»   » ಸಿನಿಮಾ ನಿರ್ದೇಶಕ ಗುರುಪ್ರಸಾದ್ ಗೆ ಪಿತೃ ವಿಯೋಗ

ಸಿನಿಮಾ ನಿರ್ದೇಶಕ ಗುರುಪ್ರಸಾದ್ ಗೆ ಪಿತೃ ವಿಯೋಗ

Posted By:
Subscribe to Filmibeat Kannada

ಮಠ ಚಿತ್ರದ ಖ್ಯಾತ ನಿರ್ದೇಶಕ ಗುರು ಪ್ರಸಾದ್ ಅವರ ತಂದೆ ರಾಮಚಂದ್ರನ್ (80) ಶನಿವಾರ ಸಂಜೆ ವಿಧಿವಶರಾಗಿದ್ದಾರೆ.

ನಿನ್ನೆ (ಜನವರಿ 5) ಅಷ್ಟೇ 80ನೇ ವಸಂತಕ್ಕೆ ಕಾಲಿಟ್ಟಿದ್ದ ರಾಮಚಂದ್ರನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಸಂಜೆ ಬೆಂಗಳೂರಿನ ಕೋಣನಕುಂಟೆಯಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದರು.

Film director and actor Guruprasad's father passes away in konanakunte

ನಾಳೆ ಅಂದರೆ ಭಾನುವಾರ ಬನಶಂಕರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಗುರುಪ್ರಸಾದ್ ಅವರು ತಿಳಿಸಿದ್ದಾರೆ. ಈವರೆಗೆ ರಾಮಚಂದ್ರನ್ ಅವರು ಕೇವಲ ಎರಡೇ ಎರಡು ಸಿನಿಮಾಗಳನ್ನು ಇಷ್ಟಪಟ್ಟಿದ್ದರಂತೆ.

ಒಂದು ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನ ಮಗ ಅಯ್ಯು ಮತ್ತು ಗುರುಪ್ರಸಾದ್ ಅವರು ನಿರ್ಮಿಸಿದ 'ಡೈರೆಕ್ಟರ್‌ ಸ್ಪೆಷಲ್‌' ಇಷ್ಟಪಟ್ಟಿದ್ದರು ಎಂದು ಗುರುಪ್ರಸಾದ್ ಅವರೇ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದರು.

Read more about: guruprasad death bengaluru
English summary
Film director and actor Guruprasad's father Ramachandran (80) passed away in his house at Konanakunte, Bengaluru on January 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X