ಕೊಡಗು ಮತ್ತು ಕೇರಳ ಜನತೆಗೆ ನೆರವಾದ ಕನ್ನಡ ಫಿಲ್ಮ್ ಚೇಂಬರ್

By Bharath Kumar

ಕೊಡಗು ಮತ್ತು ಕೇರಳದಲ್ಲಿ ಉಂಟಾದ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕನ್ನಡ ಚಿತ್ರರಂಗ ಸಹಾಯ ಹಸ್ತ ಚಾಚಿದೆ.

ಈಗಾಗಲೇ ನಟ ಶಿವರಾಜ್ ಕುಮಾರ್ ಕೊಡಗಿಗೆ 10 ಲಕ್ಷ, ಪ್ರಕಾಶ್ ರೈ 5 ಲಕ್ಷ, ಪುನೀತ್ ರಾಜ್ ಕುಮಾರ್ ಕೇರಳಗೆ 5 ಲಕ್ಷ ನೀಡಿ ನೆರವಾಗಿದ್ದಾರೆ. ಅದರ ಜೊತೆಗೆ ದರ್ಶನ್, ಸುದೀಪ್, ಗಣೇಶ್, ಯಶ್ ಅಭಿಮಾನಿಗಳು ಅಗತ್ಯ ವಸ್ತುಗಳನ್ನ ಪೂರೈಸಿ ಮಿಡಿದಿದ್ದಾರೆ.

ಇದೀಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕೊಡಗು ಹಾಗೂ ಕೇರಳ ಜನರ ಪುನರ್ವಸತಿ ನಿರ್ಮಾಣಕ್ಕಾಗಿ ಹಣದ ನೆರವು ನೀಡಿದೆ.

ಕೊಡಗು ಜನತೆಗಾಗಿ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 20 ಲಕ್ಷ ಹಾಗೂ ಕೇರಳ ಪ್ರವಾಹ ಪೀಡಿತರ ನಿಧಿಗೆ 5 ಲಕ್ಷ ಹಣ ನೀಡುವ ಮೂಲಕ ಸ್ಯಾಂಡಲ್ ವುಡ್ ಫಿಲ್ಮ್ ಚೇಂಬರ್ ಕಂಬನಿ ಮಿಡಿದಿದೆ.

film chamber has given Rs 20 lakhs to help Kodagu

ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿಂದು ಸಭೆ ಸೇರಿದ್ದ ವಾಣಿಜ್ಯ ಮಂಡಳಿಯ ಸದಸ್ಯರು ಈ ನಿರ್ಧಾರವನ್ನ ಘೋಷಿಸಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೆಗೌಡ್ರು, ನಿರ್ಮಾಪಕ ಕೆ ಮಂಜು, ರಾಕ್ ಲೈನ್ ವೆಂಕಟೇಶ್, ಕರಿಸುಬ್ಬು ಸೇರಿದಂತೆ ಪದಾದಿಕಾರಿಗಳು ಭಾಗಿಯಾಗಿದ್ದರು.

More from Filmibeat

English summary
Karnataka film chamber of commerce has given Rs 20 lakhs to CM of Karnataka to help Kodagu and Rs 5 Lakhs for Kerala flood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X