»   » ಕಬಾಲಿ 'ಬೆಂಕಿ' ಯಲ್ಲಿ ಚಳಿ ಕಾಯಿಸಿಕೊಂಡ ಸ್ಟಾರ್ ಗಳು

ಕಬಾಲಿ 'ಬೆಂಕಿ' ಯಲ್ಲಿ ಚಳಿ ಕಾಯಿಸಿಕೊಂಡ ಸ್ಟಾರ್ ಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಬಾಲಿ -ರಜನಿಕಾಂತ್ 'ನೆರಪ್ಪು' (ಬೆಂಕಿ) ಬಳಸಿಕೊಂಡು ಎಲ್ಲಾ ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು, ಸ್ಟಾರ್ ಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಜನಿ ಜತೆಗಿನ ಚಿತ್ರಗಳು, ವಿಡಿಯೋಗಳು ಒಂದೊಂದಾಗಿ ಹೊರಬರುತ್ತಿವೆ. ಒಟ್ಟಾರೆ, ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಟ್ರೆಂಡ್ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ. ಸೆಲೆಬ್ರಿಟಿಗಳ ಟ್ವೀಟ್ ಗಳತ್ತ ಇಣುಕು ನೋಟ ಇಲ್ಲಿದೆ.

ಕಾಲಿವುಡ್, ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಅಲ್ಲದೆ ಮಾಲಿವುಡ್ ಕೂಡಾ ಬೆಂಕಿಯಲ್ಲಿ ಬೇಯುತ್ತಿವೆ. ಬೆಂಕಿಯಲ್ಲಿ ಹೂವು ಅರಳಿಸುವ ಕಲೆ ಗೊತ್ತಿದ್ದವರು ಗೆಲ್ಲುತ್ತಾರೆ. ಮಿಕ್ಕವರು ಚಳಿ ಕಾಯಿಸಿಕೊಂಡು ತೃಪ್ತರಾಗುತ್ತಿದ್ದಾರೆ. [ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

ಒಟ್ಟಾರೆ, ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಟ್ರೆಂಡ್ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ. ಕಬಾಲಿ ಎಂಬ ಬೆಂಕಿ ಯಾರ ಮನೆಯ ಒಲೆ ಉರಿಸುವುದೋ, ಛಾವಣಿ ಉರಿಸುವುದೋ ಯಾರ ಹೊಟ್ಟೆ ಉರಿಸುವುದೋ 'ಕಪಾಲೇಶ್ವರ' ನೇ ಬಲ್ಲ.

ಕಬಾಲಿಯಲ್ಲಿ ರಜನಿ ಸೂಪರ್ ಆದರೆ, ಚಿತ್ರ ಓಕೆ ಓಕೆ ಎಂದು ಸದ್ಯಕ್ಕೆ ಒನ್ ಲೈನ್ ವಿಮರ್ಶೆ ಸಿಕ್ಕಿದೆ. ಆದರೆ, ಕಬಾಲಿ ಮಾರುಕಟ್ಟೆ ವಿಸ್ತೀರ್ಣ ಹಬ್ಬಿರುವುದು ನೋಡಿದರೆ, ಚಿತ್ರ ಗೆಲ್ಲುವುದು ಗ್ಯಾರಂಟಿ. ಆದರೆ, ಕಬಾಲಿ ಟ್ರೆಂಡ್ ಮುಂದೆ ಯಾರಿಗೆ ಲಾಭ ತರಲಿದೆ ಕಾದು ನೋಡಬೇಕಿದೆ.

ಸ್ಟಾರ್ ಗಳ ಕೈ ಸೇರಿದ ವಿತರಣೆ ಹಕ್ಕು

ಕನ್ನಡದಲ್ಲಿ ಸ್ಟಾರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕಬಾಲಿ ವಿತರಣೆ ಹಕ್ಕು ತೆಗೆದುಕೊಂಡು ದುಡ್ಡು ಮಾಡುತ್ತಿದ್ದಾರೆ. ಮಲಯಾಳಂ ನಲ್ಲಿ ಸ್ಟಾರ್ ನಟ ಮೋಹನ್ ಲಾಲ್ ಅವರ ಮ್ಯಾಕ್ಸ್ ಲ್ಯಾಬ್ ಕೈಗೆ ವಿತರಣೆ ಹಕ್ಕು ಸಿಕ್ಕಿದೆ. ಹೀಗಾಗಿ ಚಿತ್ರ ಮೊದಲ ಮೂರು ದಿನಗಳಲ್ಲಿ ನಿರ್ಮಾಪಕರ ಜೇಬು ತುಂಬಿಸಿದರೆ, ಮಿಕ್ಕ ದಿನಗಳಲ್ಲಿ ವಿತರಕರ ಕೈ ಹಿಡಿಯಲಿದೆ.

