For Quick Alerts
  ALLOW NOTIFICATIONS  
  For Daily Alerts

  'ಎಲ್ಲಾ ಭಾಷೆಗಳನ್ನು ಕಲಿಯುವುದು ಒಳಿತು. ಆದರೆ...' ದ್ವಿಭಾಷಾನೀತಿ ಬೆಂಬಲಿಸಿದ ಸಿಂಪಲ್ ಸುನಿ

  |

  ದ್ವಿಭಾಷಾನೀತಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಚಿತ್ರರಂಗದಿಂದ ಬೆಂಬಲ ಹೆಚ್ಚುತ್ತಿದೆ. ನಿಖಿಲ್ ಕುಮಾರ್, ವಸಿಷ್ಠ ಸಿಂಹ, ಆ ದಿನಗಳು ಖ್ಯಾತಿಯ ಚೇತನ್ ಬಳಿಕ ನಿರ್ದೇಶಕ ಸುನಿ ದ್ವಿಭಾಷಾನೀತಿ ಪರ ನಿಂತಿದ್ದಾರೆ.

  Upendra ಬ್ರಹ್ಮ ಚಿತ್ರದಲ್ಲಿನ ಸಾಹಸ ದೃಶ್ಯ ತಯಾರಾದ ಕ್ಷಣಗಳು | Filmibeat Kannada

  ಈ ಕುರಿತು ಟ್ವೀಟ್ ಮಾಡಿರುವ ಸುನಿ 'ಎಲ್ಲಾ ಭಾಷೆಗಳನ್ನು ಕಲಿಯುವುದು ಒಳಿತು.. ಆದರೆ ಇದನ್ನು ಕಲಿಯಲೇಬೇಕೆಂದು ಮಾಡಬೇಡಿ ತಾಕೀತು..' ಎಂದು ತ್ರಿಭಾಷಾ ನೀತಿ ವಿರೋಧಿಸಿದ್ದಾರೆ.

  ಹಿಂದಿ ಹೇರಿಕೆ ವಿರೋಧಿಸಿ ದ್ವಿಭಾಷಾನೀತಿ ಬೆಂಬಲಕ್ಕೆ ನಿಂತ ವಸಿಷ್ಠ ಸಿಂಹ ಹಿಂದಿ ಹೇರಿಕೆ ವಿರೋಧಿಸಿ ದ್ವಿಭಾಷಾನೀತಿ ಬೆಂಬಲಕ್ಕೆ ನಿಂತ ವಸಿಷ್ಠ ಸಿಂಹ

  'ಎಲ್ಲಾ ಭಾಷೆಗಳನ್ನು ಕಲಿಯುವುದು ಒಳಿತು..

  ಆದರೆ ಇದನ್ನು ಕಲಿಯಲೇಬೇಕೆಂದು ಮಾಡಬೇಡಿ ತಾಕೀತು..

  ಕನ್ನಡ,,ಕೊಡವ,,ತುಳು,,ಕೊಂಕಣಿ.,

  ಇನ್ನಿತರ ಅವರವರ ಮಾತೃಭಾಷೆ

  ಅವರವರ ಸಂಪತ್ತು..

  ಪ್ರಪಂಚದ ಸಂವಹನೆಗೆ ಇರುವ ಭಾಷೆ ಯಾವುದೆಂದು ಎಲ್ಲರಿಗೂ ಗೊತ್ತು...

  ಹಿಡಿಸಬೇಡಿ ಬೇರೆ ಭಾಷೆಯ ಭ್ರಾಂತು..

  #ದ್ವಿಭಾಷಾನೀತಿ' ಎಂದು ತಮ್ಮದೇ ಶೈಲಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಇದಕ್ಕೂ ಮುಂಚೆ ಬೆಂಬಲ ನೀಡಿದ್ದ ನಿಖಿಲ್ ಕುಮಾರ್ 'ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು ? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ' ಎಂದಿದ್ದರು.

  ಇನ್ನು ವಸಿಷ್ಠ ಸಿಂಹ 'ನೆರೆಯ ತಮಿಳುನಾಡು ಹಾಗೂ ಉತ್ತರದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲೂ #ದ್ವಿಭಾಷಾನೀತಿ ಜಾರಿಗೆ ಬರಬೇಕು. ಇತರೆ (optional) ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ ಕಲಿಯುವವರದ್ದಾಗಿರಬೇಕು!! ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ನಡೆಯಬಾರದು.. ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ' ಎಂದು ಕರೆ ನೀಡಿದ್ದರು.

  English summary
  After Nikhil kumar and Vasishta Simha, Film Director Simple Suni Supports to Two language policy in karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X