For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ವರದಿಗಾರರೇ 'ಸಿನಿಮಾ' ಹೀರೋಗಳಾಗವ್ರೆ.!

  By Harshitha
  |

  ಸುವರ್ಣ ನ್ಯೂಸ್ 24/7, ಸಮಯ ಸುದ್ದಿ ವಾಹಿನಿ ಮತ್ತು ಪಾಲಿಮರ್ ಚಾನೆಲ್ ನೋಡಿರುವವರಿಗೆ ಈ ಪ್ರತಿಭೆಗಳ ಮುಖ ಪರಿಚಯ ಇದ್ದೇ ಇರುತ್ತೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಲಿ, ಏನೇ ಗದ್ದಲ-ಗಲಾಟೆ ವಿವಾದಗಳಾಗಲಿ, ಎಲ್ಲದಕ್ಕೂ ಬ್ರೇಕಿಂಗ್ ನ್ಯೂಸ್ ಕೊಟ್ಟು ಲೈವ್ ನಲ್ಲಿ ನಿಲ್ಲುತ್ತಿದ್ದ ರಿಪೋರ್ಟರ್ಸ್ ಇದೀಗ ಗಾಂಧಿನಗರಕ್ಕೆ ಬಲಗಾಲಿಟ್ಟು ಭರವಸೆಯ ಹೀರೋಗಳಾಗುವುಕ್ಕೆ ಹೊರಟಿದ್ದಾರೆ.

  ಸುವರ್ಣ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿದ್ದ ಸಂದೀಪ್ ಮತ್ತು ಪಾಲಿಮರ್ ಚಾನೆಲ್ ನ ಸಿನಿಮಾ ವಿಭಾಗದಲ್ಲಿರುವ ಆದರ್ಶ್, ಸಣ್ಣ ಪರದೆ ಇಂದ ಬೆಳ್ಳಿಪರದೆ ಮೇಲೆ ಮಿಂಚುವುದಕ್ಕೆ ರೆಡಿಯಾಗುತ್ತಿದ್ದಾರೆ. ಹಾಗೆ, ಇಬ್ಬರು ರಿಪೋರ್ಟರ್ಸ್ ಒಂದಾಗುತ್ತಿರುವುದು 'ಆಶಿಕಿ-3' ಸಿನಿಮಾದಲ್ಲಿ.

  ಟೈಟಲ್ ಕೇಳಿದ ತಕ್ಷಣ ನೀವು ಬಾಲಿವುಡ್ ಕಡೆ ಮುಖ ಮಾಡಬಹುದು. ಆದ್ರೆ, ಇದು ಅಪ್ಪಟ ಕನ್ನಡ ಚಿತ್ರ. 'ಆಶಿಕಿ-3' ಅಂದ ಮಾತ್ರಕ್ಕೆ ಇದು 'ಆಶಿಕಿ-2' ಮುಂದುವರಿದ ಭಾಗ ಅಲ್ಲ. ಅದರ ರೀಮೇಕ್ ಕೂಡ ಅಲ್ಲ. ಹಿಂದಿ ಚಿತ್ರಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಮೂವರು ಪ್ರೇಮಿಗಳ ಕಥೆಯಾಗಿರುವ ಕಾರಣ 'ಆಶಿಕಿ-3' ಅಂತ ಹೆಸರಿಟ್ಟಿದ್ದಾರೆ ಅಷ್ಟೆ.

  ಪ್ರೀತಿ ಪ್ರೇಮ ಅಂತ ಟೈಟಲ್ ಇಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದು ಹೋಗಿವೆ. ಹತ್ತರಲ್ಲಿ ಹನ್ನೊಂದರಂತೆ ಆಗಬಾರದು ಅನ್ನುವ ಕಾರಣಕ್ಕೆ ಕೊಂಚ ಡಿಫರೆಂಟ್ ಆಗಿರಲಿ ಅಂತ 'ಆಶಿಕಿ-3' ಟೈಟಲ್ ಸೆಲೆಕ್ಟ್ ಮಾಡಿದ್ದಾರಂತೆ ನಿರ್ದೇಶಕಿ ಜೆ.ಚಂದ್ರಕಲಾ.

  ಈ ಹಿಂದೆ 'ಕ್ವಾಟ್ಲೆ' ಅಂತ ಸಿನಿಮಾ ನಿರ್ದೇಶಿಸಿದ್ದ ಚಂದ್ರಕಲಾ, ಇದೀಗ 'ಆಶಿಕಿ-3' ಮೂಲಕ ಒಂದು ಫ್ರೆಶ್ ರೋಮ್ಯಾಂಟಿಕ್ ಲವ್ ಸ್ಟೋರಿಯನ್ನ ತೆರೆಮೇಲೆ ತರುವುದಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರು ಟು ಮನಾಲಿ ಜರ್ನಿಯಲ್ಲಿ ನಡೆಯುವ ಮ್ಯೂಸಿಕಲ್ ಲವ್ ಸ್ಟೋರಿ 'ಆಶಿಕಿ-3'.

