twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ರಸಿಕರೇ, 100 ರೂ.ಗೆ ಬೇಕಾದಷ್ಟು ಸಿನೆಮಾ ವೀಕ್ಷಿಸಿ

    By Kiran B Hegde
    |

    ಬೆಂಗಳೂರು, ಡಿ. 10: ಬೆಂಗಳೂರು ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ (ಬಿಐಎಫ್ಎಫ್) ನಲ್ಲಿ ಅತಿಥಿ ಪಾಸ್ ಖರೀದಿಸಲಾಗದೆ ಚಿತ್ರ ವೀಕ್ಷಣೆಯಿಂದ ವಂಚಿತರಾದವರಿಗೆ ಹೊಸ ಅವಕಾಶ ನೀಡಲಾಗಿದೆ. ಕೇವಲ 100 ರೂ. ಪಾವತಿಸಿ ದಿನವಿಡೀ ಬೇಕಾದಷ್ಟು ಚಲನಚಿತ್ರ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.

    ಚಿತ್ರ ರಸಿಕರಿಗೆ ಕೇವಲ 100 ರೂ. ಶುಲ್ಕದಲ್ಲಿ ದಿನದ ಪಾಸ್ ನೀಡಲಾಗುವುದು. ಈ ಮೂಲಕ ಒಂದು ದಿನದ ಅವಧಿಯಲ್ಲಿ ಚಿತ್ರ ರಸಿಕರು ಮನಬಂದಷ್ಟು ಸಿನೆಮಾ ಸವಿಯಬಹುದು. ಇನಾಕ್ಸ್ (INOX) ಮತ್ತು ಫನ್ ಸಿನೆಮಾದಲ್ಲಿ ಈ ಪಾಸ್‌ಗಳನ್ನು ಪಡೆಯಬಹುದು.

    marga

    ಚಿತ್ರ ರಸಿಕರಿಗೆ ಈ ಸೌಲಭ್ಯ ಒದಗಲು ಪರೋಕ್ಷವಾಗಿ ಕಾರಣವಾಗಿದ್ದು ಕನ್ನಡ ಚಲನಚಿತ್ರೋದ್ಯಮ. ಚಿತ್ರೋದ್ಯಮದ ಜನರಿಗಾಗಿ 500 ಉಚಿತ ಪಾಸ್‌ಗಳನ್ನು ವಿತರಿಸಿದ್ದರೂ ಹೆಚ್ಚಿನವರು ಆಸಕ್ತಿ ತೋರಿಸಿಲ್ಲ. ಆದ್ದರಿಂದ ಪಾಸ್‌ಗಳು ಹಾಗೆಯೇ ಉಳಿದು ಅನೇಕ ಸೀಟ್‌ಗಳು ಖಾಲಿಯಾಗಿಯೇ ಉಳಿದಿದ್ದವು. ಆದ್ದರಿಂದ ಬಿಐಎಫ್ಎಫ್ ಸಂಘಟಕರು ಚಿತ್ರ ರಸಿಕರಿಗೆ ಈ ಅವಕಾಶ ಕೊಡಲು ನಿರ್ಧರಿಸಿದರು.

    ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಕನ್ನಡ ಚಿತ್ರೋದ್ಯಮದವರು ಆಸಕ್ತಿ ತೋರದಿರುವುದಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ನಿರ್ದೇಶಕರು ಹಾಗೂ ತಂತ್ರಜ್ಞರನ್ನು ವೈಯಕ್ತಿಕವಾಗಿ ಸಮಾರಂಭಕ್ಕೆ ಆಹ್ವಾನಿಸಿದ್ದೆ. ಆದರೆ, ಹೆಚ್ಚು ಜನ ಆಸಕ್ತಿ ತೋರಿಲ್ಲ. ಇದಕ್ಕೆ ಕಾರಣವೇನು ಎಂಬುದು ಅರ್ಥವಾಗಿಲ್ಲ" ಎಂದು ತಿಳಿಸಿದ್ದಾರೆ.

    English summary
    Bengaluru International Film Festival (BIFFes) organizers have decided to issue daily passes, priced at Rs. 100 each, by this you can see as many films as you wish in a day. The passes are available at INOX Lido and Fun Cinema.
    Wednesday, December 10, 2014, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X