'ಡ್ಯಾಶ್ ಮುಚ್ಕೊಂಡ್ ಕೆಲಸ ಮಾಡಿ' ಎಂದ ರಕ್ಷಿತ್ ಪಿ.ಎ: ಸಿಡಿದೆದ್ದ ಪತ್ರಕರ್ತರು.!

''ನಮಗೆ ನೀವೇ ದಾರಿ ಮಾಡಿ ಕೊಟ್ಟಿದ್ದು. ನಮ್ಮ ಮನಸ್ಸಿನಲ್ಲಿ ಪ್ರೀತಿ ಇದ್ದದ್ದು ನಿಜ. ಆದ್ರೆ, ಮನೆಯವರ ಬಳಿ ಮಾತನಾಡಿರಲಿಲ್ಲ. ಮೀಡಿಯಾದಲ್ಲಿ ಸುದ್ದಿ ಆದ್ಮೇಲೆ, ಏನಾದರೂ ನಿರ್ಧಾರಕ್ಕೆ ಬರಬೇಕು ಅಂತ ನಾನೇ ಮಾತನಾಡಿದೆ. ಥ್ಯಾಂಕ್ಸ್ ಟು ಯು'' - ಇದು ಕಳೆದ ವರ್ಷದ ಹುಟ್ಟುಹಬ್ಬದಂದು (ಜೂನ್ 6) ರಕ್ಷಿತ್ ಶೆಟ್ಟಿ ಬಾಯಿಂದ ಬಂದ ಮಾತುಗಳು.

ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಒಂದಾಗಲು ಮಾಧ್ಯಮಗಳೇ ಕಾರಣ ಅಂತ ವರ್ಷದ ಹಿಂದೆ ರಕ್ಷಿತ್ ಶೆಟ್ಟಿ ಥ್ಯಾಂಕ್ಸ್ ಹೇಳಿದ್ದರು. ಆದ್ರೀಗ, ಅದೇ ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ''ಡ್ಯಾಶ್ ಮುಚ್ಕೊಂಡ್ ನಿಮ್ ಕೆಲಸ ನೀವ್ ಮಾಡಿ'' ಎಂದು ರಕ್ಷಿತ್ ಶೆಟ್ಟಿ ಪಿ.ಎ ಪ್ರವೀಣ್ ಬರೆದುಕೊಂಡಿದ್ದಾರೆ.!

ಅಲ್ಲ ಸ್ವಾಮಿ... ಇರುವ ಸುದ್ದಿಯನ್ನ ವರದಿ ಮಾಡೋದೇ ತಪ್ಪಾ.? ಬೆಂಕಿ ಇಲ್ಲದೆ ಹೊಗೆಯಾಡಲು ಹೇಗೆ ಸಾಧ್ಯ.?

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮನಸ್ಸಿನಲ್ಲಿ ಪ್ರೀತಿ ಮೊಳಕೆಯೊಡೆದಿದೆ ಎಂಬ ಗುಸುಗುಸು 'ಕಿರಿಕ್ ಪಾರ್ಟಿ' ಚಿತ್ರತಂಡದಿಂದ ಕೇಳಿಬಂದ್ಮೇಲೆ ಎಲ್ಲಾ ಕಡೆಯೂ ಬ್ರೇಕಿಂಗ್ ನ್ಯೂಸ್ ಆಗಿದ್ದು.! ಈಗ ಇಬ್ಬರ ಮಧ್ಯೆ ಮನಸ್ತಾಪ ಮೂಡಿದೆ ಅಂತ ಕುಟುಂಬದ ಆಪ್ತ ವಲಯವೇ ಹೇಳಿದ್ಮೇಲೆ ಪತ್ರಿಕೆ ಹಾಗೂ ಮಾಧ್ಯಮಗಳು ವರದಿ ಪ್ರಕಟ ಮಾಡಿದವು. ಇನ್ನೂ ಇದೇ ವಿಚಾರದ ಕುರಿತಾಗಿ ರಶ್ಮಿಕಾ ತಾಯಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇವೆಲ್ಲವೂ ರಕ್ಷಿತ್-ರಶ್ಮಿಕಾ ವೈಯುಕ್ತಿಕ ವಿಚಾರ ಅನ್ನೋದು ಸತ್ಯ. ಆದ್ರೆ, ಅವರಿಬ್ಬರಿಗೂ ಸಾಮಾಜಿಕ ಜವಾಬ್ದಾರಿ ಹಾಗೂ ಬದ್ಧತೆ ಇದೆ ಅನ್ನೋದನ್ನ ಯಾರೂ ಮರೆಯುವ ಹಾಗಿಲ್ಲ. ರಕ್ಷಿತ್-ರಶ್ಮಿಕಾ ರನ್ನ ಫಾಲೋ ಮಾಡುವವರು ಸಾವಿರಾರು ಮಂದಿ ಇದ್ದಾರೆ. ಎಲ್ಲರಿಗೂ ಅವರಿಬ್ಬರು ರೋಲ್ ಮಾಡೆಲ್ ಆಗಿ ಬದುಕಬೇಕು ಅಲ್ಲವೇ.?

