ಕರುನಾಡಿನಲ್ಲಿ ''ಸು ಫ್ರಮ್ ಸೋ" ಅಬ್ಬರ, ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷರು ಹೇಳಿದ್ದೇನು ?

ಕನ್ನಡಿಗರು ಒಳ್ಳೆಯ ಕನ್ನಡದ ಚಿತ್ರಗಳನ್ನು ಯಾವತ್ತೂ ಕೈ ಬಿಡುವುದಿಲ್ಲ. ಓಟಿಟಿ ಯುಗದಲ್ಲಿ ಪ್ರೇಕ್ಷಕರು ಚಿತ್ರಮಂದಿರದಿಂದ ವಿಮುಖರಾಗಿದ್ದಾರೆ ಎಂಬ ವಾದವನ್ನು ಹಲವರು ಮಾಡಬಹುದು, ಪ್ಯಾನ್ ಇಂಡಿಯಾ ಕಲ್ಪನೆಯಿಂದನೇ ಕನ್ನಡ ಚಿತ್ರರಂಗ ಅವನತಿಯತ್ತ ಸಾಗುತ್ತಿದೆ ಎಂದು ಹೇಳಬಹುದು, ಕನ್ನಡ ಚಿತ್ರರಂಗದ ಕಥೆ ಮುಗೀತು ಎಂಬ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ.. ಇವತ್ತು ಕೂಡ ಕನ್ನಡ ಚಿತ್ರಗಳತ್ತ ಕನ್ನಡಿಗರ ಒಲವು ಇದ್ದೇ ಇದೆ.

ಒಳ್ಳೆಯ ಚಿತ್ರಗಳು ಬರಬೇಕಷ್ಟೇ. ಇದಕ್ಕೆ " ಸು ಫ್ರಮ್ ಸೋ" ಸದ್ಯದ ತಾಜಾ ಉದಾಹರಣೆ. ಹೌದು. " ಸು ಫ್ರಮ್ ಸೋ" .. ಸದ್ಯದ ಅಚ್ಚರಿ.. ವಿಸ್ಮಯ. ಯಾರೆಂದರೆ ಯಾರು ಊಹಿಸದ ಗೆಲುವನ್ನು ಕಂಡ ಈ ಚಿತ್ರವನ್ನು ಸದ್ಯ ಕನ್ನಡಿಗರು ಮುಗಿ ಬಿದ್ದು ನೋಡುತ್ತಿದ್ದಾರೆ. ಕೇವಲ ವಾರಾಂತ್ಯದಲ್ಲಿ ಮಾತ್ರ ಅಲ್ಲ. ವಾರದ ದಿನಗಳಲ್ಲಿ ಕೂಡ "ಸು ಫ್ರಮ್ ಸೋ" ಚಿನ್ನದ ಬೆಳೆ ಬೆಳೆಯುತ್ತಿದೆ.

Film Exhibitors React to Su From So Success An Exclusive with KV Chandrasekhar

ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರ ಬಿಡುಗಡೆಯಾಗಿ ಹನ್ನೆರಡು ದಿನವಾದರೂ ಕೂಡ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಇವತ್ತು ಕೂಡ ಚಿತ್ರ ಕರುನಾಡಿನೆಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ

ಇನ್ನೂ "ಸು ಫ್ರಮ್ ಸೋ" ಚಿತ್ರ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಮಲಯಾಳಂಗೆ ಡಬ್ ಆಗಿ ಬಿಡುಗಡೆಯಾಗಿದೆ. ಅಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಾರ ತೆಲುಗಿನಲ್ಲಿ ಕೂಡ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಒಂದರ್ಥದಲ್ಲಿ " ಸು ಫ್ರಮ್ ಸೋ" ಜ್ವರ ಭಾರತವನ್ನು ಆವರಿಸಿಕೊಳ್ಳುತ್ತಿದೆ.

ಹೀಗೆ ಆವರಿಸಿಕೊಳ್ಳುತ್ತಿರುವ "ಸು ಫ್ರಮ್ ಸೋ" ಚಿತ್ರದ ಕುರಿತು ಕರ್ನಾಟಕ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ ಮತ್ತು ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮಾಲೀಕರಾದ ''ಕೆ.ವಿ. ಚಂದ್ರಶೇಖರ್‌'' ನಿಮ್ಮ ''ಫಿಲ್ಮಿಬೀಟ್‌ ಕನ್ನಡ'' ಜೊತೆ ಕೆಲ ವಿಚಾರ ಹಂಚಿಕೊಂಡಿದ್ದಾರೆ.

ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ''ಕೆ.ವಿ. ಚಂದ್ರಶೇಖರ್‌'', "ಸು ಫ್ರಮ್ ಸೋ" ಬಿಡುಗಡೆಯಾದ ದಿನದಿಂದನೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಬಾಯಿ ಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿಯಾಗಿದೆ. ಮೊದಲಿಂದ ದಿನದಿಂದ ಇಲ್ಲಿಯವರೆಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ, ಚಿತ್ರಪ್ರದರ್ಶನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ'' ಎಂದು ಹೇಳಿದ್ದಾರೆ.

film-exhibitors-react-to-su-from-so-success-an-exclusive-with-kv-chandrasekhar

ಇನ್ನು ಕನ್ನಡದಲ್ಲಿ ಹೊಡಿ ಬಡಿ ಚಿತ್ರಗಳಿಂದ ಪ್ರೇಕ್ಷಕರು ಬೇಸತ್ತಿದ್ದಾರೆ, ರೆಗ್ಯೂಲರ್ ಕಮರ್ಷಿಯಲ್ ಚಿತ್ರಗಳನ್ನು ಪ್ರೇಕ್ಷಕರು ನೋಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಾದವನ್ನು ಕೆಲವರು ಮಾಡುತ್ತಿರುತ್ತಾರೆ. ಈ ಕುರಿತು ಕೂಡ ಪ್ರತಿಕ್ರಿಯೆಯನ್ನು ನೀಡಿರುವ ಕೆ.ವಿ. ಚಂದ್ರಶೇಖರ್‌ ''ಆ ತರಹದ ವಾದ ಒಪ್ಪಲು ಸಾಧ್ಯ ಇಲ್ಲ. ಯಾಕೆಂದರೆ ಈ ವರ್ಷ ಕೆಲ ಕಮರ್ಷಿಯಲ್ ಚಿತ್ರಗಳು ಕೂಡ ಗೆದ್ದಿವೆ. ಸಾಹಸ ಪ್ರಧಾನವಾದ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ''.

"ಸು ಫ್ರಮ್ ಸೋ" ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆಯನ್ನು ನೀಡುತ್ತಿದೆ, ಈ ಹಿನ್ನೆಲೆ ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ ಎಂದು ಹೇಳಿರುವ ಕೆ.ವಿ.ಚಂದ್ರಶೇಖರ್ ಕಾಲ ಕಾಲಕ್ಕೆ ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿರುತ್ತೆ ಹೀಗಾಗಿ ಯಾವ ಚಿತ್ರ ಯಾವ ಸಮಯದಲ್ಲಿ ಗೆಲ್ಲುತ್ತೆ ಎಂದು ಹೇಳುವುದು, ಊಹಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.

ಮುಂದುವರೆದು ನಮ್ಮ '' ವೀರೇಶ್ ಚಿತ್ರಮಂದಿರದಲ್ಲಿ '' ಸು ಫ್ರಮ್ ಸೋ'' ಚಿತ್ರಕ್ಕೆ ಅತ್ಯುತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿರುವ ಕೆ.ವಿ.ಚಂದ್ರಶೇಖರ್ ನಿನ್ನೆ ''ಸೋಮವಾರ''ವಾದ ಹಿನ್ನೆಲೆ 20-25 ಪ್ರೇಕ್ಷಕರೆ ಕೊರತೆ ಕಂಡು ಬಂದಿತ್ತು ಅದನ್ನು ಹೊರತು ಪಡಿಸಿದರೆ ನಿನ್ನೆ ಕೂಡ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿದೆ. ಇಂದು ಸಂಜೆಯ ಪ್ರದರ್ಶನಗಳು ಬಹುತೇಕ ಹೌಸ್‌ಫುಲ್ ಆಗಿವೆ'' ಎಂದು ಹೇಳಿದ್ದಾರೆ. ''ಇದು ಕೇವಲ ವಿರೇಶ್ ಮಾತ್ರವಲ್ಲ ಬದಲಿಗೆ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ''ಸು ಫ್ರಮ್ ಸೋ'' ಚಿತ್ರಕ್ಕೆ ಹನ್ನೆರಡು ದಿನವಾದರು ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಕೂಡ ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.

'' ಚಿತ್ರದ ಗಳಿಕೆಯ ಕುರಿತು ಮಾತನಾಡುವುದು ಬೇಡ ಆದರೆ ಈ ಚಿತ್ರ ಕನ್ನಡಿಗರ ಹೃದಯ ಗೆದ್ದಿರುವುದು ಮಾತ್ರ ಸತ್ಯ'' ಎಂದು ಕೂಡಾ ''ಫಿಲ್ಮಿಬೀಟ್ ಕನ್ನಡ''ಗೆ ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.

More from Filmibeat

English summary
Su From So, Kannada film, Film Exhibitors Association, KV Chandrasekhar, film success, box office, Filmibeat Kannada, exclusive interview, Kannada cinema, theater business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X