ಕರ್ನಾಟಕ ಅಲ್ಲದೆ ಕೇರಳದಲ್ಲೂ ಹವಾ ಎದ್ದಿದೆ

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಸ್ಕ್ರೀನ್ ಸಿಗುವುದು ಕಷ್ಟ. ಅಂಥದ್ದರಲಲ್ಲಿ 400ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕಬಾಲಿ ಪ್ರದರ್ಶನ ಕಾಣುತ್ತಿದೆ. ಕೇರಳದಲ್ಲಿ 306 ಸ್ಕ್ರೀನ್ ನಲ್ಲಿ ತೆರೆ ಕಂಡಿದ್ದು, ಸಣ್ಣ ಪುಟ್ಟ ಮಾರುಕಟ್ಟೆ ಇರುವ ಸ್ಯಾಂಡಲ್ ವುಡ್ ಹಾಗೂ ಮಾಲಿವುಡ್ ಗೆ ಕಬಾಲಿ ವರವಾಗಬಲ್ಲದು. ಆದರೆ, ಕಬಾಲಿಯಿಂದ ಬಂದ ಲಾಭ ಯಾವ ರೀತಿ ಖರ್ಚಾಗುತ್ತದೆ ಎಂಬುದು ಮುಖ್ಯ.

ಸ್ಟಾರ್ ನಟ ಶಿವಕಾರ್ತಿಕೇಯನ್

ಸ್ಟಾರ್ ನಟ ಶಿವಕಾರ್ತಿಕೇಯನ್ ಅವರು ಕಬಾಲಿ ಜ್ವರದಲ್ಲಿ

ಸಂಗೀತಗಾರ ಅನಿರುಧ್ ರವಿಚಂದರ್

ಪೈರಸಿಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಕಬಾಲಿಗಿದೆ ಎಂದ ಸಂಗೀತಗಾರ ಅನಿರುಧ್ ರವಿಚಂದರ್

ಕ್ರಿಕೆಟರ್ ಸುರೇಶ್ ರೈನಾರಿಂದ ಟ್ವೀಟ್

ವೆಸ್ಟ್ ಇಂಡೀಸ್ ನಲ್ಲಿರುವ ಕ್ರಿಕೆಟರ್ ಸುರೇಶ್ ರೈನಾರಿಂದ ಟ್ವೀಟ್ ಮಾಡಿ ಕಬಾಲಿ ಹಬ್ಬ ಶುರುವಾಗಲಿದೆ ಎಂದಿದ್ದಾರೆ

ಬಹುಭಾಷಾ ನಟ ಜಯರಾಂ ರಿಂದ ಟ್ವೀಟ್

ಬಹುಭಾಷಾ ನಟ ಜಯರಾಂ ಅವರು ಚಿತ್ರಮಂದಿರದಲ್ಲಿ ಕುಳಿತು ವಿಡಿಯೋ ತೆಗೆದು ಟ್ವೀಟ್ ಮಾಡಿದ್ದಾರೆ.

ಸಂಗೀತಗಾರ ದೇವಿಶ್ರೀ ಪ್ರಸಾದ್

ಸಂಗೀತಗಾರ ದೇವಿಶ್ರೀ ಪ್ರಸಾದ್ ಕಬಾಲಿಗೆ ಶುಭ ಹಾರೈಸಿದ್ದು ಹೀಗೆ

ಶಿವ ಸರಣಿ ಪುಸ್ತಕ ಬರೆದ ಅಮಿಶ್ ತ್ರಿಪಾಠಿ

ಕಬಾಲಿ ಏಕೆ ಟ್ರೆಂಡ್ ಆಗುತ್ತಿದೆ ಎಂದು ಕೇಳಿದವನಿಗೆ ಶಿವ ಸರಣಿ ಪುಸ್ತಕ ಬರೆದ ಅಮಿಶ್ ತ್ರಿಪಾಠಿ ಟ್ವೀಟ್ ಮಾಡಿದ್ದು ಹೀಗೆ

ಪುದುಚೇರಿ ಗವರ್ನರ್ ಕಿರಣ್ ಬೇಡಿ ಅವರಿಂದ ಕಬಾಲಿ ಬಗ್ಗೆ ಟ್ವೀಟ್

ಪುದುಚೇರಿ ಗವರ್ನರ್ ಕಿರಣ್ ಬೇಡಿ ಅವರಿಂದ ಕಬಾಲಿ ಬಗ್ಗೆ ಟ್ವೀಟ್

ಕಬಾಲಿ 'ಬೆಂಕಿ' ಯಲ್ಲಿ ಚಳಿ ಕಾಯಿಸಿಕೊಂಡ ಸ್ಟಾರ್ ಗಳು

ತಮಿಳು ಚಿತ್ರರಂಗದ ಈ ಪೀಳಿಗೆಯ ತಾರೆಗಳಾದ ಶಿವಕಾರ್ತಿಕೇಯನ್, ಅನಿರುಧ್, ಸಿದ್ದಾರ್ಥ್ ರಿಂದ ಕಬಾಲಿ ವೀಕ್ಷಣೆ

English summary
Kabali, the Rajinikanth starrer has created a huge wave not only in Kollywood, but also in all the other film industries. Many film stars, celebrities tweeting about #kabaliFDFs

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X