For Quick Alerts
  ALLOW NOTIFICATIONS  
  For Daily Alerts

  ಪಿ.ವಿ ಸಿಂಧಿಗೆ ಕಂಚಿನ ಪದಕ; ಸಿನಿ ತಾರೆಯರಿಂದ ಅಭಿನಂದನೆಗಳ ಮಹಾಪೂರ

  |

  ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ ವಿ ಸಿಂಧು ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21-13, 21-15 ನೇರ ಸೆಟ್​ಗಳಿಂದ ಮಣಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

  ಕಂಚಿನ ಪದಕಕ್ಕಾಗಿ ಭಾರತದ ಪಿ.ವಿ ಸಿಂಧು ಮತ್ತು ಚೀನದ ಆಟಗಾರ್ತಿ ಬಿಂಗ್ಜಿಯಾವೊ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಸಿಂಧು, ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದರು. ಮೊದಲ ಸುತ್ತನ್ನು ಗೆದ್ದ ಆತ್ಮ ವಿಶ್ವಾಸದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು 2ನೇ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದರು.

  ಅಷ್ಟು ಸುಲಭವಾಗಿ ಆಟ ಬಿಟ್ಟುಕೊಡದ ಚೀನಾದ ಬಿಂಗ್ಜಿಯಾವೊ ಮತ್ತೆ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 12-15ಅಂತರದಿಂದ ಬಿಂಗ್ಜಿಯಾವೊ ಅವರನ್ನು ಮಣಿಸಿ ಸಿಂದು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ ಸಿಂಧು ಒಲಂಪಿಕ್ ನಲ್ಲಿ ಭಾರತಕ್ಕಾಗಿ 2 ಪದಕ ತಂದುಕೊಟ್ಟು ದಾಖಲೆ ಮಾಡಿದ್ದಾರೆ.

  2016ರಲ್ಲಿ ನಡೆದ ರಿಯೋ ಒಲಂಪಿಕ್ ನಲ್ಲಿ ಪಿ.ವಿ ಸಿಂಧು ಬೆಳ್ಳಿ ಪದಕ ತಂದುಕೊಟ್ಟಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ದೇಶದ ಹೆಮ್ಮೆಯ ಆಟಗಾರ್ತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು ಮತ್ತು ಸಿನಿಮಾ ಗಣ್ಯರು ಪಿ.ವಿ ಸಿಂಧುಗೆ ಶುಭಾಶಯ ತಿಳಿಸುತ್ತಿದ್ದಾರೆ. ಯಾರ್ಯಾರು ವಿಶ್ ಮಾಡಿದ್ದಾರೆ ಇಲ್ಲಿದೆ ಮಾಹಿತಿ.

  ನಟಿ, ರಾಜಕಾರಣಿ ಸುಮಲತಾ ಅಂಬರೀಶ್

  ನಟಿ, ರಾಜಕಾರಣಿ ಸುಮಲತಾ ಅಂಬರೀಶ್

  "ಸತತ ಎರಡು ಒಲಂಪಿಕ್ಸ್'ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬುದು ಎಲ್ಲಾ ಭಾರತೀಯರ ಮನಸಲ್ಲಿ ನಿಮಗೆ ಶಾಶ್ವತ ಸ್ಥಾನ ತಂದುಕೊಟ್ಟಿದೆ. ಇಡೀ ದೇಶಕ್ಕೆ ಇಂತಃ ಸಂತಸ ತಂದುಕೊಟ್ಟಿದಕ್ಕೆ ನಿಮಗೆ ಧನ್ಯವಾದಗಳು ಪಿ.ವಿ ಸಿಂಧು. ನೂರು ಕೋಟಿ ಜನರಿಗೆ ಇಂದು ಸ್ಫೂರ್ತಿ ತುಂಬಿದ್ದಿರಿ"

  ನಟಿ ತಾಪ್ಸಿ ಪನ್ನು

  ನಟಿ ತಾಪ್ಸಿ ಪನ್ನು

  "ನಮ್ಮ ಹುಡುಗಿ ಮನೆಗೆ ಕಂಚಿನ ಪದಕ ತಂದಿದ್ದಾರೆ. ಸಾಧಿದ್ದಾರೆ. ಇದು ಸಂಭ್ರಮದ ಸಮಯ. ನಾವು ಸಂಭ್ರಮವನ್ನು ಆಚರಣೆ ಮಾಡಿ" ಎಂದು ನಟಿ ತಾಪ್ಸಿ ಪನ್ನು ಬರೆದುಕೊಂಡಿದ್ದಾರೆ.

