For Quick Alerts
  ALLOW NOTIFICATIONS  
  For Daily Alerts

  ಎಂಎಸ್ ಧೋನಿ ನಿವೃತ್ತಿ: ಶ್ರೇಷ್ಠ ಆಟಗಾರನಿಗೆ ತಾರೆಯರು ಸಲಾಂ

  |

  ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ಆಟಗಾರ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಸುಮಾರು 16 ವರ್ಷದ ಸುದೀರ್ಘ ಜರ್ನಿಯನ್ನು ಇಂದು ಅಂತ್ಯಗೊಳಿಸಿದ್ದಾರೆ.

  ಟಿ-ಟ್ವೆಂಟಿ ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ ಟ್ರೋಫಿ, ಟೆಸ್ಟ Rankingನಲ್ಲಿ ನಂಬರ್ ವನ್ ಸ್ಥಾನ ಭಾರತದ ಪಾಲಿಗೆ ಹತ್ತು ಹಲವು ಹಿರಿಮೆ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾವಿಕ ಅಧಿಕೃತವಾಗಿ ಆಟ ಮುಗಿಸಿದ್ದಾರೆ.

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ನಿವೃತ್ತಿ!

  ಧೋನಿ ನಿವೃತ್ತಿ ಸುದ್ದಿ ಕೇಳುತ್ತಿದ್ದಂತೆ ಚಿತ್ರರಂಗ ಸಹ ಅಚ್ಚರಿಗೊಳಗಾಗಿದೆ. ಸಿನಿ ಪ್ರಪಂಚದ ಜೊತೆ ಉತ್ತಮ ನಂಟು ಹೊಂದಿದ್ದ ಧೋನಿ ಅನೇಕರಿಗೆ ಸ್ಫೂರ್ತಿಯಾಗಿದ್ದರು. ಇಂತಹ ದಿಗ್ಗಜನಿಗೆ ಸ್ಟಾರ್ಸ್ ಸಲಾಂ ಹೊಡೆದಿದ್ದಾರೆ. ಮುಂದೆ ಓದಿ....

  ನೀವು ನನ್ನ ರಾಕ್‌ಸ್ಟಾರ್

  ನೀವು ನನ್ನ ರಾಕ್‌ಸ್ಟಾರ್

  ''ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳುತ್ತವೆ...ಆದರೆ, ಇದನ್ನು ನಾನು ಹೀಗೆ ನಿರೀಕ್ಷೆ ಮಾಡಿರಲಿಲ್ಲ. ಥ್ಯಾಂಕ್ ಯೂ ಧೋನಿ.. ನೀವು ನನ್ನ ಅತ್ಯಂತ ಸ್ಪೂರ್ತಿದಾಯಕ ರಾಕ್‌ಸ್ಟಾರ್ ಆಗಿ ಉಳಿಯುತ್ತೀರಿ .. ಹೊಸ ಪ್ರಯಾಣದಲ್ಲಿ ನಿಮಗೆ ಒಳ್ಳೆಯದಾಗಲಿ'' - ಪ್ರಕಾಶ್ ರಾಜ್

  ನೀವು ನಿಜವಾದ ಸ್ಫೂರ್ತಿ

  ನೀವು ನಿಜವಾದ ಸ್ಫೂರ್ತಿ

  ''ನೀವು ನಿಜವಾದ ಸ್ಫೂರ್ತಿ ಮತ್ತು ಉತ್ತಮ ನಾಯಕ #ಧೋನಿ. ನಮ್ಮೆಲ್ಲರನ್ನೂ ಹೆಮ್ಮೆಪಡಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.'' ತರುಣ್ ಸುಧೀರ್

  'ಭಾರತೀಯರ ಹೆಮ್ಮೆಗೆ ಕಾರಣವಾಗಿದ್ದಕ್ಕೆ ಥ್ಯಾಂಕ್ ಯೂ ಧೋನಿ': ಪ್ರಣಿತಾ ಟ್ವೀಟ್'ಭಾರತೀಯರ ಹೆಮ್ಮೆಗೆ ಕಾರಣವಾಗಿದ್ದಕ್ಕೆ ಥ್ಯಾಂಕ್ ಯೂ ಧೋನಿ': ಪ್ರಣಿತಾ ಟ್ವೀಟ್

  ಅದ್ಭುತ ನೆನಪುಗಳಿಗೆ ಧನ್ಯವಾದ

  ಅದ್ಭುತ ನೆನಪುಗಳಿಗೆ ಧನ್ಯವಾದ

  ''ಎಲ್ಲಾ ಅದ್ಭುತ ನೆನಪುಗಳಿಗೆ ಧನ್ಯವಾದಗಳು. ಎಲ್ಲರಿಗೂ ನಿಜವಾದ ಸ್ಫೂರ್ತಿ ಮತ್ತು ಉತ್ತಮ ಆಟಗಾರ. ಇಡೀ ಭಾರತವು ನಿಮ್ಮನ್ನು ಬ್ಲೂ ಜೆರ್ಸಿಯಲ್ಲಿ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತದೆ'' - ನಯನತಾರ

  ಧೋನಿ, ರೈನಾ ವಿದಾಯ

  ಧೋನಿ, ರೈನಾ ವಿದಾಯ

  ಎಂಎಸ್ ಧೋನಿ ನಿವೃತ್ತಿ ಜೊತೆಗೆ ಮತ್ತೊಬ್ಬ ಕ್ರಿಕೆಟಿಗ ಸುರೇಶ್ ರೈನಾ ಸಹ ನಿವೃತ್ತಿ ಘೋಷಿಸಿದ್ದಾರೆ. ಈ ಇಬ್ಬರು ಆಟಗಾರರಿಗೂ ಮಲಯಾಳಂ ನಟ ಮೋಹನ್ ಲಾಲ್ ವಿದಾಯ ತಿಳಿಸಿದ್ದಾರೆ.

  ನಿಜವಾದ ಚಾಂಪಿಯನ್

  ನಿಜವಾದ ಚಾಂಪಿಯನ್

  ''ಧೋನಿ ಅಭಿಮಾನಿಗಳು ಎಂದೂ ಬಯಸದ ದಿನ ಕೊನೆಗೂ ಬಂದು ಬಿಟ್ಟಿದೆ. ನಿಜವಾದ ಚಾಂಪಿಯನ್'' - ಪವನ್ ಒಡೆಯರ್

  ಧನ್ಯವಾದ ಧೋನಿ

  ಧನ್ಯವಾದ ಧೋನಿ

  'ಸುಮಾರು 16 ವರ್ಷಗಳ ಕಾಲ ಭಾರತೀಯರ ಹೆಮ್ಮೆಗೆ ಹಾಗೂ ಸಂತೋಷಕ್ಕೆ ಕಾರಣರಾಗಿದ್ದಕ್ಕೆ ಧನ್ಯವಾದ' ಎಂದು ಪ್ರಣಿತಾ ಸುಭಾಷ್ ಟ್ವೀಟ್ ಮಾಡಿದ್ದಾರೆ.

  English summary
  MS Dhoni's retirement to international cricket: Film star Salute to Cool captain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X