»   » ಅಂ.ರಾ.ಚಲನಚಿತ್ರೋತ್ಸವ : ಪ್ರದರ್ಶನಕ್ಕೆ 20 ಸಾಕ್ಷ್ಯಚಿತ್ರ ಆಯ್ಕೆ

ಅಂ.ರಾ.ಚಲನಚಿತ್ರೋತ್ಸವ : ಪ್ರದರ್ಶನಕ್ಕೆ 20 ಸಾಕ್ಷ್ಯಚಿತ್ರ ಆಯ್ಕೆ

Posted By: Super
Subscribe to Filmibeat Kannada

ನವದೆಹಲಿ : ಬೆಂಗಳೂರಿನಲ್ಲಿ ನಡೆಯಲಿರುವ 32ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ 'ಭಾರತೀಯ ಪನೋರಮಾ ಸಾಕ್ಷ್ಯ ಚಿತ್ರ ವಿಭಾಗ"ದಲ್ಲಿ ಪ್ರದರ್ಶಿಸಲು ಒಟ್ಟು 20 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು , ಎಸ್‌.ಕೆ. ಭಗವಾನ್‌ ನಿರ್ದೇಶನದ 'ಡಾ. ರಾಜ್‌ಕುಮಾರ್‌- ದ ಲಿವಿಂಗ್‌ ಲೆಜೆಂಡ್‌" ಆಂಗ್ಲ ಚಿತ್ರವಿಭಾಗದಲ್ಲಿ ಪ್ರದರ್ಶನ ಗೊಳ್ಳಲಿದೆ.

ಹೈಮಂತಿ ಬ್ಯಾನರ್ಜಿ ಅವರ ಮರಾಠಿಯ 'ಬಾಲಗಂಧರ್ವ" ಉದ್ಘಾಟನಾ ಚಿತ್ರವಾಗಿ ಪ್ರದರ್ಶನ ಕಾಣಲಿದೆ. ಈ ಕುರಿತಾದ ವರದಿಯನ್ನು ಪ್ರಸಿದ್ಧ ಚಿತ್ರಕರ್ಮಿ ಪ್ರೇಮಾ ಕಾರಂತ್‌ ಅಧ್ಯಕ್ಷತೆಯ ಆಯ್ಕೆ ಸಮಿತಿ ಬುಧವಾರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಸಲ್ಲಿಸಿತು. ಅತ್ಯುತ್ತಮ ಸಾಕ್ಷ್ಯ ಚಿತ್ರ ಎಂದು 1999 ಮತ್ತು 2000ನೇ ಇಸವಿಯಲ್ಲಿ ಪ್ರಶಸ್ತಿ ಪಡೆದಿದ್ದ ಅರವಿಂದ ಸಿನ್ಹಾ ಅವರ 'ದುಯಿ ಪಾತನ್‌ ಕೇ ಬೀಚ್‌ ಮೆ" ಮತ್ತು ಅರುಣ್‌ ಖೋಪ್ಕರ್‌ ಅವರ 'ರಸಿಕ್‌ ಪ್ರಿಯಾ" ಹಿಂದಿ ಚಿತ್ರಗಳು ಆಯ್ಕೆಯಾಗಿವೆ.

ಆಂಗ್ಲ, ಕನ್ನಡ, ಹಿಂದಿ ಭಾಷೆಗಳಲ್ಲಿ ನಿರ್ಮಿಸಿರುವ 'ಸ್ಕಿೃಬಲ್ಸ್‌ ಆನ್‌ ಅಕ್ಕ" (ಮಧುಶ್ರೀ ದತ್ತಾ) ಮತ್ತು ಕನ್ನಡದ 'ನಂಗ ಜೇನು, ನಗ್ನ ಕರಡಿ, ನಂಗ ಅಜ್ಜ " (ವಿನೋದ್‌ ರಾಜ) ಪ್ರದರ್ಶಿತವಾಗಲಿದೆ. ಚಿತ್ರ ನಿರ್ಮಾಪಕ ಜಬ್ಬಾರ್‌ ಪಟೇಲ್‌, ಎಂ.ಎಸ್‌. ಸತ್ಯು, ನಟಿ ಹೇಮಾ ಚೌಧರಿ, ರಂಗ ತಜ್ಞ ರಾಮ್‌ ಗೋಪಾಲ್‌ ಬಜಾಜ್‌ ಮತ್ತಿತರರು ಆಯ್ಕೆ ಸಮಿತಿಯಲ್ಲಿದ್ದರು.

ಆಯ್ಕೆಗೆ ಬಂದಿದ್ದ 73 ಚಿತ್ರಗಳ ಪೈಕಿ- 6 ಇಂಗ್ಲೀಷ್‌, 3 ಮಲಯಾಳಂ, 2 ಬೆಂಗಾಳಿ ಹಾಗೂ ಅಸ್ಸಾಮಿ, ಕನ್ನಡ, ಮರಾಠಿ ಮತ್ತು ತಮಿಳು ಭಾಷೆಗಳ ತಲಾ 1 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.

(ಇನ್ಫೋ ವಾರ್ತೆ)

English summary
Kannada Edition of Oneindia- Bangalore : 20 documentary films selected for international film festival

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada