twitter
    For Quick Alerts
    ALLOW NOTIFICATIONS  
    For Daily Alerts

    ಕಾರಿನಲ್ಲಿ ಮಾಸ್ಕ್ ಇಲ್ಲದೆ ಕಿಡಕಿ ಹಾಕೊಂಡು ಹೋದ್ರೆ ಪಬ್ಲಿಕ್ ನ್ಯೂಸೆನ್ಸ್?

    |

    ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಹಾಗು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದು ಕಡ್ಡಾಯ ಎಂದು ಸರ್ಕಾರ ಸ್ಪಷ್ಟವಾಗಿದೆ ಆದೇಶಿಸಿದೆ.

    ಆದರೆ, ಸ್ವಂತ ಕಾರಿನಲ್ಲಿ ಕಿಡಕಿ ಮುಚ್ಚಿಕೊಂಡು ಹೋಗುತ್ತಿರುವ ವೇಳೆಯೂ ಮಾಸ್ಕ್ ಧರಿಸಬೇಕು ಎನ್ನುವುದು ಎಷ್ಟು ಸರಿ ಎಂಬ ವಾದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಾರಿನಲ್ಲಿ ಹೋಗುವಾಗ ಸಾರ್ವಜನಿಕರಿಗೆ ತೊಂದರೆ ಹೇಗೆ ಆಗುತ್ತದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

    ವರಲಕ್ಷ್ಮಿ ಶರತ್‌ಕುಮಾರ್ ಪ್ರಯತ್ನಕ್ಕೆ ಶುಭಕೋರಿದ ಕಿಚ್ಚ ಸುದೀಪ್ವರಲಕ್ಷ್ಮಿ ಶರತ್‌ಕುಮಾರ್ ಪ್ರಯತ್ನಕ್ಕೆ ಶುಭಕೋರಿದ ಕಿಚ್ಚ ಸುದೀಪ್

    ಸರ್ಕಾರದ ಇಂತಹ ಕ್ರಮದ ವಿರುದ್ಧ ನಿರ್ದೇಶಕ ರಘುರಾಮ್ ಧ್ವನಿ ಎತ್ತಿದ್ದಾರೆ. ನಿರ್ದೇಶಕ ಚಿ ಗುರುದತ್ ಮತ್ತು ಅವರ ಚಾಲಕ ಗುಟ್ಟಹಳ್ಳಿ ಮಾರ್ಗವಾಗಿ ಕಾರಿನಲ್ಲಿ ಚಲಿಸುತ್ತಿರುವ ಅಡ್ಡಹಾಕಿದ ಪೊಲೀಸರು ಮಾಸ್ಕ್ ಹಾಕಿಲ್ಲ, ಇದು ಪಬ್ಲಿಕ್ ನ್ಯೂಸೆನ್ಸ್ ಎಂದು ಕಾರಣ ನೀಡಿ ದಂಡ ಹಾಕಿದ್ದಾರೆ.

    Film Director Raghuram Expressed Displeasure against BBMP

    ಗುರುದತ್ ಅವರಿಗೆ ದಂಡ ಹಾಕಿರುವ ರಶೀದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಘುರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿಲ್ಲ ಅಂದ್ರೆ ಅದು ಪಬ್ಲಿಕ್ ನ್ಯೂಸೆನ್ಸ್. ಆದರೆ, ನಮ್ಮ ಕಾರಿನಲ್ಲಿ ಕಿಡಕಿ ಹಾಕಿಕೊಂಡು ಹೋಗುವಾಗ ಮಾಸ್ಕ್ ಧರಿಸಿಲ್ಲ ಅಂದ್ರೆ ಅದು ಹೇಗೆ ಪಬ್ಲಿಕ್ ನ್ಯೂಸೆನ್ಸ್ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.

    ರಘುರಾಮ್ ವಾದಕ್ಕೆ ನೆಟ್ಟಿಗರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶಕ್ಕೆ ಇಂತಹದೊಂದು ಕಾನೂನು ತಂದಿದ್ದರೆ ಅದೇ ಬೆಲೆಯಲ್ಲಿ ಮಾಸ್ಕ್ ನೀಡುತ್ತಿದ್ದರು. ಆದ್ರೆ, ದುಡ್ಡು ಮಾಡಬೇಕು ಎಂದೇ ಜಾರಿ ಮಾಡಿರುವ ನಿಯಮ. ಅದಕ್ಕೆ ಕಾರಿನಲ್ಲಿ ಕಿಡಕಿ ಹಾಕ್ಕೊಂಡು ಹೋಗುವ ಚಾಲಕ ಸಹ ಮಾಸ್ಕ್ ಧರಿಸಬೇಕು ಎಂದು ಟೀಕಿಸಿದ್ದಾರೆ.

    Film Director Raghuram Expressed Displeasure against BBMP

    Recommended Video

    ಮೇಘನಾ ಮಡಿಲು ಸೇರಿದ ಜೂನಿಯರ್ ಚಿರು | Meghana Raj blessed with baby boy | Filmibeat Kannada

    ನಗರದಲ್ಲಿ ಇಂತಹ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಕೆಲವು ಘಟನೆಗಳು ವೈರಲ್ ಆಗಿದ್ದವು. ಆದರೆ, ಬಿಬಿಎಂಪಿ ಆಗಲಿ ಅಥವಾ ರಾಜ್ಯ ಸರ್ಕಾರ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಮರು ಪರಿಶೀಲನೆ ಮಾಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ.

    English summary
    Film Director Raghuram expressed displeasure against BBMP fine rule for not wear mask.
    Thursday, October 22, 2020, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X