ಸಿನಿಮಾ PRO ಸುಧೀಂದ್ರ ವೆಂಕಟೇಶ್ ಹೆಸರಲ್ಲಿ ಹೊಸ ದಾಖಲೆ
ಸಾಮಾನ್ಯವಾಗಿ ಸಿನಿಮಾಗಳು, ಸಿನಿಮಾ ಸ್ಟಾರ್ಸ್, ನಿರ್ದೇಶಕರು ದಾಖಲೆ ನಿರ್ಮಿಸುತ್ತಾರೆ. ಇದೇ ಮೊದಲ ಸಲ ಸಿನಿಮಾ ಪಿ.ಆರ್.ಓ ಒಬ್ಬರು ಚಿತ್ರರಂಗದಲ್ಲಿ ವಿಶೇಷವಾದ ದಾಖಲೆಗೆ ಪಾತ್ರರಾಗಿದ್ದಾರೆ.
ಹೌದು, ಈ ವಾರ ಕನ್ನಡದಲ್ಲಿ ಒಟ್ಟು 9 ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂಬತ್ತು ಚಿತ್ರಗಳ ಪೈಕಿ 8 ಸಿನಿಮಾಗಳಿಗೆ ಸುಧೀಂದ್ರ ವೆಂಕಟೇಶ್ ಅವರು ಪಿ.ಆರ್.ಓ ಆಗಿ ಕೆಲಸ ಮಾಡಿದ್ದಾರೆ. ಹೀಗೆ, ಪಿ.ಆರ್.ಓ ಒಬ್ಬರು ಕೆಲಸ ಮಾಡಿದ ಏಂಟು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಸ್ಯಾಂಡಲ್ವುಡ್ ಇತಿಹಾಸದಲ್ಲಿ ಅಪರೂಪ ಎನಿಸಿಕೊಂಡಿದೆ.
ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ''ನಮ್ಮ ಸಂಸ್ಥೆ ಪಿ.ಆರ್.ಓ ಕೆಲಸ ಮಾಡಿರುವ ಏಂಟು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಪರೂಪ ಮತ್ತು ಖುಷಿಯಾಗ್ತಿದೆ''ಎಂದಿದ್ದಾರೆ.

ಮುಂದಿನ ನಿಲ್ದಾಣ, ದಮಯಂತಿ, ಬ್ರಹ್ಮಾಚಾರಿ, ರಣಹೇಡಿ, ಮಾರ್ಗರೇಟ್, ಕಿರು ಮಿನ್ಕಣಜ, ರಿವೀಲ್, ನಾನೇ ರಾಜ, ಮೂಕಜ್ಜಿಯ ಕನಸುಗಳು ಚಿತ್ರಗಳು ಈ ವಾರ ತೆರೆಕಾಣುತ್ತಿದೆ. ಇದರಲ್ಲಿ 'ನಾನೇ ರಾಜ' ಒಂದು ಚಿತ್ರಕ್ಕೆ ನಾಗೇಂದ್ರ ಅವರು ಪಿ.ಆರ್.ಓ ಆಗಿ ಕೆಲಸ ಮಾಡಿದ್ದಾರೆ. ಉಳಿದ ಎಲ್ಲ ಚಿತ್ರಗಳಿಗೂ ಸುಧೀಂದ್ರ ವೆಂಕಟೇಶ್ ಪಿ.ಆರ್.ಓ ಆಗಿದ್ದಾರೆ.
8 ತೆಲುಗು ಸಿನಿಮಾ, ಬೆಂಗಾಳಿ ಮತ್ತು ಹಿಂದಿಯ ತಲಾ 6 ಸಿನಿಮಾ, ಮಲಯಾಳಂ ಭಾಷೆಯ 4 ಸಿನಿಮಾ, ತಮಿಳು ಮತ್ತು ಇಂಗ್ಲೀಷ್ ತಲಾ 3 ಸಿನಿಮಾ, ಗುಜರಾತಿ, ಮರಾಠಿಯ ತಲಾ 2 ಸಿನಿಮಾ, ಪಂಜಾಬಿ ಭಾಷೆಯ ಒಂದು ಸಿನಿಮಾ ಸೇರಿದಂತೆ ಸುಮಾರು 42 ಚಿತ್ರಗಳು ಬೆಂಗಳೂರಿನಲ್ಲಿ ಈ ಶುಕ್ರವಾರ ರಿಲೀಸ್ ಆಗುತ್ತಿದೆಯಂತೆ.
ಬೆಂಗಳೂರಿನಲ್ಲಿ ಅಂದಾಜು 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ 100 ಮಲ್ಟಿಫ್ಲೆಕ್ಸ್ ಸ್ಕ್ರೀನ್ ಗಳಿವೆ.


Click it and Unblock the Notifications











