ಸಲಿಂಗಕಾಮ ಅಪರಾಧವಲ್ಲ: ಸಿನಿತಾರೆಯರು ಏನಂದ್ರು.?

By Bharath Kumar

'ಸಲಿಂಗಕಾಮ ಅಪರಾಧ' ಎಂದು ಒಂದು ವರ್ಗ ವಿರೋಧಿಸಿದ್ದರೇ, ಮತ್ತೊಂದು ವರ್ಗ 'ಸಲಿಂಗಕಾಮ ಸಕ್ರಮ' ಎಂದು ಹೋರಾಟ ಮಾಡುತ್ತಿತ್ತು. ಇದೀಗ ಸುಮಾರು 160 ವರ್ಷಗಳಷ್ಟು ಹಳೆಯ ಕಾನೂನನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸೆಕ್ಷನ್ 377 ರದ್ದು ಗೊಳಿಸಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಸಲಿಂಗಕಾಮವನ್ನ ಕಾನೂನಾತ್ಮಕವನ್ನಾಗಿ ಮಾಡಬೇಕು ಎಂದು ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದ ಎಲ್‌ಜಿಬಿಟಿಜಿ (ಸಲಿಂಗಕಾಮ) ಹೋರಾಟಗಾರರಿಗೆ ಕೊನೆಗೂ ಜಯ ಸಿಕ್ಕಿದೆ.

ಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯ

ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಬಗ್ಗೆ ಚಿತ್ರರಂಗ ಏನು ಹೇಳುತ್ತೆ. ಈ ಬಗ್ಗೆ ಸಿನಿ ಕಲಾವಿದರ ಅಭಿಪ್ರಾಯವೇನು.? ಪಾರೂಲ್, ಪಾರ್ವತಿ ಮೆನನ್, ಆರ್.ಜೆ ನೇತ್ರಾ ಸೇರಿದಂತೆ ಹಲವರು ಮಾತನಾಡಿದ್ದಾರೆ. ಯಾರು ಏನಂದ್ರು ಎಂಬುದನ್ನ ಮುಂದೆ ಓದಿ....

ತುಂಬಾ ಖುಷಿ ಕೊಟ್ಟಿದೆ

ತುಂಬಾ ಖುಷಿ ಕೊಟ್ಟಿದೆ

''ತುಂಬಾ ವರ್ಷಗಳಿಂದ ಸಲಿಂಗಕಾಮಕ್ಕೆ ಬೇರೆ ದೇಶಗಳಲ್ಲಿಯೂ ಕಾನೂನಾತ್ಮಕವಾಗಿ ಒಪ್ಪಿಗೆ ಸಿಕ್ಕಿದೆ. ಭಾರತದಲ್ಲಿ ಈಗ ಆಗಿರುವುದು ತುಂಬ ಒಳ್ಳೆ ನಿರ್ಧಾರ. ಇದನ್ನ ಯಾರೂ ಸ್ವಯಂಪ್ರೇರಿತವಾಗಿ ಮಾಡುವುದಿಲ್ಲ. ಹುಟ್ಟಿನಿಂದಲೇ ಕೆಲವರು ಹಾಗೆ ಇರ್ತಾರೆ. ಅದನ್ನ ತಡೆಯೋಕೆ ಆಗಲ್ಲ. ಪ್ರೀತಿಗೆ ಬೌಂಡರಿ ಹಾಕೋದು ತಪ್ಪು. ಮನುಷ್ಯ ಯಾವ ರೀತಿ ಹುಟ್ಟಿರೋತಾನೋ ಅದೇ ರೀತಿ ಬದುಕೋಕೆ ಬಿಡೋದು ಒಳ್ಳೆಯದು. ಹಾಗಾಗಿ ಈ ತೀರ್ಪು ತುಂಬಾ ಖುಷಿ ಕೊಟ್ಟಿದೆ'' ಎಂದು ಆರ್.ಜೆ ನೇತ್ರಾ ತಿಳಿಸಿದ್ದಾರೆ.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಸುಪ್ರೀಂ ಆದೇಶ ಸ್ವಾಗತಿಸಲೇಬೇಕು

