twitter
    For Quick Alerts
    ALLOW NOTIFICATIONS  
    For Daily Alerts

    ಅದೆಷ್ಟೋ ಸಿನಿಮಾ ಕಥೆಗಳಿಗೆ ಜೀವ ಸಿಕ್ಕಿದ್ದು ಇದೇ 'ಕೆಫೆ ಕಾಫಿ ಡೇ'ನಲ್ಲಿ.!

    |

    ಸರ್, ನಿಮ್ಮನ್ನ ಒಮ್ಮೆ ಭೇಟಿ ಆಗ್ಬೇಕಿತ್ತಲ್ವಾ....?
    ಹೌದು, ಸರಿ ಜಯನಗರದಲ್ಲಿರುವ ಕೆಫೆ ಕಾಫಿ ಡೇ ಬಳಿ ಬನ್ನಿ....

    ಸರ್ ಒಂದು ಕಥೆ ಇತ್ತು, ನಿಮ್ಗೆ ಹೇಳ್ಬೇಕಿತ್ತು....?
    ಮಲ್ಲೇಶ್ವರಂನಲ್ಲಿರುವ ಕೆಫೆ ಕಾಫಿ ಡೇ ಬನ್ನಿ....

    ಹಲೋ,,,,ಹೇ ಹುಡುಗಿ ಎಲ್ಲಿಗೆ ಬರಲಿ....?
    ಲೋ, ಬ್ರಿಗೆಡ್ ರೋಡ್ ನಲ್ಲಿರುವ ಕೆಫೆ ಕಾಫಿ ಡೇ ಹತ್ರಾ ಬಾ....

    ಹೀಗೆ, ಭೇಟಿಗೆ ಆಗಿರಬಹುದು ಅಥವಾ ಮಾತುಕತೆಗೆ ಆಗಿರಬಹುದು. ಬಹುತೇಕ ವಿಷ್ಯಗಳಿಗೆ ಕೆಫೆ ಕಾಫಿ ಡೇ ಉತ್ತಮ ಸ್ಥಳ ಆಗಿತ್ತು. ಅಲ್ಲಿ ಸಿಗುವ ಕಾಫಿ ಬೆಲೆ ದುಬಾರಿ ಎನ್ನುವುದು ಬಿಟ್ಟರೇ, ಅದೇನೋ ಒಂಥರಾ ಶಾಂತಿ, ನೆಮ್ಮದಿ, ನಿರಾಳತೆ ಆ ಕೆಫೆ ಡೇ ಒಳಗೆ ಇರ್ತಿತ್ತು. ಅದಕ್ಕೆ ಅನ್ಸುತ್ತೆ ಸಿನಿಮಾ ಮಂದಿಗೆ ಮತ್ತು ಯುವ ಜನತೆಗೆ ಈ ಕೆಫೆ ಕಾಫಿ ಡೇ ನೆಚ್ಚಿನ ಜಾಗ ಆಗಿದೆ.

    ಒಂದು ಕಥೆ ಹೇಳಬೇಕೆಂದರೂ, ಹೀರೋ ಹೀರೋಯಿನ್ ಡೇಟ್ ಕೇಳಬೇಕೆಂದರೂ, ಸಂಭಾವನೆ ವಿಚಾರ ಮಾತನಾಡಬೇಕೆಂದರೂ, ಹೊಸದಾಗಿ ಏನಾದರೂ ಯೋಚನೆ ಮಾಡಬೇಕೆಂದರೂ ಮೊದಲ ಹೊಳೆಯುವ ಸ್ಥಳ ಕೆಫೆ ಕಾಫಿ ಡೇ.

    Film Industry Have Close Relationship with Cafe Coffee Day

    ಕಾಫಿ ದೊರೆ ಸಿದ್ದಾರ್ಥ್ ಸಾವು : ಸುದ್ದಿ ಕೇಳಿ ಆಘಾತಗೊಂಡ ರಾಗಿಣಿ ಕಾಫಿ ದೊರೆ ಸಿದ್ದಾರ್ಥ್ ಸಾವು : ಸುದ್ದಿ ಕೇಳಿ ಆಘಾತಗೊಂಡ ರಾಗಿಣಿ