ಕ್ಯೂಟ್ ಜೋಡಿ ಅಂತಲೇ ಹೆಸರುವಾಸಿ ಆಗಿದ್ದ ರಕ್ಷಿತ್-ರಶ್ಮಿಕಾ ಬ್ರೇಕಪ್ ವಿಚಾರ ಎಲ್ಲರಿಗೂ ಶಾಕ್ ತಂದಿದೆ. ಇದೇ ವಿಚಾರವಾಗಿ ರಕ್ಷಿತ್ ಶೆಟ್ಟಿ ಬೇಗ ಪ್ರತಿಕ್ರಿಯೆ ಕೊಟ್ಟು ಪರಿಸ್ಥಿತಿಯನ್ನ ತಿಳಿಗೊಳಿಸಬಹುದಿತ್ತು. ಅದು ಬಿಟ್ಟು ಅವರ ಪಿ.ಎ ಪ್ರವೀಣ್ ಮೀಡಿಯಾದವರಿಗೆ ''ಡ್ಯಾಶ್ ಮುಚ್ಕೊಂಡ್ ನಿಮ್ ಕೆಲಸ ನೀವ್ ಮಾಡಿ'' ಅಂದ್ರೆ ಹೇಗೆ.? ಇದೇ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ರಕ್ಷಿತ್ ಶೆಟ್ಟಿ ಪಿ.ಎ ಪ್ರವೀಣ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಮುಂದೆ ಓದಿರಿ...

ರಕ್ಷಿತ್ ಶೆಟ್ಟಿ ಪಿ.ಎ ಬರೆದಿರುವುದೇನು.?

ರಕ್ಷಿತ್ ಶೆಟ್ಟಿ ಪಿ.ಎ ಬರೆದಿರುವುದೇನು.?

ರಕ್ಷಿತ್-ರಶ್ಮಿಕಾ ಬ್ರೇಕಪ್ ವಿಚಾರವಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ನ ಸ್ಕ್ರೀನ್ ಶಾಟ್ ತೆಗೆದುಕೊಂಡು, ''ಮೀಡಿಯಾ ಮತ್ತು ಟ್ರೋಲ್ ಪೇಜ್ ಗಳು ಡ್ಯಾಶ್ ಮುಚ್ಕೊಂಡು ನಿಮ್ ಕೆಲಸ ನೀವ್ ನೀವ್ ಮಾಡಿ'' ಎಂದು ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ರಕ್ಷಿತ್ ಶೆಟ್ಟಿ ಪಿ.ಎ ಪ್ರವೀಣ್ ಬರೆದುಕೊಂಡಿದ್ದರು. ಇದರಿಂದ ಮಾಧ್ಯಮ ಮಿತ್ರರ ಕಣ್ಣು ಕೆಂಪಾಗಿದೆ.

ಮೀಡಿಯಾದವರ ಮೇಲೆ ಗೂಬೆ ಕೂರಿಸುವುದು ಸರಿಯೇ.?

ಮೀಡಿಯಾದವರ ಮೇಲೆ ಗೂಬೆ ಕೂರಿಸುವುದು ಸರಿಯೇ.?