ಸುಪ್ರೀಂ ಆದೇಶ ಸ್ವಾಗತಿಸಲೇಬೇಕು

'ಸಲಿಂಗಕಾಮ ಎನ್ನುವುದು ಬಹಳ ಹಿಂದಿನಿಂದಲೂ ಇದೆ. ರಾಜರು ಕಾಲದಲ್ಲೂ ಇದು ಇತ್ತು. ಎಲ್ಲರೂ ಇದನ್ನ ಈಗ ಬಂದಿದೆ ಅಂದುಕೊಂಡಿದ್ದಾರೆ. ಯಾರನ್ನ ಯಾರು ಬೇಕಾದರೂ ಪ್ರೀತಿ ಮಾಡಬಹುದು. ಅದು ಅವರ ಆ ಹಕ್ಕು. ಅವರ ಮನಸ್ಥಿತಿ. ಪ್ರೀತಿ ಬಾಂಧವ್ಯ ಯಾರ ನಡುವೆ ಬೇಕಾದರೂ ಬೆಳೆಯಬಹುದು. ಸುಪ್ರೀಂ ಕೋರ್ಟ್ ಆದೇಶವನ್ನ ನಾನು ಮಾತ್ರವಲ್ಲ ನಾವೆಲ್ಲರೂ ಸ್ವೀಕರಿಸಲೇಬೇಕು' ಎಂದು ನಿರ್ದೇಶಕಿ ರೂಪ ಅಯ್ಯರ್ ತಿಳಿಸಿದ್ದಾರೆ.

ಪಾರೂಲ್ ಏನಂದ್ರು.?

ಪಾರೂಲ್ ಏನಂದ್ರು.?

ಸೆಕ್ಷನ್ 377 ತೀರ್ಪು: ನಮ್ಮ ಸುತ್ತ ಒಳ್ಳೆಯ ವಿಷ್ಯಗಳು ನಡೆಯುತ್ತಿದೆ'' ಎಂದು ನಟಿ ಪಾರೂಲ್ ಯಾದವ್ ತಮ್ಮ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ ಜಿಬಿಟಿ ಅಂದರೇನು, ಕಾಮನಬಿಲ್ಲಿನ ಬಾವುಟ ಏಕೆ?

ಪಾರ್ವತಿ ಮೆನನ್ ಸ್ವಾಗತ

ಪಾರ್ವತಿ ಮೆನನ್ ಸ್ವಾಗತ

ಸೆಕ್ಷನ್ 377ರ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನ ನಟಿ ಪಾರ್ವತಿ ಮೆನನ್ ಸ್ವಾಗತಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ತೀರ್ಪನ್ನ ವಲ್ ಕಮ್ ಮಾಡಿದ್ದಾರೆ.

ಬಾಲಿವುಡ್ ಹೆಚ್ಚಿದ ಸಂಭ್ರಮ

ಬಾಲಿವುಡ್ ಹೆಚ್ಚಿದ ಸಂಭ್ರಮ

ಇನ್ನು ಕನ್ನಡ ತಾರೆಯರು ಮಾತ್ರವಲ್ಲ, ಅತ್ತ ಬಾಲಿವುಡ್ ನಲ್ಲಿ ನಿರ್ಮಾಕಪ ಕರಣ್ ಜೋಹರ್, ನಟ ಆಯುಷ್ಮಾನ್ ಖುರಾನಾ, ಸ್ವರ ಭಾಸ್ಕರ್, ಕೊಂಕನಾ ಸೇನ್ ಶರ್ಮಾ ಸೇರಿದಂತೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Supreme Court finally scrapped Section 377 thereby legalising gay love. Among those cheering the verdict are people from the Kannada film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X