ಕಿಚ್ಚ ಸುದೀಪ್ ಬರ್ತಡೇಗೆ ಶುಭ ಕೋರಿದ ಕಲಾಬಂಧುಗಳು

ಈ ವರ್ಷ ಸುದೀಪ್ ಅಭಿಮಾನಿಗಳಿಗೆ ಡಬಲ್ ಧಮಾಕ. ದೇಶಾದ್ಯಂತ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದರೆ, ಸ್ಯಾಂಡಲ್ ವುಡ್ ನಲ್ಲಿ ಗಣೇಶನ ಉತ್ಸವದ ಜೊತೆ ಕಿಚ್ಚೋತ್ಸವವನ್ನ ಕೂಡ ಸೆಲೆಬ್ರೇಟ್ ಮಾಡಲಾಗುತ್ತಿದೆ.

ಹೌದು, ಇಂದು ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟುಹಬ್ಬ. ಇಂಡಸ್ಟ್ರಿಯಲ್ಲಿ ಸ್ನೇಹಜೀವಿ ಎನಿಸಿಕೊಂಡಿರುವ 'ಮಾಣಿಕ್ಯ'ನಿಗೆ ಕಲಾಬಂಧುಗಳು ಶುಭ ಕೋರಿದ್ದಾರೆ.

ಕನ್ನಡ ಇಂಡಸ್ಟ್ರಿಯ ಜೊತೆ ಬೇರೆ ಇಂಡಸ್ಟ್ರಿಯ ಕಲಾವಿದರು ಮತ್ತು ಕಲಾವಿದರ ಅಭಿಮಾನಿಗಳು ವಿಶ್ ಮಾಡಿರುವುದು ವಿಶೇಷ. ಹಾಗಿದ್ರೆ, ಸುದೀಪ್ ಬರ್ತಡೇಗೆ ಶುಭ ಕೋರಿದ ಸೆಲೆಬ್ರಿಟಿಗಳು ಯಾರು?

ನಲ್ಮೆಯ ಸಹೋದರ...

ನಲ್ಮೆಯ ಸಹೋದರ...

ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲ ಕಲಾವಿದರ ಜೊತೆಯಲ್ಲಿ ಆತ್ಮೀಯ ಒಡನಾಟ ಹೊಂದಿರುವ ನಟ ಜಗ್ಗೇಶ್. ಸುದೀಪ್ ಅವರ ಬಗ್ಗೆ ವಿಶೇಷ ಕಾಳಜಿ ತೋರಿಸುವ ಜಗ್ಗೇಶ್ ಕಿಚ್ಚನ ಬರ್ತಡೇಗೆ ಟ್ವಿಟ್ಟರ್ ಬಲ್ಲಿ ವಿಶ್ ಮಾಡಿದ್ದಾರೆ. ''ನಲ್ಮೆಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಷಯಗಳು ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ...'' ಎಂದಿದ್ದಾರೆ.

ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ

ವರದನಾಯಕ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದ ಚಿರಂಜೀವಿ ಸರ್ಜಾ ಸಿಸಿಎಲ್ ನಲ್ಲೂ ಒಟ್ಟಿಗೆ ಕ್ರಿಕೆಟ್ ಆಡಿದ್ದಾರೆ. ಅದನ್ನ ಬಿಟ್ಟು ಸುದೀಪ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಚಿರು ಸರ್ಜಾ ಕೂಡ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

ವಸಿಷ್ಠ ಸಿಂಹ ಶುಭಾಶಯ

ವಸಿಷ್ಠ ಸಿಂಹ ಶುಭಾಶಯ

ಕನ್ನಡದ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ಅವರು ಅಭಿನಯ ಚಕ್ರವರ್ತಿಯ ಜನುಮದಿನಕ್ಕೆ ಶುಭಕೋರಿದ್ದಾರೆ. ಬಾದ್ ಶಾ ಸುದೀಪ್ ಅವರ ಜೀವನದಲ್ಲಿ ಸಂತೋಷ, ಆರೋಗ್ಯ, ಎಲ್ಲವೂ ಸಿಗಲಿ ಎಂದು ಹಾರೈಸಿದ್ದಾರೆ.

