twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಪ್ರಿಯರಿಗೆ ಮತ್ತೆ ನಿರಾಸೆ: ಸೆಪ್ಟೆಂಬರ್ ಅಂತ್ಯದವರೆಗೂ ಚಿತ್ರಮಂದಿರ ಲಾಕ್‌!

    |

    ಲಾಕ್‌ಡೌನ್‌ ಹಿನ್ನೆಲೆ ಐದಾರು ತಿಂಗಳಿಂದ ಮುಚ್ಚಲ್ಪಟ್ಟಿರುವ ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್‌ಗಳ ಇನ್ನೂ ಒಂದು ತಿಂಗಳು ತೆರೆಯುವಂತಿಲ್ಲ. ನಿನ್ನೆಯಷ್ಟೇ (ಆಗಸ್ಟ್ 29) ಕೇಂದ್ರದಿಂದ ಅನ್‌ಲಾಕ್‌4 ಮಾರ್ಗಸೂಚಿ ಪ್ರಕಟವಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ಚಿತ್ರಮಂದಿರ ತೆರೆಯದಂತೆ ಸೂಚಿಸಿದೆ. ಈ ಮೂಲಕ ಕನ್ನಡ ಕಲಾಭಿಮಾನಿಗಳು ಹಾಗೂ ಥಿಯೇಟರ್ ಮಾಲಿಕರು ನಿರಾಸೆಯಾಗಿದ್ದಾರೆ.

    Recommended Video

    ಆ ಒಂದು ಸೆಟ್ಟಿಂದ ಒಂದೂವರೆ ಕೋಟಿ ಲಾಸ್ ಆಯ್ತು ನಮಗೆ | R Chandru | Filmibeat Kannada

    150ಕ್ಕೂ ಹೆಚ್ಚು ದಿನಗಳಿಂದ ಚಿತ್ರಮಂದಿರ ಮುಚ್ಚಿರುವುದರಿಂದ ಸಹಜವಾಗಿ ಥಿಯೇಟರ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಬಿಡುಗಡೆ ಇಲ್ಲದೇ ನಿರ್ಮಾಪಕರು ಸಹ ಕಂಗಾಲಾಗಿದ್ದಾರೆ. ಕೆಲವು ಚಿತ್ರಗಳು ಮಾತ್ರ ಆನ್‌ಲೈನ್ ಬಿಡುಗಡೆ ಕಂಡಿದೆ.

    ಅನ್‌ಲಾಕ್‌ 4 ಮಾರ್ಗಸೂಚಿ: ಶಾಲೆ, ಚಿತ್ರಮಂದಿರ ತೆರೆಯಲು ಒಪ್ಪಿಗೆ ಇಲ್ಲ

    ಚಿತ್ರಮಂದಿರ ತೆರೆಯಲು ಅನುಮತಿ ನೀಡಿ ಎಂದು ಒತ್ತಾಯಿಸಿ ನಟ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ ಅವರನ್ನು ಭೇಟಿ ಮಾಡಿ ವಿನಂತಿಸಿಕೊಂಡಿತ್ತು.

    Film theater Should Not Open till september End

    ರಾಜ್ಯ ಸರ್ಕಾರ ಸಹ ಸೆಪ್ಟೆಂಬರ್ ತಿಂಗಳಿನಿಂದ ಚಿತ್ರಮಂದಿರ ತೆರೆಯಲು ಅನುಮತಿ ನೀಡುವ ಬಗ್ಗೆ ಸಕಾರಾತ್ಮಕ ನಿರ್ಧಾರಕ್ಕೆ ಬಂದಿತ್ತು. ಆದರೆ, ಕೇಂದ್ರ ಮಾರ್ಗಸೂಚಿ ಮತ್ತೆ ನಿರಾಸೆ ಮೂಡಿಸಿದೆ.

    ಆರಂಭಿಕ ಹಂತದಲ್ಲಿ ಮಲ್ಟಿಫ್ಲೆಕ್ಸ್ ಗಳಿಗೆ ಅವಕಾಶ ಸಿಗವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮಲ್ಟಿಫ್ಲೆಕ್ಸ್ ಚಿತ್ರಮಂದಿರಕ್ಕೂ ಅನುಮತಿ ಸಿಕ್ಕಿಲ್ಲ.

    English summary
    Unlock 4 Guidelines: Film theaters should not open till september end.
    Monday, August 31, 2020, 9:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X