  ಸಂದೀಪ್, ಆದರ್ಶ್ ಜೊತೆ 'ಸಿಂಹಾದ್ರಿ' ಖ್ಯಾತಿಯ ಐಶ್ವರ್ಯ ಇದ್ದಾರೆ. ಗುರುಪ್ರಸಾದ್, ಅನಂತ್ ನಾಗ್, ತಾರಾ, ಪವಿತ್ರ ಲೋಕೇಶ್ ಸೇರಿದಂತೆ ದೊಡ್ಡ ತಾರಾದಂಡು ಚಿತ್ರದಲ್ಲಿದೆ. ಇವರೆಲ್ಲರ ಮಧ್ಯೆ ವರದಿಗಾರರು ಹೀರೋಗಳಾಗಿ ಸೆಲೆಕ್ಟ್ ಆಗಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

  ಕಳೆದ ವರ್ಷದ ಪ್ರೇಮಿಗಳ ದಿನದಂದು ನಿರ್ದೇಶಕಿ ಚಂದ್ರಕಲಾ ತಮ್ಮ 'ಕ್ವಾಟ್ಲೆ' ಚಿತ್ರವನ್ನ ರಿಲೀಸ್ ಮಾಡಿದ್ದರು. ಅದರ ಪ್ರಯುಕ್ತ ಅಂದು ಸಮಯ ವಾಹಿನಿಯ ಸಿನಿಮಾ ವಿಭಾಗದಲ್ಲಿದ್ದ ಸಂದೀಪ್, 'ಕ್ವಾಟ್ಲೆ' ವಾಲೈಂಟೈನ್ಸ್ ಡೇ ಸ್ಪೆಷಲ್ ಪ್ರೋಗ್ರಾಂ ಗೆ ಆಂಕರ್ ಆಗಿದ್ದರು. ಸಂದೀಪ್ ಮಾತನಾಡುವ ಧಾಟಿ, ಮತ್ತವರ ಸ್ಟೈಲ್ ನೋಡಿ, ''ನೀವ್ಯಾಕೆ ಸಿನಿಮಾ ಮಾಡಬಾರದು'' ಅಂತ ಚಂದ್ರಕಲಾ ಕೇಳಿದ್ದರಂತೆ. ['ಕ್ವಾಟ್ಲೆ' ಪಕ್ಕಾ 420 ನನ್ ಮಗ ಬಿಡುಗಡೆಗೆ ಸಿದ್ಧ]

  ಅದಕ್ಕೆ ''ಚಾನ್ಸ್ ಸಿಕ್ಕಿದ್ರೆ ನೋಡೋಣ'' ಅಂತ ಹೇಳಿದ್ದ ಸಂದೀಪ್ ಗೆ ಒಂದೇ ತಿಂಗಳಲ್ಲಿ ಅದೇ ನಿರ್ದೇಶಕಿ ಚಂದ್ರಕಲಾ ಅವರಿಂದ ಬ್ರೇಕಿಂಗ್ ನ್ಯೂಸ್ ಬಂದಿದೆ. ತಮ್ಮ ಮುಂದಿನ ಚಿತ್ರಕ್ಕೆ ''ನೀವೇ ಹೀರೋ'' ಅಂದಾಗ ಸಂದೀಪ್ ಗೆ ಬ್ರೇಕಿಂಗ್ ಅನ್ನೋದಕ್ಕಿಂತ ಹೆಚ್ಚಾಗಿ ಶಾಕ್ ಆಗಿದೆ. ಅದರ ಜೊತೆಗೆ ಪಾಲಿಮರ್ ಚಾನೆಲ್ ನ ಆದರ್ಶ್ ಕೂಡ ಹೀರೋ ಅಂದಿದ್ದಕ್ಕೆ ಸಂದೀಪ್ ಹಿಂದು ಮುಂದು ನೋಡದೆ ಒಪ್ಪಿಕೊಂಡರಂತೆ.

  ಸಂದೀಪ್ ಮತ್ತು ಆದರ್ಶ್ ಮೊದಲಿನಿಂದಲೂ ಗಳಸ್ಯ-ಕಂಠಸ್ಯ. ಇಬ್ಬರಿಗೂ ಹೀರೋಗಳಾಗಬೇಕು ಅನ್ನುವ ಕನಸು ಇತ್ತು. ಅದನ್ನ 'ಆಶಿಕಿ-3' ಚಿತ್ರದ ಮೂಲಕ ಈಡೇರಿಸಿದ್ದಾರೆ ನಿರ್ದೇಶಕಿ ಚಂದ್ರಕಲಾ.

  ಇದೇ ಖುಷಿಯಲ್ಲಿ ಇಬ್ಬರೂ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೇಳಿ ಕೇಳಿ ಲವ್ ಸ್ಟೋರಿ ಆಗಿರುವುದರಿಂದ ಪ್ರೇಮಿಗಳ ದಿನದಂದು 'ಆಶಿಕಿ-3' ಚಿತ್ರದ ಸಾಂಗ್ ರೆಕಾರ್ಡಿಂಗ್ ಗೆ ಚಾಲನೆ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರ ಸೆಟ್ಟೇರಲಿದೆ. (ಫಿಲ್ಮಿಬೀಟ್ ಕನ್ನಡ)

  English summary
  Film Reporters of Kannada News Channels, Sandeep and Adarsh are roped into play lead role for Kannada Movie Ashiqui-3, directed by J.Chandrakala of 'Kwatle' fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X