twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರೋತ್ಸವದಲ್ಲಿ ರಾಜಮಾರ್ಗದ ಅನಾವರಣ

    By Super
    |

    ಬರುವ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮುಖ್ಯ ಆಕರ್ಷಣೆ ಡಾ.ರಾಜ್‌ಕುಮಾರ್‌. ಉತ್ಸವ ಉದ್ಘಾಟಿಸಲು ನೀಡಿರುವ ಬುಲಾವಿಗೆ ಅವರು ಇನ್ನೂ ಉತ್ತರ ಕೊಟ್ಟಿಲ್ಲ. ಉತ್ಸವ ಉದ್ಘಾಟಿಸಲಿ ಬಿಡಲಿ, ಚಲಚ್ಚಿತ್ರೋತ್ಸವದಲ್ಲಿ ಅವರ ಹೆಸರು ಮೊಳಗುವುದು ಖರೆ. ಯಾಕೆಂದರೆ, ಎಸ್‌.ಕೆ.ಭಗವಾನ್‌ ನಿರ್ಮಿಸಿ, ನಿರ್ದೇಶಿಸಿರುವ ಅಣ್ಣಾವ್ರ ಕುರಿತಾದ ಇಂಗ್ಲಿಷ್‌ ಸಾಕ್ಷ್ಯಚಿತ್ರ ಉತ್ಸವದಲ್ಲಿ ಪ್ರದರ್ಶಿತವಾಗಲಿದೆ.

    ಅಣ್ಣಾವ್ರ ನಿಕಟವರ್ತಿಗಳಲ್ಲಿ ಒಬ್ಬರಾದ, ಅನೇಕ ಮೈಲುಗಲ್ಲು ಚಿತ್ರಗಳನ್ನು ಕೊಟ್ಟ ಎಸ್‌.ಕೆ.ಭಗವಾನ್‌ ಕಳೆದ ವರ್ಷವೇ ಈ ಸಾಕ್ಷ್ಯಚಿತ್ರ ಶೂಟ್‌ ಮಾಡಿಕೊಂಡಿದ್ದರು. ಅಣ್ಣಾವ್ರ ಹುಟ್ಟು, ಬಾಲ್ಯ, ರಂಗ ಜೀವನದಿಂದ ಹಿಡಿದು ಸಿನಿಮಾ ಪ್ರವೇಶ, ಅಲ್ಲಿ ಉತ್ತುಂಗಕ್ಕೆ ಏರಿ ಅನನ್ಯರಾದ ವಿವರಗಳನ್ನು ಪುಂಖಾನುಪುಂಖ ರೀಲಿಗೆ ತುಂಬಿಸಿದ್ದಾರೆ ಭಗವಾನ್‌. ಆಂಗ್ಲ ಪತ್ರಿಕೆಯಾಂದು ಈ ವಿಷಯವನ್ನು ಹೆಕ್ಕಿ ತೆಗೆದಿದೆ.

    ಭಗವಾನ್‌ ಬಹು ದಿನಗಳ ಬಯಕೆ ಇದಾಗಿತ್ತಂತೆ. ರಾಜ್‌ ಮನೆ ಸದಸ್ಯರ ಸ್ಥಾನ ಗಿಟ್ಟಿಸಿಕೊಂಡವರ ಪೈಕಿ ಭಗವಾನ್‌ ಕೂಡ ಒಬ್ಬರು. ಕಾರ್ಯಕಾರಿ ನಿರ್ಮಾಪಕ ಎಂ.ಡಿ.ಕೌಶಿಕ್‌ ಅಣ್ಣಾವ್ರ ಸಾಕ್ಷ್ಯ ಚಿತ್ರ ತೆಗೆಯಲು ಕುಮ್ಮಕ್ಕು ಕೊಟ್ಟರು. ಕಳೆದ ವರ್ಷವೇ ಮುಗಿದ ಕೆಲಸಕ್ಕೆ ಈಗ ಅರ್ಥ ಸಿಗಲಿದೆ.

    ಭಗವಾನ್‌ ಹೇಳುವಂತೆ.... ಅಂತರರಾಷ್ಟ್ರೀಯ ಚಲಚ್ಚಿತ್ರೋತ್ಸವದಲ್ಲಿ ಹಿಂದೆಂದೂ ಸಾಕ್ಷ್ಯಚಿತ್ರ ಪ್ರದರ್ಶಿಸುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿರಲಿಲ್ಲ. ಜೊತೆಗೆ ಬೆಂಗಳೂರಿನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿರುವ ಏಕೈಕ ಸಾಕ್ಷ್ಯಚಿತ್ರ ಇದು. ಈ ಸಾಕ್ಷ್ಯಚಿತ್ರ ಅಣ್ಣಾವ್ರ ಹಾಗೂ ಅವರ ಚಿತ್ರಗಳ ಬಗ್ಗೆ ಇಂಚಿಂಚೂ ಮಾಹಿತಿ ಕೊಡಲಿದೆ. ಅವರು ನಟಿಸಿರುವ 200ಕ್ಕೂ ಹೆಚ್ಚು ಚಿತ್ರಗಳ ಪೈಕಿ 100 ಚಿತ್ರಗಳನ್ನು ಮತ್ತೆ ಮತ್ತೆ ನೋಡಿ, ಇದನ್ನು ಸಿದ್ಧಪಡಿಸಿದೆ. ಸಾಕ್ಷ್ಯಚಿತ್ರ ತೆಗೆಯುವ ಇಂಗಿತವನ್ನು ಅಣ್ಣಾವ್ರ ಹತ್ತಿರ ಹೇಳಿದಾಗ, ಅವರು ತಮ್ಮ ಬಗ್ಗೆ ತಾವೇ ಹೇಳಿಕೊಳ್ಳಲು ನಿರಾಕರಿಸಿದರು. ಅದು ಅವರ ದೊಡ್ಡ ಗುಣ.

    ಹಲವರು ಕಂಡಂತೆ ರಾಜ್‌ : ಸಾಕ್ಷ್ಯಚಿತ್ರದಲ್ಲಿ ಕೇವಲ ಕಾಮೆಂಟ್ರಿಯಷ್ಟೇ ಅಲ್ಲ. ರಾಜ್‌ ತಂದೆ- ತಾಯಿ ಬಾಳಿದ ಊರು, ಗಾಜನೂರಿನಲ್ಲಿ ಅಣ್ಣಾವ್ರನ್ನು ಕಂಡ ಜೀವಗಳ ಮಾತುಗಳು, ಅಕ್ಕಿನೇನಿ ನಾಗೇಶ್ವರ ರಾವ್‌ ಹಾಗೂ ಇತ್ತೀಚೆಗಷ್ಟೇ ತೀರಿಹೋದ ಶಿವಾಜಿ ಗಣೇಶನ್‌ ಅವರು ಕಂಡಂತೆ ರಾಜ್‌, ಅಣ್ಣಾವ್ರ ಹೆಂಡತಿ- ಮಕ್ಕಳ ಅನುಭವದ ತುಣುಕುಗಳು... ಇನ್ನೂ ಹಲವಾರು ಮಾಹಿತಿಗಳು ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳ್ಳಲಿವೆ.

    ಅಂದಹಾಗೆ, ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಸಾಕ್ಷ್ಯಚಿತ್ರದಲ್ಲಿ ರಾಜ್‌ ಅಪಹರಣದ ಬಗ್ಗೆ ಒಂದು ಮಾತೂ ಇಲ್ಲ !

    English summary
    S.K.Bhagavans documentary on Dr Rajkumar to be screened on International film festival
    Sunday, July 14, 2013, 13:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X