ಪುನೀತ್ ನಿಧನಕ್ಕೆ ಗಣ್ಯರ ವಿದಾಯದ ಹೃದಯದ ಮಾತುಗಳು
ಬೆಂಗಳೂರು, ಅ. 30: ನಟ ಪುನೀತ್ ಅವರ ಅಂತಿಮ ದರ್ಶನಕ್ಕಾಗಿ ಹರಿದು ಬರುತ್ತಿರುವ ಅಭಿಮಾನಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ! ನಿನ್ನೆ ರಾತ್ರಿಯಿಂದಲೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ತೆಲಗು ಹಾಗೂ ತಮಿಳು ಸಿನಿ ರಂಗದ ನಟರು ಆಗಮಿಸುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ , ನಿರ್ಮಾಪಕ ಪ್ರಶಾಂತ್ ನೀಲ್ ಸೇರಿದಂತೆ ಸ್ಟಾರ್ ನಟರು ಆಗಮಿಸಿ ಅಂತಿಮ ದರ್ಶನ ಪಡೆದು ಕಣ್ಣೀರಿನ ವಿದಾಯ ಹೇಳಿದರು.
ನಟ ಪುನೀತ್ ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಸಾವಿರಾರು ಅಭಿಮಾನಿ ಸಂಖ್ಯೆ ಕಡಿಮೆಯಾಗಿಲ್ಲ. ವೃದ್ಧರು, ಮಕ್ಕಳು ಸಾಲು ಸಾಲು ಹರಿದು ಬರುತ್ತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಹರ ಸಾಹಸ ಮಾಡುತ್ತಿದ್ದಾರೆ. ತಡರಾತ್ರಿಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಪಡೆದು ಕಣ್ತುಂಬಿ ಕೊಳ್ಳುತ್ತಿದ್ದಾರೆ. ಸಿನಿಮಾ ನಟ, ನಟಿಯರು ಅಂತಿಮ ದರ್ಶನ ಪಡೆದು ನುಡಿ ನಮನ ಸಲ್ಲಿಸಿದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ರಾಜೇಶ್ ಕೃಷ್ಣನ್ ನಟರಾದ ಚೇತನ್ ಮತ್ತಿತರರು ಪುನೀತ್ ಅಂತಿಮ ದರ್ಶನ ಪಡೆದರು.
ಉಟ ಬಿಟ್ಟ ಅಭಿಮಾನಿ: ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿದ ಬಳಿಕ 9 ವರ್ಷದ ಬಾಲಕ ಊಟ ಬಿಟ್ಟಿದ್ದಾನೆ. ಹುಡುಗನ ಅಳು ನೋಡಿ ಪಾರ್ತೀವ ಶರೀರ ನೋಡಲು ಬಾಲಕನೊಂದಿಗೆ ಪೋಷಕರು ಆಗಮಿಸಿ ಅಂತಿಮ ದರ್ಶನ ಪಡೆದ ಪ್ರಸಂಗ ನಡೆಯಿತು. ವೃದ್ಧರು, ಹಿರಿಯರು, ಮಕ್ಕಳು ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೋಟ್ಸ್
ಎರಡು ದಿನದ ಹಿಂದೆ ನಾನು ಪುನೀತ್ ನನ್ನು ಭೇಟಿ ಮಾಡಿದ್ದೆ. ನವೆಂಬರ್ ಒಂದನೇ ತಾರೀಖು ಸರ್ಪ್ರೈಸ್ ಇದೆ. ಬಂದು ಭೇಟಿ ಮಾಡೋಕೆ ಹೇಳಿದ್ದರು. ಆದರೆ ಈಗ ಅವರೇ ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಅಜನೀಶ್ ಲೋಕನಾಥ್, ಸಂಗೀತ ನಿರ್ದೇಶಕ,