''ಸೆಲೆಬ್ರಿಟಿಗಳ ಲೈಫ್ ಜರ್ನಿ... ಅವರ ಸಕ್ಸಸ್, ಫೇಲ್ಯೂರ್.. ಎಲ್ಲವನ್ನೂ ಮೀಡಿಯಾ ಫೋಕಸ್ ಮಾಡುತ್ತೆ. ಎಲ್ಲಾ ಸಮಯದಲ್ಲೂ ಸ್ಟಾರ್ ಗಳಿಗೆ ಮೀಡಿಯಾದವರು ಬೇಕು. ಅವರು ಮದುವೆ ಆದಾಗ, ಅದನ್ನ ತೋರಿಸೋಕೆ ಮೀಡಿಯಾ ಬೇಕು. ಅದು ಪರ್ಸನಲ್ ಅಂತ ಆಗ ಅವರಿಗೆ ಅನ್ಸಲ್ಲ. ಆದ್ರೆ, ಈ ತರಹ ವಿಚಾರಗಳಲ್ಲಿ ಮಾತ್ರ ಮೀಡಿಯಾದವರ ಮೇಲೆ ಗೂಬೆ ಕೂರಿಸುವುದು ಸರಿಯೇ.? ''ನಾವೇ ಕ್ಲಾರಿಫಿಕೇಷನ್ ಕೊಡ್ತೀವಿ'' ಅಂತ ಹೇಳುವುದು ಬೇರೆ. ಅದು ಬಿಟ್ಟು ಮೀಡಿಯಾ ಮಾಡುತ್ತಿರುವುದೇ ತಪ್ಪು ಅಂತ ಹೇಳುವುದು ಸರಿ ಅಲ್ಲ. ಸ್ಟಾರ್ ಗಳ ಜೊತೆ ಇರುವವರು ಈ ತರಹ (ಡ್ಯಾಶ್ ಮುಚ್ಕೊಂಡು) ಪದ ಬಳಕೆ ಮಾಡುವುದು ತಪ್ಪು ಅನ್ನೋದು ನನ್ನ ಅನಿಸಿಕೆ. ಸೆಲೆಬ್ರಿಟಿ ಲೈಫ್ ನಲ್ಲಿ ಹೀಗಾಗಿದೆ ಅಂತ ತೋರಿಸುವುದು ನಮ್ಮ ಜವಾಬ್ದಾರಿ. ಅವರು ಈ ಬಗ್ಗೆ ಪ್ರಶ್ನೆ ಮಾಡಬಹುದು. ಆದ್ರೆ, ಪ್ರಶ್ನೆ ಮಾಡುವ ರೀತಿ ಬಹಳ ಮುಖ್ಯ. ಟಿ.ಆರ್.ಪಿ ಗೋಸ್ಕರ ಹೀಗೆಲ್ಲ ಮಾಡ್ತಾರೆ ಅಂತ ಹೇಳುವುದು ಸರಿ ಅಲ್ಲ. ಎಂಗೇಜ್ಮೆಂಟ್ ಆದಾಗ ಅವರು ಎಲ್ಲಾ ಮಾಧ್ಯಮಗಳನ್ನೂ ಕರೆದಿದ್ದರು. ಆಗ ಅವರು ಪ್ರಚಾರ ಗಿಟ್ಟಿಸಿಕೊಳ್ಳಲಿಲ್ಲವೇ.?'' ಎಂದು ಪ್ರಶ್ನಿಸುತ್ತಾರೆ ಸೀನಿಯರ್ ಫಿಲ್ಮ್ ಜರ್ನಲಿಸ್ಟ್ ಅಶೋಕ್ ದಾವಣಗೆರೆ.