    ಇಂತಹ ಕೆಫೆ ಕಾಫಿ ಡೇ ಅದೆಷ್ಟೋ ಸಿನಿಮಾಗಳ ಕಥೆಗೆ ಜನ್ಮಸ್ಥಳವಾಗಿದೆ. ಅದೆಷ್ಟೋ ಕಲಾವಿದರನ್ನ ನಿರ್ದೇಶಕ, ನಿರ್ಮಾಪಕರಿಗೆ ಪರಿಚಯ ಮಾಡಿಕೊಟ್ಟಿದೆ. ಅದೆಷ್ಟೋ ಹೀರೋ-ಹೀರೋಯಿನ್ ಗಳು ಮೊದಲ ಸಂಭಾವನೆ ಪಡೆದ ಜಾಗವೂ ಆಗಿದೆ. ಕೆಲವರು ಇಲ್ಲಿ ಕೂತು ಕಥೆ ಬರೆದಿರಬಹುದು, ಇನ್ನು ಕೆಲವರು ಕಥೆ ಹೇಳಿರಬಹುದು. ಒಟ್ನಲ್ಲಿ ಸಿನಿಮಾ ಇಂಡಸ್ಟ್ರಿಗೂ ಕೆಫೆ ಕಾಫಿ ಡೇಗೆ ಅವಿನಾಭಾವ ಸಂಬಂಧ ಅಂದ್ರೆ ತಪ್ಪಾಗಲ್ಲ.

    ಸಿದ್ದಾರ್ಥ್ ನಿಧನಕ್ಕೆ ನಟಿ, ಸಂಸದೆ ಸುಮಲತಾ ಸಂತಾಪ ಸಿದ್ದಾರ್ಥ್ ನಿಧನಕ್ಕೆ ನಟಿ, ಸಂಸದೆ ಸುಮಲತಾ ಸಂತಾಪ

    ಕೆಫೆ ಕಾಫಿ ಡೇ ಕುರಿತಂತೆ ನಿರ್ದೇಶಕ ಸಿಂಪಲ್ ಸುನಿ ಒಂದು ವಿಶೇಷವಾದ ನೆನಪು ಬಿಚ್ಚಿಟ್ಟಿದ್ದಾರೆ. ಸುನಿ ನಿರ್ದೇಶನದ ಮೊದಲ ಸಿನಿಮಾ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಕಥೆಯನ್ನ ರಕ್ಷಿತ್ ಶೆಟ್ಟಿಗೆ ರೀಡಿಂಗ್ ಮಾಡಿದ್ದು ಶೇಷಾದ್ರಿಪುರಂ ಕೆಫೆ ಕಾಫಿ ಡೇನಲ್ಲಂತೆ. ಆ ಚಿತ್ರದ ನಾಯಕಿ ಶ್ವೇತಾ ಶ್ರೀವಾಸ್ತವ್ ಗೆ ಕಥೆ ರೀಡಿಂಗ್ ಮಾಡಿದ್ದು ಬನಶಂಕರಿಯಲ್ಲಿ ಕೆಫೆ ಕಾಫಿ ಡೇನಲ್ಲಂತೆ.

    Film Industry Have Close Relationship with Cafe Coffee Day

    ಇದು ಕೇವಲ ಒಬ್ಬ ನಿರ್ದೇಶಕ ಹಾಗೂ ಒಂದು ಸಿನಿಮಾದ ಕತೆ. ಇಂತಹ ಅನೇಕ ಘಟನೆಗಳು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ನಡೆದಿದೆ, ನಡೆಯುತ್ತಲೂ ಇದೆ. ಬರಿ, ಸ್ಯಾಂಡಲ್ ವುಡ್ ಮಾತ್ರವಲ್ಲ ತೆಲುಗು, ತಮಿಳು, ಬಾಲಿವುಡ್ ಹೀಗೆ ಪ್ರತಿಯೊಂದು ಸಿನಿಮಾ ಜಗತ್ತಿನಲ್ಲೂ ಕೆಫೆ ಕಾಫಿ ಡೇ ಒಂದು ನೆನಪಾಗಿದೆ ಉಳಿದಿರುತ್ತೆ.

    Film Industry Have Close Relationship with Cafe Coffee Day

    ಇಂತಹ ಕೆಫೆ ಕಾಫಿ ಡೇ ಹುಟ್ಟುಹಾಕಿದ್ದ ಉದ್ಯಮಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಮಲೆನಾಡಿನ ಕಾಫಿಯ ಮಹತ್ವವನ್ನ ವಿಶ್ವಕ್ಕೆ ತೋರಿಸಿಕೊಟ್ಟ ಕನ್ನಡಿಗ ಈಗ ಬರಿ ನೆನಪು ಮಾತ್ರ. ಆದ್ರೆ, ಅವರು ಹುಟ್ಟು ಹಾಕಿದ ಕೆಫೆ ಕಾಫಿ ಡೇ ಮಾತ್ರ ಅಳಿಯದೇ ಹಾಗೆ ಉಳಿಯಲಿ.

    English summary
    Cafe Coffee Day is very close to film industry. because, Most of all film personalities meet in cafe coffee day, discussed about film stories.
    Wednesday, July 31, 2019, 13:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X