twitter
    For Quick Alerts
    ALLOW NOTIFICATIONS  
    For Daily Alerts

    370ನೇ ವಿಧಿ ರದ್ದು: ಸಿನಿಮಾ ತಾರೆಯರು ಹೇಳಿದ್ದೇನು?

    |

    ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಧಿಕೃತವಾಗಿ ಘೋಷಿಸುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ.

    ಸ್ವಾತಂತ್ರ್ಯ ನಂತರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿತ್ತು. ಜಮ್ಮು ಕಾಶ್ಮೀರ ಭಾರತದ ಗಣರಾಜ್ಯದ ಅಂಗವಾದರೂ, ಪ್ರತ್ಯೇಕ ಸಂವಿದಾನ, ಪ್ರತ್ಯೇಕ ಕಾನೂನು ಹೊಂದಬಹುದಿತ್ತು.

    ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಬೆಳಗ್ಗೆಯಿಂದ ಏನೇನಾಯ್ತು?

    ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲಿಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನು ಜಾರಿಯಲ್ಲಿತ್ತು. ಇದೀಗ, ಈ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. 'ಒಂದು ದೇಶ ಒಂದು ಕಾನೂನು' ಜಾರಿಯಾಗಿದೆ. ಕೇಂದ್ರ ಸರ್ಕಾರದ ಈ ನಡೆಗೆ ಸಿನಿಮಾ ಸ್ಟಾರ್ ಗಳು ಪ್ರತಿಕ್ರಿಯಿಸಿದ್ದಾರೆ. ಯಾವ ಸ್ಟಾರ್ ಏನಂದ್ರು? ಮುಂದೆ ಓದಿ....

    ಇಂಡಿಯಾ ಪದಕ್ಕೆ ಅರ್ಥ ಸಿಕ್ಕಿದೆ

    ಇಂಡಿಯಾ ಪದಕ್ಕೆ ಅರ್ಥ ಸಿಕ್ಕಿದೆ

    ''ನಮ್ಮ ತಾಯ್ನಾಡಿಗೆ ಇಂದು ನಿಜವಾಗಲೂ ಸ್ವಾತಂತ್ರ್ಯ ಸಿಕ್ಕಿದೆ. ನಮಗೆ ಸಿಕ್ಕಿದ್ದ ಸ್ವಾತಂತ್ರ್ಯ ಇಂದು ಸಂಪೂರ್ಣವಾಗಿದೆ. ಇಂಡಿಯಾ ಅಂದ್ರೆ 'ಒಂದು' ಎಂಬ ಪದಕ್ಕೆ ಇಂದು ನಿಜವಾದ ಅರ್ಥ ಸಿಕ್ಕಿದೆ'' ಎಂದು ಬಾಲಿವುಡ್ ನಟ, ಬಿಜೆಪಿ ಮುಖಂಡ ಪರೇಶ್ ರಾವಲ್ ಸಂತಸ ಹಂಚಿಕೊಂಡಿದ್ದಾರೆ.

    ಕಾಶ್ಮೀರಿಗಳ ಜೀವನ ಉತ್ತಮಗೊಳ್ಳುತ್ತೆ

    ಕಾಶ್ಮೀರಿಗಳ ಜೀವನ ಉತ್ತಮಗೊಳ್ಳುತ್ತೆ

    ''ಭವಿಷ್ಯದಲ್ಲಿ ಕಾಶ್ಮೀರಿನ ಜನರ ಜೀವನ ಉತ್ತಮಗೊಳ್ಳುತ್ತೆ ಎಂದು ನಾನು ಭಾವಿಸುತ್ತೇನೆ. ಇದೀಗ, ಅವರ ಜೊತೆ ಸಂಪರ್ಕ ಬೆಳೆಸಬಹುದು, ಆದ್ದರಿಂದ ಅವರು ಏನು ಹೇಳಲು ಬಯಸುತ್ತಾರೆಂದು ಕೇಳಬಹುದು'' ಎಂದು ನಟಿ ಗುಲ್ ಪನಾಗ್ ಟ್ವೀಟ್ ಮಾಡಿದ್ದಾರೆ.

    ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?

    ನನ್ನ ಜೀವನದ ಅತ್ಯುತ್ತಮ ಸುದ್ದಿ

    ನನ್ನ ಜೀವನದ ಅತ್ಯುತ್ತಮ ಸುದ್ದಿ

    ''ಕಾಶ್ಮೀರದ ಕುರಿತು ಅತ್ಯುತ್ತಮ ಸುದ್ದಿಯನ್ನ ಕೇಳುವುದರ ಜೊತೆ ನನ್ನ ನ್ಯೂಯಾರ್ಕ್ ದಿನ ಪ್ರಾರಂಭವಾಗಿದೆ. ಶುಭಾಶಯ ಭಾರತ'' ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ. ಅದಕ್ಕೂ ಮುಂಚೆ ಭಾನುವಾರ ''ಕಾಶ್ಮೀರದ ಸಮಸ್ಯೆಗೆ ಪರಿಹಾರ ಪ್ರಾರಂಭವಾಗಿದೆ'' ಎಂದು ಟ್ವೀಟ್ ಮಾಡಿದ್ದರು.

    ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

    ಶಾಂತಿಯ ಕಾಶ್ಮೀರಕ್ಕಾಗಿ ಪ್ರಾರ್ಥನೆ

    ಶಾಂತಿಯ ಕಾಶ್ಮೀರಕ್ಕಾಗಿ ಪ್ರಾರ್ಥನೆ

    ''ಕಾಶ್ಮೀರಕ್ಕೆ ಶಾಂತಿಯುತ ಬೆಳವಣಿಗೆ ಮತ್ತು ಸಮೃದ್ದಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಕಾಶ್ಮೀರ ಮತ್ತು ಕಾಶ್ಮೀರಿಗಳಿಗಾಗಿ ನಮ್ಮ ಪ್ರಾರ್ಥನೆ'' ಎಂದು ನಟಿ ರವೀನಾ ಟಂಡನ್ ಟ್ವೀಟ್ ಮಾಡಿದ್ದಾರೆ.

    English summary
    Bollywood actors anupam kher, paresh rawal, raveena tandon and kannada actor jaggesh react about Article 370 Scrapped.
    Monday, August 5, 2019, 19:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X