ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತಕ್ಕೆ ಶುಭಕೋರಿದ ಸಿನಿ ತಾರೆಯರು
ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ ಪಾಕಿಸ್ತಾನದ ವಿರುದ್ಧದ ಪಂದ್ಯ ಮಾತ್ರ ಸೋಲಬಾರದು ಎಂಬ ಧ್ಯೇಯವಾಕ್ಯದೊಂದಿಗೆ ಅಖಾಡಕ್ಕೆ ಇಳಿದಿದ್ದ ವಿರಾಟ್ ಕೊಹ್ಲಿ ಪಡೆ, ಪಾಕಿಸ್ತಾನವನ್ನ ಧೂಳಿಪಟ ಮಾಡಿದೆ. ಟಾಮ್ ಮತ್ತು ಜೆರ್ರಿ ಕಥೆಯಂತೆ ಇಂಗ್ಲೆಂಡ್ ಮೈದಾನದಲ್ಲಿ ಪಾಕಿಗಳನ್ನ ಅಟ್ಟಾಡಿಸಿ ಹೊಡೆದಿದೆ ಭಾರತದ ಹುಲಿಗಳು.
ಈ ಪಂದ್ಯದ ಗೆಲುವು ವಿಶ್ವಕಪ್ ಗೆದ್ದಷ್ಟೇ ಖುಷಿ ಕೊಟ್ಟಿದೆ ಅಂದ್ರೆ ತಪ್ಪಲ್ಲ. ಭಾರತದ ಸಾಧಿಸಿದ ಈ ಪ್ರತಿಷ್ಠೆಯ ಗೆಲುವಿಗೆ ಇಡೀ ದೇಶವೇ ಭೇಷ್ ಎನ್ನುತ್ತಿದೆ. ಕ್ರಿಕೆಟ್ ಬಗ್ಗೆ ಆಸಕ್ತಿ ಇಲ್ಲದ ವ್ಯಕ್ತಿ ಕೂಡ ಈ ಐತಿಹಾಸಿಕ ಜಯವನ್ನ ಸಂಭ್ರಮಿಸಿದ್ದಾರೆ.
ಭಾರತದೆದುರು ಪಾಕ್ ಸೋಲಲು ಅಸಲಿ ಕಾರಣವಿದು: ಪಾಕ್ ಅಭಿಮಾನಿಗಳು
ಅದರಲ್ಲೂ ಸಿನಿಮಾ ತಾರೆಯರು ಸಂಭ್ರಮ ಸ್ವಲ್ಪ ಜೋರಾಗಿದೆ. ಬದ್ಧ ವೈರಿಗಳ ಎದುರು ರಾಜಾರೋಷವಾಗಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಸ್ಪೆಷಲ್ ಥ್ಯಾಂಕ್ಸ್ ಹೇಳಿ ಶುಭ ಕೋರಿದ್ದಾರೆ. ಹಾಗಿದ್ರೆ, ಯಾವ ಸೆಲೆಬ್ರಿಟಿಗಳು ಹೇಗೆ ಸಂಭ್ರಮಿಸಿದರು? ಮುಂದೆ ಓದಿ....

ಶುಭಾಶಯ ಭಾರತ
ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಕನ್ನಡ ನಿರ್ದೇಶಕ ಸಿಂಪಲ್ ಸುನಿ, ಪಾಕ್ ವಿರುದ್ಧ ಭಾರತ ಸಾಧಿಸಿದ ಜಯವನ್ನ ಕೂಲ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ. 'ಶುಭಾಯಶಗಳಯ ಭಾರತ ಎಂದು ಪೋಸ್ಟ್ ಮಾಡಿ 7-0 ಎಂದು ಹಾಕಿದ್ದಾರೆ. ಅಂದ್ರೆ, ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು ಅಜೇಯ ಗೆಲುವು ಸಾಧಿಸಿದ ಭಾರತ ಆಡಿರುವ ಏಳು ಪಂದ್ಯಗಳಲ್ಲಿ ಏಳನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್ ನಾಯಕ!

ಬಿಪಾಶ ಬಸು
ಬಾಲಿವುಡ್ ನಟಿ ಬಿಪಾಶ ಬಸು ತನ್ನ ಎರಡು ಕೈಗಳಿಗೆ ಭಾರತದ ತ್ರಿವರ್ಣ ಧ್ವಜವನ್ನ ಬಣ್ಣವಾಗಿ ಹಾಕಿಕೊಂಡು 'ಲವ್ ಯೂ ಇಂಡಿಯಾ' ಎಂದು ಪೋಸ್ಟ್ ಮಾಡಿದ್ದಾರೆ. ಜೊತೆ ಇಡೀ ಕುಟುಂಬದ ಜೊತೆ ಬಿಪಾಶ ಇಂಡಿಯಾ-ಪಾಕಿಸ್ತಾನ ಪಂದ್ಯವನ್ನ ವೀಕ್ಷಿಸಿದ್ದಾರೆ.

ಗ್ರೇಟ್ ವಿನ್ ಇಂಡಿಯಾ
ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಭಾರತದ ಗೆಲುವನ್ನ ಗ್ರೇಟ್ ಎಂದು ಬಣ್ಣಿಸಿದ್ದಾರೆ ಬಾಲಿವುಡ್ ನಟ ಅನಿಲ್ ಕಪೂರ್. ಪಂದ್ಯದ ಕೆಲವು ಚಿತ್ರಗಳನ್ನ ಶೇರ್ ಮಾಡಿ ಭಾರತ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಭಾರತಕ್ಕೆ ವಿಶ್ ಮಾಡಿದ ಭಾರತ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಟೀಂ ಇಂಡಿಯಾಗೆ ವಿಶ್ ಮಾಡಿದ್ದಾರೆ. ಭಾರತ ತಂಡಕ್ಕೆ ಭಾರತ್ ತಂಡದಿಂದ ಶುಭಾಶಯ ತಿಳಿಸಿದ್ದಾರೆ.

ಪಾಕ್ ಗೆ ಟಕ್ಕರ್ ಕೊಟ್ಟ ರಿತೇಶ್
ಭಾರತ-ಪಾಕ್ ಪಂದ್ಯಕ್ಕೂ ಮುನ್ನಾ ಪಾಕಿಸ್ತಾನ ಮಾಧ್ಯಮಗಳು ಎಲ್ಲೆ ಮೀರಿ ವರ್ತಿಸಿದ್ದವು. ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಂತೆ ಕಾಣುವ ವ್ಯಕ್ತಿಯ ಬಳಸಿಕೊಂಡು ಭಾರತಕ್ಕೆ ಅವಹೇಳನ ಮಾಡುವ ರೀತಿ ಜಾಹೀರಾತು ನೀಡಿತ್ತು. ಪಂದ್ಯ ಮುಗಿದ ಬಳಿಕ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ 'ಅಭಿನಂದನ್ ಹಿಂದೂಸ್ತಾನ್' ಎಂದು ಪೋಸ್ಟ್ ಹಾಕಿ ಟಕ್ಕರ್ ನೀಡಿದ್ದಾರೆ.


Click it and Unblock the Notifications











