twitter
    For Quick Alerts
    ALLOW NOTIFICATIONS  
    For Daily Alerts

    ಥಿಯೇಟರ್ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾದ ನಿರ್ಮಾಪಕರು

    |

    Recommended Video

    Sandalwood producers bring in a major change in the industry | Sandalwood | Theatre | KFI

    ಕರ್ನಾಟಕ ಚಲನಚಿತ್ರರಂಗದಲ್ಲಿ ಹೊಸ ಪದ್ದತಿ ಜಾರಿಗೆ ತರಲು ಕನ್ನಡ ಸಿನಿಮಾ ನಿರ್ಮಾಪಕರು ಮುಂದಾಗಿದ್ದಾರೆ. ಥಿಯೇಟರ್ ಗಳ ಬಾಡಿಗೆ ಪದ್ದತಿ ರದ್ದು ಮಾಡಿ ಶೇಕಡಾವಾರು ನಿಯಮ ಅನ್ವಯಿಸಲು ನಿರ್ಧರಿಸಿದ್ದಾರೆ.

    ಈ ಸಂಬಂಧ ಇಂದು ನಿರ್ಮಾಪಕ ಸಂಘದ ಕಚೇರಿಯಲ್ಲಿ ವಿತರಕರು, ಪ್ರದರ್ಶಕರು ಹಾಗೂ ನಿರ್ಮಾಪಕರು ಸಭೆ ಸೇರಿದ್ದರು. 'ಇನ್ನು ಮುಂದೆ ಚಿತ್ರಮಂದಿರದಲ್ಲಿ ಬಾಡಿಗೆ ಪದ್ದತಿ ಮುಂದುವರಿಸಬಾರದು, ನಿರ್ಮಾಪಕರಿಗೆ ಒಳ್ಳೆಯದು ಆಗುವ ದೃಷ್ಟಿಯಲ್ಲಿ ಶೇಕಡಾವಾರು ವ್ಯವಸ್ಥೆ ಜಾರಿ ಮಾಡುತ್ತಿದ್ದೇವೆ' ಎಂದು ನಿರ್ಮಾಪಕ ಸಂಘದ ಅಧ್ಯಕ್ಷ ಡಿಕೆ ರಾಮಕೃಷ್ಣ ತಿಳಿಸಿದ್ದಾರೆ.

    ಇನ್ಮುಂದೆ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮಿನಿ ಥಿಯೇಟರ್ ಗಳು.!ಇನ್ಮುಂದೆ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮಿನಿ ಥಿಯೇಟರ್ ಗಳು.!

    'ಈ ನಿಯಮ ಏಪ್ರಿಲ್ 2 ರಿಂದ ಜಾರಿಯಾಗಲಿದೆ. ಚಿತ್ರಮಂದಿರಗಳ ದುಬಾರಿ ಬಾಡಿಗೆ ದರ ಭರಿಸಲಾಗದೆ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಹೊಸಬರು ಸಿನಿಮಾ ಮಾಡಿದ್ಮೇಲೆ ರಿಲೀಸ್ ಮಾಡುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಹೀಗಾಗಿ, ಶೇಕಡಾವಾರು ವ್ಯವಸ್ಥೆಯಿಂದ ನಿರ್ಮಾಪಕರು ಹಾಗೂ ಕನ್ನಡ ಚಿತ್ರರಂಗ ಅಭಿವೃದ್ದಿಯಾಗಲಿದೆ' ಎಂದು ತಿಳಿಸಿದ್ದಾರೆ.

     Film Producers Decided To Applied New Rule In Theater System

    ಸದ್ಯ ಮಲ್ಟಿಪ್ಲೆಕ್ಸ್ ಗಳಲ್ಲಿ ಶೇಕಡಾವಾರು ಪದ್ದತಿ ಜಾರಿಯಲ್ಲಿದೆ. ಈಗ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಈ ವ್ಯವಸ್ಥೆ ಬರಲಿದೆ. ಹೊಸ ಪದ್ದತಿ ಅನ್ವಯ ಚಿತ್ರಮಂದಿರಗಳನ್ನು 'ಎ', 'ಬಿ', 'ಸಿ' ಸೆಂಟರ್ ಎಂದು ವಿಂಗಡಿಸಲಾಗುವುದು. ಈ ನಿಯಮ ಎಲ್ಲ ಸ್ಟಾರ್ ನಟರ ಚಿತ್ರಗಳಿಗೂ ಅನ್ವಯವಾಗಲಿದೆ.

    ಪ್ರಸ್ತುತ ಕೇರಳ ಮತ್ತು ತಮಿಳುನಾಡಿನಲ್ಲಿ ಶೇಕಡಾವಾರು ಪದ್ಧತಿ ಜಾರಿಯಲ್ಲಿದೆ. ಅಲ್ಲಿ ಮಲ್ಟಿಪ್ಲೆಕ್ಸ್ ಮತ್ತು ನಿರ್ಮಾಪಕರ ನಡುವೆ 60:54 ಹಾಗೂ ಸ್ಟಾರ್ ನಟರ ಚಿತ್ರಗಳಿಗೆ 60:40 ಅನುಪಾತದಲ್ಲಿ ಲಾಭ ಹಂಚಿಕೆಯಾಗುತ್ತಿದೆ.

    ಆದರೆ, ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ ಮಾತ್ರ ಶೇಕಡಾವಾರು ಪದ್ದತಿ ಇದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಬಾಡಿಗೆ ವ್ಯವಸ್ಥೆ ಮಾತ್ರ ಇದೆ.

    English summary
    Kannada film producers decided to applied new rules in film theater system.
    Monday, February 3, 2020, 19:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X