ತುಂಬಾ ಕೋಪ ತರಿಸಿದೆ

ತುಂಬಾ ಕೋಪ ತರಿಸಿದೆ

''ಸ್ಟಾರ್ ಗಿರಿ ಹಾಗೂ ಪ್ರಮೋಷನ್ ಗೆ ಬೇಕಾದಾಗೆಲ್ಲಾ ಅವರೇ ಫೋನ್ ಮಾಡ್ತಾರೆ. ಆದ್ರೆ, ಇಂತಹ ವಿವಾದ ಆದಾಗ ಫೋನ್ ಗೂ ಸಿಗಲ್ಲ, ಕೈಗೂ ಸಿಗಲ್ಲ. ಅವರಿಗೆ ಬೇಕಾದಾಗ ಮಾಧ್ಯಮಗಳು ಬೇಕು, ಬೇಡದೇ ಇದ್ದಾಗ ಬೇಡ. ಯಾವುದು ನಿಜ, ಯಾವುದು ಸುಳ್ಳು ಅಂತ ಅವರು ಹೇಳಿದರೆ ನಾವು ಅದನ್ನೇ ವರದಿ ಮಾಡುತ್ತೇವೆ. ಅದು ಬಿಟ್ಟು ಸುಮ್ಮನೆ ಇದ್ದು ಬಳಿಕ ನಮಗೆ ಡ್ಯಾಶ್ ಮುಚ್ಕೊಂಡು ಕೆಲಸ ಮಾಡಿ ಅಂತ ಓರ್ವ ಪಿ.ಎ ಹೇಳಿರೋದು ತುಂಬಾ ಕೋಪ ತರಿಸಿದೆ'' ಅಂತಾರೆ ಸಿನಿ ಪತ್ರಕರ್ತರೊಬ್ಬರು.

ಮೀಡಿಯಾಗೆ ಹಕ್ಕಿದೆ

ಮೀಡಿಯಾಗೆ ಹಕ್ಕಿದೆ

''ಸಿನಿಮಾ ನಟ-ನಟಿಯರಿಂದ ಸ್ಫೂರ್ತಿ ಪಡೆಯುವ ಜನರು ತುಂಬಾ ಇದ್ದಾರೆ. ಅವರನ್ನ ಪ್ರತಿಯೊಂದು ಹೆಜ್ಜೆಯನ್ನೂ ಫಾಲೋ ಮಾಡುತ್ತಾರೆ. ಸ್ಟಾರ್ ಗಳು ಮಾಡುವ ಒಳ್ಳೆಯದ್ದು, ಕೆಟ್ಟದ್ದನ್ನ ಜನರಿಗೆ ತಲುಪಿಸುವುದು ರಿಪೋರ್ಟರ್ ಆಗಿ ನಮ್ಮ ಕರ್ತವ್ಯ. ಅಷ್ಟು ಬಿಟ್ಟರೆ ಅವರ ಸಂಸಾರದಲ್ಲಿ ಏನಾಗುತ್ತೆ ಅನ್ನೋದು ನಮ್ಮ ಕುತೂಹಲ ಅಲ್ಲ. ಜನರಿಗೆ ಹಾಗೂ ಅಭಿಮಾನಿಗಳಿಗೆ ನಾವು ತಲುಪಿಸುತ್ತಿದ್ದೇವೆ ಅಷ್ಟೇ. ರಕ್ಷಿತ್ ಮದುವೆ ಆಗಲಿ, ಬಿಡಲಿ. ರಶ್ಮಿಕಾ ಸಿನಿಮಾ ಮಾಡಲಿ, ಬಿಡಲಿ... ಅದರಿಂದ ನಮಗಾಗುವ ಉಪಯೋಗ ಏನೂ ಇಲ್ಲ. ಹೀಗಾಗಿ, ಆ ತರಹದ ಪದ ಬಳಕೆ ತಪ್ಪು. ಬರೀ ಸಿನಿಮಾ ಪ್ರಮೋಷನ್, ತಾರೆಯರ ದಾನ ಧರ್ಮ ಸಹಾಯ ಮಾಡುವುದನ್ನು ತೋರಿಸಲು, ಸಿನಿಮಾ ಬಗ್ಗೆ ಹೊಗಳಿಸಿಕೊಳ್ಳಲು ಮಾತ್ರ ಅಲ್ಲ.. ಈ ತರಹ ವಿಚಾರ ಬಂದಾಗ ಜನರ ಮುಂದೆ ಇಡುವ ಹಕ್ಕು ಮೀಡಿಯಾಗೆ ಇದೆ'' ಅಂತ ಹೇಳ್ತಾರೆ ಸಿನಿಮಾ ರಿಪೋರ್ಟರ್ ಹರೀಶ್ ಸೀನಪ್ಪ.

