twitter
    For Quick Alerts
    ALLOW NOTIFICATIONS  
    For Daily Alerts

    25 ವರ್ಷಗಳ ನಂತರ ಎತ್ತಿನಗಾಡಿ ಓಡಿಸಿ ಸಂತಸಪಟ್ಟ ಗುರುದೇಶಪಾಂಡೆ

    |

    ಹಳ್ಳಿಯಿಂದ ನಗರಕ್ಕೆ ಬಂದಮೇಲೆ ಅದೇಷ್ಟೋ ಒಳ್ಳೆಯ ಅನುಭವಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಎತ್ತಿಗಾಡಿ, ಟಿವಿಎಸ್ ಬೈಕ್, ಸೈಕಲ್ ಸವಾರಿ ಹೀಗೆ ಎಲ್ಲವನ್ನು ಕಳೆದುಕೊಳ್ಳುವ ಜನರು ಬಸ್, ಕಾರು, ಆಟೋದಲ್ಲಿ ಓಡಾಡುತ್ತಾರೆ.

    ಮತ್ತೆ ಹಳ್ಳಿಯ ಜೀವನಕ್ಕೆ ಹಿಂತಿರುಗಿದ ಆ ಸಂತೋಷವೇ ಬೇರೆ. ಅದನ್ನು ಬರಿ ಮಾತನಲ್ಲಿ ಹೇಳಲು ಸಾಧ್ಯವಾಗಲ್ಲ. ಅದನ್ನು ಅನುಭವಿಸಬೇಕು. ಇದೀಗ, ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಗುರುದೇಶಪಾಂಡೆ ಸುಮಾರು 25 ವರ್ಷದ ನಂತರ ಎತ್ತಿನಗಾಡಿ ಸವಾರಿ ಮಾಡಿದ್ದಾರೆ.

    ರೈತನಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ನಿರ್ದೇಶಕ ಪವನ್ ಒಡೆಯರ್ರೈತನಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ನಿರ್ದೇಶಕ ಪವನ್ ಒಡೆಯರ್

    ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ. ''ಸಿಟಿಯಲ್ಲಿ ಟ್ರಾಫಿಕ್ ಪೊಲ್ಲ್ಯೂಷನ್ ಬೈಕ್ ಕಾರ್ ಗಳ ನಡುವೆ ನಮ್ಮ ಎತ್ತಿನಗಾಡಿ ಓಡಿಸುವ ಮಜಾನೇ ಬೇರೆ. 25 ವರ್ಷಗಳ ಹಿಂದೆ ನಾನು ಊರಿಂದ ಬೆಂಗಳೂರಿಗೆ ಬಂದ ನಂತರ ನಮ್ಮ ಊರು ಎತ್ತಿನಗಾಡಿ ಎತ್ತು ಕರು ಪ್ರತಿಯೊಂದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. 25 ವರ್ಷಗಳ ನಂತರ ಎತ್ತಿನ ಗಾಡಿ ಓಡಿಸಿದ ಅನುಭವವಂತೂ ಅದ್ಭುತ ಪದಗಳಲ್ಲಿ ವರ್ಣಿಸಲು ಆಗದು'' ಎಂದು ಪೋಸ್ಟ್ ಹಾಕಿದ್ದಾರೆ.

    Film Maker Guru Deshpande Ride Bullock Cart at His Native after 25 years

    ಇತ್ತೀಚಿಗಷ್ಟೆ ನಿರ್ದೇಶಕ ಪವನ್ ಒಡೆಯರ್ ತಮ್ಮ ತೋಟದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದರು. ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಹಳ್ಳಿ ಜೀವನ ಮಿಸ್ ಮಾಡಿಕೊಳ್ಳುವವ ಜನರಿಗೆ ಇದೆಲ್ಲ ಬಹಳ ಖುಷಿ ಕೊಡುತ್ತದೆ.

    Recommended Video

    DIRECTORS DIARY : Pavan Wadeyar ಜನ ಹೇಳಿದ್ಮೇಲೆ ಕೇಳಲೇ ಬೇಕು, ಅದಕ್ಕೆ ಈ ಸಿನಿಮಾ ಮಾಡ್ತಾ ಇದ್ದೀನಿ | Part 2

    ಅಂದ್ಹಾಗೆ, ರಾಜಾಹುಲಿ, ಪಡ್ಡೆಹುಲಿ ಅಂತಹ ಚಿತ್ರಗಳನ್ನಿ ನಿರ್ದೇಶಿಸಿದ್ದ ಗುರುದೇಶಪಾಂಡೆ ಕೊನೆಯದಾಗಿ ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್‌ಮ್ಯಾನ್' ಚಿತ್ರವನ್ನು ನಿರ್ಮಿಸಿದ್ದರು.

    English summary
    Kannada Director Guru Deshpande Ride Bullock Cart at His Native after 25 years.
    Tuesday, October 13, 2020, 9:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X