  ರಿತೇಶ್ ದೇಶ ಮುಖ್

  ರಿತೇಶ್ ದೇಶ ಮುಖ್

  "ಭಾರತದ ಮಗಳ ನಂಬಲಾಗದ ಸಾಧನೆ. ಪಿ.ವಿ ಸಿಂಧು ಟೋಕಿಯೊ ಒಲಂಪಿಕ್ ನಲ್ಲಿ ನಿಮ್ಮ ಗೆಲವು ದೇಶಕ್ಕೆ ಹೆಮ್ಮೆ ತಂದಿದೆ. ಇನ್ನು ಹೆಚ್ಚಿನ ಶಕ್ತಿ ಸಿಗಲಿ. ಭಾರತಕ್ಕಾಗಿ 2 ಒಲಂಪಿಕ್ ಪದಕ ಗೆದ್ದ ಮೊದಲ ಮಹಿಳೆ. ಅಭಿನಂದನೆಗಳು" ಎಂದು ನಟ ರಿತೇಶ್ ದೇಶ್ ಮುಖ್ ಹೇಳಿದ್ದಾರೆ.

  ಪಾರುಲ್ ಯಾದವ್

  ಪಾರುಲ್ ಯಾದವ್

  "ನಟಿ ಪಾರುಲ್ ಯಾದವ್ ಪಿ.ವಿ ಸಿಂಧು ಆಟದ ದೃಶ್ಯವನ್ನು ಶೇರ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಒಲಂಪಿಕ್ ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಪಿ.ವಿ ಸಿಂಧು ಅವರಿಗೆ ಅಭಿನಂದನೆಗಳು. ಅತಿ ಶ್ರೇಷ್ಠ ಆಟಗಾರ್ತಿ" ಎಂದು ಹೇಳಿದ್ದಾರೆ.

  ಅಭಿಷೇಕ್ ಬಚ್ಚನ್

  ಅಭಿಷೇಕ್ ಬಚ್ಚನ್

  ಭಾರತಕ್ಕೆ ಕಂಚು ಗೆದ್ದ ಪಿ.ವಿ ಸಿಂಧುಗೆ ಅಭಿನಂದನೆಗಳು. ಒಲಂಪಿಕ್ ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ನೀವು ಭಾರತವನ್ನು ಹೆಮ್ಮೆ ಪಡಿಸಿದ್ದೀರಿ.

  ರಣದೀಪ್ ಹೂಡ

  ರಣದೀಪ್ ಹೂಡ

  "ಭಾರತೀಯ ಮಹಿಳೆಯರು ನಮಗೆ ದಾರಿ ತೋರುತ್ತಿದ್ದಾರೆ. ಒಲಂಪಿಕ್ ನಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳೆ" ಎಂದು ಟ್ವೀಟ್ ಮಾಡಿದ್ದಾರೆ.

  ದುಲ್ಕರ್ ಸಲ್ಮಾನ್

  ದುಲ್ಕರ್ ಸಲ್ಮಾನ್

  "ಅಭಿನಂದನೆಗಳು ಪಿ.ವಿ ಸಿಂಧು. ಯಾವಾಗಲು ಭಾರತಕ್ಕೆ ಹೆಮ್ಮೆ ತರುತ್ತೀರಿ" ಎಂದು ಮಲಯಾಳಂ ನಟ ದುಲ್ಕರ್ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

  ಸಾಹಿತಿ, ನಿರ್ದೇಶಕ ಕವಿರಾಜ್

  ಸಾಹಿತಿ, ನಿರ್ದೇಶಕ ಕವಿರಾಜ್

  "ನಿನ್ನೆ ಇಷ್ಟು ಕನ್ವಿಕ್ಷನ್ ಇಂದ ಆಡಿದ್ರೇ ಚಿನ್ನಾನೇ ಗೆಲ್ಬೋದಿತ್ತು. ಸಕ್ಕತ್ ಅಗ್ರೆಸಿವ್ ಆಟ ಸಿಂಧು. ನಿನ್ನೆಯ ಹತಾಶೆ ಇಂದು ಅಗ್ರೆಶನ್ ಆಗಿತ್ತು. ಇನ್ನೊಂದು ಕಂಚು" ಎಂದು ಕವಿರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  English summary
  Film stars congratulate to PV Sindhu for second successive Olympic medal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X