ಕ್ಷಮೆ ಕೇಳಿದ ಪ್ರವೀಣ್

ಕ್ಷಮೆ ಕೇಳಿದ ಪ್ರವೀಣ್

ಮೀಡಿಯಾದವರಿಗೆ 'ಡ್ಯಾಶ್ ಮುಚ್ಕೊಂಡು' ಅಂತ ಪದ ಬಳಸಿರುವುದು ತಪ್ಪು ಎಂದು ಅರಿವಿಗೆ ಬಂದ್ಮೇಲೆ ರಕ್ಷಿತ್ ಶೆಟ್ಟಿ ಪಿ.ಎ ಪ್ರವೀಣ್ ಕ್ಷಮೆ ಕೇಳಿದ್ದಾರೆ. ಸದ್ಯ ಬ್ರೇಕಪ್ ವಿಚಾರವಾಗಿ ಸೋಷಿಯಲ್ ಮೀಡಿಯಾಗೆ ಮರಳಿ ರಕ್ಷಿತ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.

ಮಾಧ್ಯಮಗಳ ಸುದ್ದಿಯನ್ನ ನಂಬಬೇಡಿ ಎಂದ ರಕ್ಷಿತ್

ಮಾಧ್ಯಮಗಳ ಸುದ್ದಿಯನ್ನ ನಂಬಬೇಡಿ ಎಂದ ರಕ್ಷಿತ್

''ಮೀಡಿಯಾದಲ್ಲಿ ಬರುತ್ತಿರುವ ಸುದ್ದಿಗಳನ್ನು ನಂಬಬೇಡಿ. ಯಾರಿಗೂ ನನ್ನಿಂದ ಅಥವಾ ರಶ್ಮಿಕಾರಿಂದ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಅವರವರ ಅವಶ್ಯಕತೆಗೆ ತಕ್ಕಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ'' ಎಂದು ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

ಮೀಡಿಯಾದವರ ಫೋನ್ ಗೆ ರಕ್ಷಿತ್ ಸಿಗುತ್ತಿಲ್ಲ ಯಾಕೆ.?

ಮೀಡಿಯಾದವರ ಫೋನ್ ಗೆ ರಕ್ಷಿತ್ ಸಿಗುತ್ತಿಲ್ಲ ಯಾಕೆ.?

''ಮೀಡಿಯಾದಲ್ಲಿ ಬರುತ್ತಿರುವ ಸುದ್ದಿಗಳನ್ನು ನಂಬಬೇಡಿ. ಯಾರಿಗೂ ನನ್ನಿಂದ ಅಥವಾ ರಶ್ಮಿಕಾರಿಂದ ಖಚಿತವಾದ ಮಾಹಿತಿ ಸಿಕ್ಕಿಲ್ಲ'' ಅಂತ ಹೇಳುವ ರಕ್ಷಿತ್ ಶೆಟ್ಟಿ ಅದೇ ಮೀಡಿಯಾದವರು ಸುದ್ದಿಯನ್ನ ಖಚಿತ ಪಡಿಸಿಕೊಳ್ಳಲು ಕರೆ ಮಾಡಿದಾಗ ಫೋನ್ ಗೆ ಯಾಕೆ ಸಿಗಲಿಲ್ಲ.? ಅಂದು ಮೀಡಿಯಾದವರನ್ನ ದೂರ ಇಟ್ಟಿದ್ದು ಯಾಕೆ.? ಅಂದೇ ಮೀಡಿಯಾದವರ ಜೊತೆ ಮಾತನಾಡುವುದು ಬಿಟ್ಟು, ಈಗ ಮೀಡಿಯಾದಲ್ಲಿ ಬರುತ್ತಿರುವ ಸುದ್ದಿ ಬಗ್ಗೆ ರಕ್ಷಿತ್ ದೂಷಿಸುತ್ತಿರುವುದು ಎಷ್ಟು ಸರಿ.? ಅನ್ನೋದು ಸಿನಿ ಪತ್ರಕರ್ತರ ಪ್ರಶ್ನೆ.

More from Filmibeat

English summary
Film Journalists are annoyed with Rakshit Shetty PA Praveen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X