twitter
    For Quick Alerts
    ALLOW NOTIFICATIONS  
    For Daily Alerts

    'ಪುನೀತ್ ನಮನ ನೋಡುವ ಭಾಗ್ಯವಿಲ್ಲ' ಚಿತ್ರರಂಗದ ಅಳಲು

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಹಿನ್ನೆಲೆ ಇಡೀ ಕನ್ನಡ ಚಿತ್ರರಂಗದ ವತಿಯಿಂದ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಪುನೀತ್ ನಮನ ಕಾರ್ಯಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ವೇದಿಕೆ ಮೇಲೆ ಕನ್ನಡ ಚಿತ್ರರಂಗದ ಸದಸ್ಯರು ಸೇರಬೇಕಿತ್ತು. ಒಟ್ಟಿಗೆ ಕೂತು ಪುನೀತ್ ಹೆಜ್ಜೆಗಳನ್ನು ಸ್ಮರಿಸಬೇಕಿತ್ತು. ಆದರೆ, ಕನ್ನಡ ಚಿತ್ರರಂಗದ ಅರ್ಧದಷ್ಟು ಸದಸ್ಯರು ಅಪ್ಪು ನಮನ ಕಾರ್ಯಕ್ರಮಕ್ಕೆ ಬರುತ್ತಿಲ್ಲ

    ಪುನೀತ್ ನಮನ ಕಾರ್ಯಕ್ರಮದ ಸಿದ್ಧತೆಗಳೆನೋ ಜೋರಾಗೇ ಇದೆ. ಈ ನಡುವೆ ವಾಣಿಜ್ಯ ಮಂಡಳಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಆಯೋಜಕರ ಮೇಲೆ ಚಿತ್ರರಂಗ ಮುನಿಸಿಕೊಂಡಿದೆ. ಕಲಾವಿದರು, ಕಾರ್ಮಿಕರು, ತಂತ್ರಜ್ಞರು ಎಲ್ಲಾ ಸೇರಿ ಒಂದು ಚಿತ್ರರಂಗ. ಆದರೆ, ಅಪ್ಪುಗೆ ನಮನ ಸಲ್ಲಿಸಲು ನಮ್ಮಿಂದ ಆಗುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ವಾಣಿಜ್ಯ ಮಂಡಳಿ ನೀಡಿರುವ ಪಾಸ್.

    ಫಿಲ್ಮ್ ಚೇಂಬರ್ ಸದಸ್ಯರಿಗೇ ಪಾಸ್ ಸಿಕ್ಕಿಲ್ಲ

    ಫಿಲ್ಮ್ ಚೇಂಬರ್ ಸದಸ್ಯರಿಗೇ ಪಾಸ್ ಸಿಕ್ಕಿಲ್ಲ

    ಪುನೀತ್ ನಮನ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದೆ. ಇಂದು ಮೂರು ಗಂಟೆಯಿಂದ ಆರಂಭ ಆಗಲಿರುವ ಕಾರ್ಯಕ್ರಮಕ್ಕೆ ಬಹುತೇಕ ಎಲ್ಲಾ ತಯಾರಿಗಳು ಮುಗಿದಿವೆ. ವೇದಿಕೆನೂ ರೆಡಿಯಾಗಿದೆ. ಇನ್ನು ಕಾರ್ಯಕ್ರಮ ಆರಂಭ ಆಗಬೇಕಷ್ಟೇ. ಆದರೆ, ಇತ್ತ ಚಿತ್ರರಂಗದ ಸದಸ್ಯರು ಪುನೀತ್ ನಮನ ಆಯೋಜಕರ ವಿರುದ್ಧ ಬೇಸರ ಪಟ್ಟುಕೊಂಡಿದ್ದಾರೆ. ಏಕೆಂದರೆ, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಸದಸ್ಯರಿಗೆ ಪುನೀತ್ ನಮನ ಕಾರ್ಯಕ್ರಮಕ್ಕೆ ಪ್ರವೇಶ ಸಿಕ್ಕಿಲ್ಲ.

    300 ಮಂದಿಗೂ ಪಾಸ್ ಕೊಟ್ಟಿಲ್ಲ

    300 ಮಂದಿಗೂ ಪಾಸ್ ಕೊಟ್ಟಿಲ್ಲ

    ಫಿಲ್ಮ್ ಚೇಂಬರ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಸದಸ್ಯರಿಗೆ ಅವಕಾಶವಿಲ್ಲ. ಯಾಕಂದ್ರೆ, ಫಿಲ್ಮ್ ಚೇಂಬರ್‌ನ 300 ಸದಸ್ಯರಿಗೂ ಪಾಸ್ ಕೊಟ್ಟಿಲ್ಲ. " ವಾಣಿಜ್ಯ ಮಂಡಳಿಯ ಸದಸ್ಯರೆಲ್ಲಾ ಬೇಸರ ಗೊಂಡಿದ್ದಾರೆ. ಯಾರಿಗೆ ಪಾಸ್ ಹಂಚಿಕೆ ಮಾಡಿದ್ದಾರೋ ಗೊತ್ತಿಲ್ಲ. ವಾಣಿಜ್ಯ ಮಂಡಳಿ ಸದಸ್ಯರಾಗಿರುವ ಕೆಲವು ನಿರ್ಮಾಪಕರಿಗೆ ಪಾಸ್ ಸಿಕ್ಕಿಲ್ಲ. ಹೀಗಾಗಿ ಪಾಸ್ ಸಿಗದೆ ಇರುವ ಸದಸ್ಯರೆಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಬಂದ ಪಾಸ್ ಅನ್ನೂ ನಾನು ಹಿಂತಿರುಗಿಸಿದ್ದೇನೆ." ಎಂದು ಬಾಮಾ ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ಫಿಲ್ಮ್ ಚೇಂಬರ್‌ನಲ್ಲಿ 2800 ಸದಸ್ಯರಿದ್ದಾರೆ