ಸಿಂಪಲ್ ಸುನಿ ವಿಶ್

ಸಿಂಪಲ್ ಸುನಿ ವಿಶ್

''ಸ್ವಾತಿಮುತ್ತಿನಲ್ಲೇ ಆಟೋಗ್ರಾಫ್ ಹಾಕಿದ ಕಿಚ್ಚ, ಹುಚ್ಚ, ನಂದಿ ,ರನ್ನ, ಚಂದು, ನಲ್ಲ ಚಂದನವನದ ಪೈಲ್ವಾನ್ @KicchaSudeep ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ... ಸೆಪ್ಟೆಂಬರ್ 12 ರಂದು ಮತ್ತೊಂದು ಹುಟ್ಟುಹಬ್ಬ "ಪೈಲ್ವಾನ್" ರಾರಾಜಿಸಲಿ'' ಎಂದು ಸಿಂಪಲ್ ಸುನಿ ವಿಶ್ ಮಾಡಿದ್ದಾರೆ.

ರಕ್ಷಿತಾ ಪ್ರೇಮ್ ವಿಶ್

ರಕ್ಷಿತಾ ಪ್ರೇಮ್ ವಿಶ್

ಡಾರ್ಲಿಂಗ್ ಕಿಚ್ಚ ಸುದೀಪ್ ಅವರಿಗೆ ನಿರ್ದೇಶಕ ಪ್ರೇಮ್ ವಿಶ್ ಮಾಡಿದ್ದಾರೆ. ಪ್ರೇಮ್ ಜೊತೆಗೆ ಪ್ರೇಮ್ ಅವರ ಪತ್ನಿ ರಕ್ಷಿತಾ ಪ್ರೇಮ್ ಕೂಡ ಶುಭಾಶಯ ತಿಳಿಸಿದ್ದಾರೆ.

ನಿರ್ದೇಶಕ ರಘುರಾಮ್

ನಿರ್ದೇಶಕ ರಘುರಾಮ್

''ಅಭಿಮಾನಿಗಳ ನಂದಾ ದೀಪ ನಮ್ಮಕಿಚ್ಚ ಸುದೀಪ, ಇಂದು ನಿಮ್ಮ ಹುಟ್ಟು ಹಬ್ಬ. ದೇವರು ಆಶೀರ್ವದಿಸಲಿ ನಿಮಗೆ ಕೊಟ್ಟು ಒಳ್ಳೆ ಆರೋಗ್ಯ ಆಯಸ್ಸು ಮತ್ತು ಶ್ರೇಯಸ್ಸು .ಘಂಟಾಘೋಷವಾಗಿ ಹೇಳ್ತೀನಿ ನೀವೇ ಈ ನಮ್ಮ ಕರುನಾಡ one & only BigBossu..'' ಎಂದು ನಿರ್ದೇಶಕ ರಘುರಾಮ್ ಶುಭ ಕೋರಿದ್ದಾರೆ.

ಪರಭಾಷೆ ಫ್ಯಾನ್ಸ್ ಕ್ಲಬ್

ಪರಭಾಷೆ ಫ್ಯಾನ್ಸ್ ಕ್ಲಬ್

ಕೇವಲ ಸ್ಟಾರ್ ನಟರು ಮಾತ್ರವಲ್ಲದೇ, ಬೇರೆ ಇಂಡಸ್ಟ್ರಿಯ ಅಭಿಮಾನಿ ಕ್ಲಬ್ ಗಳು ಕೂಡ ಸುದೀಪ್ ಗೆ ವಿಶ್ ಮಾಡಿವೆ. ತೆಲುಗು ವಿಜಯ್ ಫ್ಯಾನ್ಸ್, ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಕ್ಲಬ್, ಒನ್ಲಿ ಯಶ್, ಯಶ್ ಟ್ರೆಂಡ್, ನಿಖಿಲ್ ಕುಮಾರ್ ಫ್ಯಾನ್ಸ್, ಗಣೇಶ್ ಟ್ರೆಂಡ್ಸ್, ತಮಿಳು ನಟ ಅಜಿತ್ ಫ್ಯಾನ್ಸ್ ಹೀಗೆ ಅನೇಕರು ವಿಶ್ ಮಾಡಿದ್ದಾರೆ.

More from Filmibeat

English summary
Kannada actor jaggesh, vasishta simha, prem, raghuram, simple suni wished to kiccha sudeep for his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X