೆರೆಮೇಲೆ ಬರ್ತಿದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಮೂಕನ ಮಕ್ಕಳು'

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿರುವ ಮೂಕನ ಮಕ್ಕಳು ಈಗ ಸಿನಿಮಾ ರೂಪತಾಳಿ ಬೆಳ್ಳಿತೆರೆ ಮೇಲೆ ಬರಲು ಸಿದ್ಧವಾಗಿದೆ. ಮೂಕನ ಮಕ್ಕಳು ಈ ಕೃತಿಯನ್ನು ಅನೇಕರು ಓದಿರುತ್ತಾರೆ. ಇದೀಗ ಸಿನಿಮಾ ಮೂಲಕ ನೋಡಿ ಎಂಜಾಯ್ ಮಾಡಬಹುದು.

ಅಂದಹಾಗೆ ಈ ಸಿನಿಮಾವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿರುವ ಮೈಸೂರು ಮಂಜು. ಚಿತ್ರದಲ್ಲಿ ನವ ನಟ ಮಂಜುಕ್ರಿಷ್ ಮೊದಲ ಬಾರಿಗೆ ಬಣ್ಣಹಚ್ಚಿದ್ದಾರೆ.

ಈಗಾಗಲೇ ಕೋಲ್ಕತ್ತಾ ಫಿಲ್ಮ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಉತ್ತಮ ಪರಿಸರ ಚಿತ್ರ ಮತ್ತು ಉತ್ತಮ ಸಹ ನಟ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ಯು ಕೆಯಲ್ಲಿ ಎರಡು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. ಪನೋರಮಾ ಸೇರಿದಂತೆ ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.

Film Based On Masti Venkatesha Iyengars Mookana Makkalu Book Will Set To Release on January

Recommended Video

ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada

ಈಗಾಗಲೇ ಅನೇಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಮೂಕನ ಮಕ್ಕಳು ಸಿನಿಮಾ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಕೃತಿ ಜನಪ್ರಿಯತೆ ಪಡೆದುಕೊಂಡ ಹಾಗೆ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಾ ಎಂದು ಕಾದು ನೋಡಬೇಕು.

More from Filmibeat

English summary
Film based on Masti Venkatesha Iyengar's Mookana Makkalu book set to release on January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X