    ಫಿಲ್ಮ್ ಚೇಂಬರ್‌ನಲ್ಲಿ 2800 ಸದಸ್ಯರಿದ್ದಾರೆ

    "ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುಮಾರು 2800 ಮಂದಿ ಸದಸ್ಯರು ಇರಬಹುದು. ಇವರಲ್ಲಿ ಶೇ. 50ರಷ್ಟು ಮಂದಿಗೂ ಪಾಸ್ ಸಿಕ್ಕಿಲ್ಲ. ಇವರು ಯಾರಿಗೆ ಪಾಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಖ್ಯಾತ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರಿಗೆ ಪಾಸ್ ಹೋಗಿಲ್ಲ. ಎಲ್ಲರಿಗೂ ಅಪ್ಪು ಅವರಿಗೆ ನಮನ ಸಲ್ಲಿಸಬೇಕು. ಈ ಕಾರ್ಯಕ್ರಮ ನೋಡಬೇಕು ಅನ್ನುವ ಹಂಬಲವಿತ್ತು. ಆದರೆ, ಈಗ ಅದು ಸಾಧ್ಯವಿಲ್ಲ. ಅದ್ಯಾಕೆ 1500 ಪಾಸ್ ಮಾಡಿಸಿದ್ರೋ ಗೊತ್ತಿಲ್ಲ. ಇಡೀ ಚಿತ್ರರಂಗಕ್ಕೆ ರಜೆ ಕೊಟ್ಟು ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ ಅಂದ್ರೆ ಏನು?" ಅಂತ ನಿರ್ಮಾಪಕ ಬಾ ಮಾ ಹರೀಶ್ ಪ್ರಶ್ನಿಸಿದ್ದಾರೆ.

    ಫಿಲ್ಮ್ ಚೇಂಬರ್‌ನಲ್ಲಿ ದೀಪ ಬೆಳಗಿ ನಮನ

    ಫಿಲ್ಮ್ ಚೇಂಬರ್‌ನಲ್ಲಿ ದೀಪ ಬೆಳಗಿ ನಮನ

    "ನಾವು ಪಾಸ್ ವಂಚಿತರು ಯಾರಿದ್ದೇವೋ, ನಾವೆಲ್ಲರೂ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ(ನವೆಂಬರ್ 18) ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲರೂ ಸೇರಿ ವಾಣಿಜ್ಯ ಮಂಡಳಿಯಲ್ಲಿ ಪುನೀತ್ ರಾಜ್‌ಕುಮಾರ್ ಫೋಟೊಗೆ ದೀಪ ಬೆಳಗಿ ನಮನ ಸಲ್ಲಿಸುತ್ತೇವೆ. ನಿಜಕ್ಕೂ ಅದೆಷ್ಟೋ ಮಂದಿಗೆ ಪುನೀತ್ ಅಗಲಿಕೆ ನೋವಿನಲ್ಲೇ ಇದ್ದಾರೆ. ಅಂಥವರಿಗೆ ನಮನ ಸಲ್ಲಿಸಲು ಅವಕಾಶ ಸಿಗದೆ ಇರುವುದು ಬೇಸರ ತರಿಸಿದೆ" ಅಂತಿದ್ದಾರೆ ಬಾ ಮಾ ಹರೀಶ್.

    ಇಂದು( ನವೆಂಬರ್ 16) ಮೂರು ಗಂಟೆಯಿಂದ ಪುನೀತ್ ನಮನ ಕಾರ್ಯಕ್ರಮ ಜರುಗಲಿದೆ. ಸರಿಯಾದ ಸಮಯಕ್ಕೆ ಶುರುವಾದರೆ, ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಮುಗಿಯಲಿದೆ. ಅಣ್ಣಾವ್ರ ಕುಟುಂಬ, ಚಿತ್ರರಂಗದ 140ಕ್ಕೂ ಹೆಚ್ಚು ತಾರೆಯರು ಹಾಗೂ ರಾಜಕೀಯ ಮುಖಂಡರು ಈ ವೇದಿಕೆ ಮೇಲೆ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಿದ್ದಾರೆ.

    English summary
    Kannada film producer upset with KFCC for not giving passes to industry members. Because known directors, producers and technicians have not invited for Puneeth Namana program.
    Tuesday, November 16, 2021, 14:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X