ಅತಿ ಕಿರಿಯ ವಯಸ್ಸಿನಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ್ದಾರೆ. ಈಗ ಅವರು ದೂರ ಹೋಗಿದ್ದಾರೆ ಅಂದ್ರೆ ನಂಬೋಕೆ ಆಗ್ತಿಲ್ಲ. ಅವರು ಕೊಟ್ಟಿರುವ ಸಂದೇಶ ಶ್ಲಾಘನೀಯ. ವೃದ್ಧಾಶ್ರಮಕ್ಕೆ ತಂದೆ ತಾಯಿಯನ್ನು ಕಳಿಸುವ ನಿಟ್ಟಿನಲ್ಲಿ ಒಳ್ಳೆಯ ಸಂದೇಶ ಕಳಿಸಿದ್ದಾರೆ. ನಮ್ಮ ಮನೆಯ ಮಗನನ್ನು ಕಳೆದುಕೊಂಡಿರುವ ನೋವಿದೆ. ಕಾಣದ ಕೆಲಸಗಳನ್ನು ಮಾಡಿ ಈಗಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಶೋಭರಾಜ್, ನಟ
ಅಪ್ಪು ನಮ್ಮ ಊರು ಹುಡುಗ. ನಮ್ಮೂರಿನಲ್ಲಿ ಬಸವ ದೇವಸ್ಥಾನ ಕಟ್ಟಿಸಿದ್ದ. ಅಪ್ಪು ಇಲ್ಲ ಅಂತ ನೆನಸಿಕೊಳ್ಳಲು ಆಗ್ತಿಲ್ಲ. ಅಪ್ಪು
ಅಪ್ಪು ಅಭಿಮಾನಿ ವಿಶೇಷ ಚೇತನ,
ದೇವರು ತುಂಬಾ ಕ್ರೂರಿ. ಈಗಲೂ ನಂಬೋಕೆ ಆಗ್ತಿಲ್ಲ. ಪುನೀತ್ ಸಜ್ಜನ, ಸರಳ ವ್ಯಕ್ತಿ. ಈಗಲೂ ಅವರು ಇಲ್ಲ ಅನ್ನೋದನ್ನು ನಂಬುವುದಕ್ಕೆ ಆಗ್ತಿಲ್ಲ. ಶಂಕರ್‌ನಾಗ್ ಮತ್ತು ಡಾ. ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನೋವು ನನಗೆ ಆಗ್ತಿದೆ. ಇದು ಸ್ಯಾಂಡಲ್ ವುಡ್ ಗೆ ಬ್ಲಾಕ್ ಡೇ. ನನಗೂ ಸಹ
ವಿನೋದ್ ಆಳ್ವಾ, ನಟ
ಕರ್ನಾಟಕದ ಆರು ಕೋಟಿ ಜನರಿಗೆ ನೋವು ತಂದಿದೆ. ಅವರ ಜತೆ ಮೌರ್ಯ ಸಿನಿಮಾದಲ್ಲಿ ನಟಿಸಿದ್ದೆ. ಸಿಕ್ಕಾಗಲೆಲ್ಲಾ ಹೇಳ್ತಿದ್ರು ನಮ್ಮ ಜತೆ ನಟಿಸಲ್ವಾ ಅಂತ. ರಾಜ್ ಕುಮಾರ್ ಬಿಟ್ಟರೆ ಇವರೇ ನಮಗೆಲ್ಲಾ, ಏನು ಹೇಳಬೇಕು ಅಂತ ಹೇಳೋಕೆ ಆಗ್ತಿಲ್ಲ.
- ಪ್ರಭಾಕರ್ ಕೋಟೆ, ನಟ
ಪುನೀತ್ ವಿಚಾರ ತಿಳಿದು ಸಂಕಟ ಆಗಿದೆ. ದೊಡ್ಡ ಶಾಕ್ ಇದು. ಆನ್ ಸ್ಟ್ರೀನ್ ನಲ್ಲಿ ನಾನು ತಂಗಿ ಪಾತ್ರ ಮಾಡಿದ್ದೆ. ನಾನು ಯಾವಾಗ ಪೋನ್ ಮಾಡಿದ್ರೂ ಅಟೆಂಡ್ ಮಾಡ್ತಿದ್ರು. ದೊಡ್ಡ ಮನೆ ದುಖಃ ಇಡೀ ಇಂಡಸ್ಟ್ರೀಗೆ ದೊಡ್ಡ ಲಾಸ್.
ಸಂಚಿತಾ ಶೆಟ್ಟಿ ತಮಿಳುನಟಿ,
ಕನ್ನಡ ಚಲನಚಿತ್ರ ಬಡವಾಗಿದೆ. ಈ ನಷ್ಟ ತುಂಬೋಕೆ ಆಗಲ್ಲ. ಇವತ್ತು ನಿಜವಾಗಿಯೂ ಕನ್ನಡ ಚಿತ್ರರಂಗ ಬಡವಾಗಿದೆ.
ಸೂರಪ್ಪ ಬಾಬು, ನಿರ್ಮಾಪಕ,
ಇಡೀ ಚಿತ್ರರಂಗ ನಷ್ಟದಲ್ಲಿದೆ. ಸಾಮಾಜಿಕ ಕಳಕಳಿ ಇರುವ ಸಜ್ಜನ ವ್ಯಕ್ತಿ. ಅವರ ಅಗಲಿಕೆ ನೋವನ್ನು ಉಂಟು ಮಾಡಿದೆ. ಎಲ್ಲರ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಅವರು ಮಾಡಿರುವ ಸಾಧನೆ ಎಂದೆಂದಿಗೂ ಅಜರಾಮರವಾಗಿರುತ್ತದೆ.
ಸಿದ್ಧಗಂಗಾ ಶ್ರೀಗಳು, ತುಮಕೂರು


Click it and Unblock the Notifications











