twitter
    For Quick Alerts
    ALLOW NOTIFICATIONS  
    For Daily Alerts

    ಫಿಲ್ಮ್ ಚೇಂಬರ್ ಚುನಾವಣೆ ಗಲಾಟೆ: 2 ದಿನದಲ್ಲಿ ಎಲೆಕ್ಷನ್ ಬಗ್ಗೆ ನಿರ್ಧಾರ

    |

    ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿಲ್ಲವೆಂದು ನಿರ್ಮಾಪಕರು ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಿರ್ಮಾಪಕ ಭಾ ಮಾ ಹರೀಶ್ ಹಾಗೂ ಎನ್‌ ಎಂ ಸುರೇಶ್ ನಡುವೆ ಫಿಲ್ಮ್ ಚೇಂಬರ್ ಒಳಗೆ ಮಾತಿನ ಚಕಮಕಿ ನಡೆದಿದೆ. ಎರಡು ವರ್ಷಗಳ ಹಿಂದೆನೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚುನಾವಣೆ ನಡೆದಿರಲಿಲ್ಲ. ಈಗ ಸರ್ಕಾರವೇ ಮತ್ತೆ ಚುನಾವಣೆ ನಡೆಸುವಂತೆ ಆದೇಶ ನೀಡಿದರೂ ಹಾಲಿ ಅಧ್ಯಕ್ಷರು ಎಲೆಕ್ಷನ್‌ಗೆ ಮುಂದಾಗಿಲ್ಲ ಎಂದು ಸದಸ್ಯರು ಆರೋಪ ಮಾಡುತ್ತಿದ್ದಾರೆ.

    ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ಗೆ ಚುನಾವಣೆ ನಡೆಸುವಂತೆ ಆದೇಶ ಮಾಡಿತ್ತು. ಏಪ್ರಿಲ್ 15ರ ಒಳಗೆ ಚುನಾವಣೆ ಮಾಡುವಂತೆ ಆದೇಶ ಹೊರಡಿಸಿತ್ತು. "ಈ ಆದೇಶದ ಪ್ರಕಾರ, 21 ದಿನಗಳ ಒಳಗೆ ಚುನಾವಣೆ ದಿನವನ್ನು ಘೋಷಣೆ ಮಾಡಬೇಕು ಆದರೆ, ಇದೂವರೆಗೂ ಫಿಲ್ಮ್ ಚೇಂಬರ್ ಈ ಬಗ್ಗೆ ಇನ್ನೂ ಘೋಷಣೆ ಮಾಡಿಲ್ಲ. ಹೀಗಾಗಿ ಫಿಲ್ಮ ಚೇಂಬರ್ ಮುಂದೆ ಪ್ರತಿಭಟನೆ ಮಾಡಿದ್ದೇವೆ." ಎನ್ನುತ್ತಾರೆ ಭಾ ಮಾ ಹರೀಶ್.

    ಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ಹೆಸರು ದುರ್ಬಳಕೆ ಆಗಿದೆ: ನಿರ್ದೇಶಕಿ ರೂಪ ಅಯ್ಯರ್ ಆರೋಪಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ಹೆಸರು ದುರ್ಬಳಕೆ ಆಗಿದೆ: ನಿರ್ದೇಶಕಿ ರೂಪ ಅಯ್ಯರ್ ಆರೋಪ

    2 ದಿನ ಸಮಯ ಕೇಳಿದ ಫಿಲ್ಮ್ ಚೇಂಬರ್

    ನಿರ್ಮಾಪಕ ಭಾ ಮಾ ಹರೀಶ್ ಸೇರಿದಂತೆ ಸುಮಾರು 50 ಮಂದಿ ಸದಸ್ಯರು, ಚುನಾವಣಾ ದಿನವನ್ನು ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಈ ಕಾರಣಕ್ಕೆ ಇಂದು(ಮಾರ್ಚ್ 15) ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರು. ಕಳೆದ ಕೆಲವು ದಿನಗಳಿಂದ ಈ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ಆಗಲೇ ಬೇಕು ಅಂತ ಭಾ ಮಾ ಹರೀಶ್ ಪಟ್ಟು ಹಿಡಿದು ಕೂತಿದ್ದರು. ಆದರೆ ಫಿಲ್ಮ್ ಚೇಂಬರ್ ಪ್ರತಿಕ್ರಿಯೆ ನೀಡಿರಲಿಲ್ಲ.

    Film chamber election issue talk clash between Bha Ma Harish and N M Suresh

    " ಎರಡು ವರ್ಷದ ಹಿಂದೆನೇ ಫಿಲ್ಮ್ ಚೇಂಬರ್ ಚುನಾವಣೆ ನಡೆಯಬೇಕಿತ್ತು. ಕೊರೊನಾ ಸಮಯದಲ್ಲಿ ಸಂಘ ಸಂಸ್ಥೆಗಳ ಚುನಾವಣೆ ನಡೆಸದೆ ಇರುವಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಬಳಿಕ ಫೆಬ್ರವರಿ 16ಕ್ಕೆ ಚುನಾವಣೆ ನಡೆಸಬೇಕು ಅಂತ ಆದೇಶ ಹೊರಡಿಸಲಾಗಿತ್ತು. ಆಗ ಓಮಿಕ್ರಾನ್ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಮತ್ತೆ ಚುನಾವಣೆ ನಡೆಸಲಿಲ್ಲ. ಈಗ ಎಲ್ಲಾ ಸರಿ ಹೋಗಿದೆ. ಆದರೂ, ಚುನಾವಣೆ ನಡೆಸುವ ಬಗ್ಗೆ ಆಲೋಚನೆ ಮಾಡುತ್ತಿಲ್ಲ." ಎಂದು ಭಾ ಮಾ ಹರೀಶ್ ಆರೋಪ ಮಾಡುತ್ತಿದ್ದಾರೆ.

    Breaking News: ವೀಕೆಂಡ್ ಕರ್ಪ್ಯೂಯಿಂದ ನಷ್ಟ ಆಗುವ 5 ಸಿನಿಮಾಗಳಿಗೆ ಪರಿಹಾರ ನೀಡುವಂತೆ ಸಿಎಂಗೆ ಫಿಲ್ಮ್ ಚೇಂಬರ್ ಮನವಿBreaking News: ವೀಕೆಂಡ್ ಕರ್ಪ್ಯೂಯಿಂದ ನಷ್ಟ ಆಗುವ 5 ಸಿನಿಮಾಗಳಿಗೆ ಪರಿಹಾರ ನೀಡುವಂತೆ ಸಿಎಂಗೆ ಫಿಲ್ಮ್ ಚೇಂಬರ್ ಮನವಿ

    ಭಾಮಾ ಹರೀಶ್- ಎನ್‌ಎಮ್ ಸುರೇಶ್ ನಡುವೆ ಮಾತಿನ ಚಕಮಕಿ

    ಕರ್ನಾಟಕ ಫಿಲ್ಮ್ ಚೇಂಬರ್ ಬಳಿ ನಿರ್ಮಾಪಕ ಭಾ ಮಾ ಹರೀಶ್ ಹಾಗೂ ಬೆಂಬಲಿಗರು ಪ್ರತಿಭಟನೆ ಮುಂದಾಗಿದ್ದರು. ಈ ವೇಳೆ ಭಾ ಮಾ ಹರೀಶ್ ಅವರನ್ನು ಕರೆದು ಸಮಾಧಾನ ಪಡಿಸುವ ಕೆಲಸಕ್ಕೆ ಮುಂದಾಗಿದ್ದರು. ಆ ವೇಳೆ ನಿರ್ಮಾಪಕ ಭಾ ಮಾ ಹರೀಶ್ ಹಾಗೂ ಎನ್‌ ಎಂ ಸುರೇಶ್ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವು ಹೊತ್ತು ಫಿಲ್ಮ್ ಚೇಂಬರ್ ಒಳಗೆ ಬಿಸಿ ವಾತಾವರಣ ಏರ್ಪಟ್ಟಿತ್ತು.

    Film chamber election issue talk clash between Bha Ma Harish and N M Suresh

    " ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಕೈಗೆ ಸಿಗುತ್ತಿಲ್ಲ. ಎಲ್ಲಿ ಹೋಗಿದ್ದಾರೆ ಅನ್ನುವುದೇ ಗೊತ್ತಿಲ್ಲ. ಹೀಗಾಗಿ ಫಿಲ್ಮ್ ಚೇಂಬರ್‌ ಮುಂದೆ ಪ್ರತಿಭಟನೆ ಮುಂದಾಗಿದ್ದೆವು. ಈ ವೇಳೆ ನಿರ್ಮಾಪಕ ಸುರೇಶ್ ನಡುವೆ ಚಿಕ್ಕ ಮಾತಿನ ಸಮರ ನಡೆಯಿತು. ಸದ್ಯ ಎರಡು ದಿನ ಸಮಯ ಕೊಟ್ಟಿದ್ದಾರೆ. ಆ ಮೇಲೆ ಚುನಾವಣೆ ಬಗ್ಗೆ ನಿರ್ಧಾರ ಕೈಗೊಳ್ಳದೆ ಇದ್ದರೆಮ ಪ್ರತಿಭಟನೆಯನ್ನು ಮತ್ತೆ ಆರಂಭ ಮಾಡುತ್ತೇವೆ. ಸದ್ಯಕ್ಕೆ ಎರಡು ದಿನದ ಮಟ್ಟಕ್ಕೆ ಕೈ ಬಿಟ್ಟಿದ್ದೇವೆ." ಎಂದು ಭಾ ಮಾ ಹರೀಶ್ ಹೇಳಿದ್ದಾರೆ.

    English summary
    Film chamber election issue talks clash between Bha Ma Harish and N M Suresh. Film Chamber election supposed to happen two years back. Due to corona it was halted.
    Wednesday, March 16, 2022, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X